ಕೆಪಿಎಂಇ ಮಸೂದೆ ಮಂಡನೆ; ಮಿಶ್ರ ಪ್ರತಿಕ್ರಿಯೆ

ಬಹಳ ವಿವಾದ, ಪ್ರತಿಭಟನೆ, ಮುಷ್ಕರ, ಆತಂಕಗಳ ನಂತರ ರಾಜ್ಯ ಸರ್ಕಾರ ನಿನ್ನೆ ಕರ್ನಾಟಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಹಳ ವಿವಾದ, ಪ್ರತಿಭಟನೆ, ಮುಷ್ಕರ, ಆತಂಕಗಳ ನಂತರ ರಾಜ್ಯ ಸರ್ಕಾರ ನಿನ್ನೆ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ತಿದ್ದುಪಡಿ ಮಸೂದೆಯನ್ನು ನಿನ್ನೆ ವಿಧಾನಸಭೆಯಲ್ಲಿ ಮಂಡಿಸಿತು. ಇದಕ್ಕೆ ವೈದ್ಯರು ಮತ್ತು ಕಾರ್ಯಕರ್ತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಮ್ಮ ಅನೇಕ ಬೇಡಿಕೆಗಳನ್ನು ಮಸೂದೆಯಲ್ಲಿ ಈಡೇರಿಸಲಾಗಿದೆ ಎಂದು ವೈದ್ಯರು ಸಮಾಧಾನಪಟ್ಟರೆ ಖಾಸಗಿಯಾಗಿ ವೈದ್ಯಕೀಯ ಸೇವೆ ಸಲ್ಲಿಸುವವರಿಗೆ ಪೂರಕವಾಗಿ ಇದೆ. ಮಸೂದೆಯಲ್ಲಿ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಒಕ್ಕೂಟದ ಅಧ್ಯಕ್ಷ ಡಾ.ಮದನ್ ಗಾಯಕ್ ವಾಡ್. 
ಇದೊಂದು ನಮಗೆ ಗೆಲುವಿನ ಮಸೂದೆಯಾಗಿದೆ. ಜೈಲು ಶಿಕ್ಷೆ ಮತ್ತು ಅಧಿಕಾರದ ಪುನಾರಚನೆಯಂತಹ ಹಲವು ವಿಷಯಗಳನ್ನು ಬಗೆಹರಿಸುವಲ್ಲಿ ಈ ಮಸೂದೆ ಮುಖ್ಯವಾಗಿದೆ. ತುರ್ತು ಸೇವೆಗಳಿಗೆ ಹಣ ಪಾವತಿ ಮತ್ತು ವಾರಸುದಾರರಿಗೆ ಮೃತದೇಹಗಳನ್ನು ಹಸ್ತಾಂತರಿಸುವ ಮೊದಲು ಹಣವನ್ನು ಪಾವತಿ ಮಾಡುವ ವಿಚಾರವನ್ನು ಮಸೂದೆಯಲ್ಲಿ ತಿಳಿಸಿಲ್ಲ. ಸೂಕ್ತ ಕಾಲದಲ್ಲಿ ಶುಲ್ಕವನ್ನು ಪಾವತಿಸುವ ಬಗ್ಗೆ ರೋಗಿಗಳು ಅರಿತುಕೊಂಡಿದ್ದಾರೆ ಎಂದು ಭಾವಿಸುತ್ತೇವೆ ಎನ್ನುತ್ತಾರೆ ಗಾಯಕ್ ವಾಡ್. 
ಭಾರತೀಯ ಆರೋಗ್ಯಸೇವೆ ಪೂರೈಕೆದಾರರ ಒಕ್ಕೂಟದ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ವೈದ್ಯರ ಬೇಡಿಕೆಗಳನ್ನು ಒಪ್ಪಿಕೊಂಡ ಮಸೂದೆ ಇದಾಗಿದೆ.
ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಲ್ಲಿಸಿದ ಬೇಡಿಕೆಗಳನ್ನೆಲ್ಲಾ ಈಡೇರಿಸಿದ್ದಾರೆ ಎಂದರು.
ರೋಗಿಗೆ ಆಸ್ಪತ್ರೆಯ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ನೀಡಲೇಬೇಕು ಎಂಬ ಮಸೂದೆಯಲ್ಲಿರುವ ಕಾನೂನನ್ನು ಆರೋಗ್ಯ ಕಾರ್ಯಕರ್ತ ಡಾ. ಸಿಲ್ವಿಯಾ ಕರ್ಪರಮ್ ಶ್ಲಾಘಿಸಿದ್ದಾರೆ. ಹಿಂದಿನ ಆಸ್ಪತ್ರೆ ಶುಲ್ಕ ಪಾವತಿಸದಿದ್ದರೂ ಕೂಡ ಮೃತ  ದೇಹವನ್ನು ವಾರಸುದಾರರಿಗೆ ನೀಡಬೇಕು ಎಂಬ ಕಾನೂನು ಒಳ್ಳೆಯದು ಎನ್ನುತ್ತಾರೆ ಡಾ.ಸಿಲ್ವಿಯಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com