ರಾಜ್ಯದಲ್ಲಿ ಮದ್ಯ ನಿಷೇಧಿಸಬೇಕು ಎಂಬ ಬಿಜೆಪಿ ಶಾಸಕ ಸಿ.ಟಿ.ರವಿ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಮದ್ಯ ನಿಷೇಧ ಅಸಾಧ್ಯ. ಮದ್ಯ ನಿಷೇಧ ನಿರ್ಧಾರವು ಎಲ್ಲಿಯೂ ಯಶಸ್ವಿಯಾಗಿಲ್ಲ. ಗುಜರಾತನ್ನೇ ಗಮನಿಸಿ, ಅದೆಷ್ಟು ಪರಿಣಾಮಕಾರಿಯಾಗಿ ಮದ್ಯ ಮಾರಾಟದ ನಿಷೇಧ ಅನುಷ್ಟಾನಗೊಂಡಿದೆ ಎಂಬುದನ್ನೂ ಸ್ವತಃ ಪರಿಶೀಲಿಸಿ ಎಂದರು. ಅಲ್ಲದೆ ಮದ್ಯ ನಿಷೇಧದ ಕುರಿತು ರಾಷ್ಟ್ರೀಯ ನೀತಿ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುವಂತೆ ಬಿಜೆಪಿಗೆ ಸಲಹೆ ನೀಡಿದರು. ‘ಈ ಕುರಿತು ರಾಷ್ಟ್ರೀಯ ನೀತಿ ರೂಪಿಸಿದರೆ, ಕರ್ನಾಟಕ ಅದನ್ನು ಬೆಂಬಿಸಲಿದೆ’ ಎಂದು ಹೇಳಿದರು.