ಕಲಬುರ್ಗಿ: ನಕಲಿ ಮಹಿಳಾ ವೈದ್ಯ ಪೋಲೀಸರ ವಶ

ವೈದ್ಯರ ಸೋಗಿನಲ್ಲಿದ್ದ ಮಹಿಳೆಯೊಬ್ಬರನ್ನು ಕಲಬುರ್ಗಿ ಪೋಲೀಸರು ಬಂಧಿಸಿದ್ದಾರೆ. ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಅಧೀಕ್ಷಕರಾದ ಡಾ.ಎಂ.ಆರ್.ಪೂಜಾರ್
ಕಲಬುರ್ಗಿ: ನಕಲಿ ವೈದ್ಯ ಮಹಿಳೆ ಪೋಲೀಸರ ವಶ
ಕಲಬುರ್ಗಿ: ನಕಲಿ ವೈದ್ಯ ಮಹಿಳೆ ಪೋಲೀಸರ ವಶ
ಕಲಬುರ್ಗಿ: ವೈದ್ಯರ ಸೋಗಿನಲ್ಲಿದ್ದ ಮಹಿಳೆಯೊಬ್ಬರನ್ನು ಕಲಬುರ್ಗಿ ಪೋಲೀಸರು ಬಂಧಿಸಿದ್ದಾರೆ. ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಅಧೀಕ್ಷಕರಾದ ಡಾ.ಎಂ.ಆರ್.ಪೂಜಾರ್ ಅವರು ಮಾತನಾಡಿ ಆಸ್ಪತ್ರೆಯ ಮೂರನೆಯ ಮಹಡಿಯಲ್ಲಿ ವಾರ್ಡ್ ಗಳಿಗೆ ಬೇಟಿ ನೀಡುವ ಸಮಯದಲ್ಲಿ , ವೈದ್ಯರ ಸಮವಸ್ತ್ರ ಧರಿಸಿದ್ದ ಮಹಿಳೆಯನ್ನು ಗಮನಿಸಿದ್ದಾರೆ, ಆದರೆ ಅವರಿಗೆ ಆಕೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದರು.
ಅವರು ಎಮ್ಆರ್ ಮೆಡಿಕಲ್ ಕಾಲೇಜಿನ 200 ಬೋಧಕ ಸಿಬ್ಬಂದಿಗಳಲ್ಲಿ ಆಕೆಯೂ ಒಬ್ಬಳಾಗಿರಬೇಕು ಅಥವಾ 100 ಹೌಸ್ ಸರ್ಜನ್ ಅಥವಾ ಪಿಜಿ ವಿದ್ಯಾರ್ಥಿಗಳಲ್ಲಿ ಒಬ್ಬರಾಗಬಹುದೆಂದು ಭಾವಿಸಿದರು.
ಆದರೆ ಅವರು ಎರಡನೇ ಮಹಡಿಗೆ ಬಂದಾಗ ಮತ್ತೆ ಆಕೆಯನ್ನು ನೋಡಿದ್ದಾರೆ. ಆಗ ಆಕೆ ಫೋನ್ ನಲ್ಲಿ ಸಂಭಾಷಣೆ ನಡೆಸುತ್ತಿದ್ದಳು. ಆಸ್ಪತ್ರೆ ನಿಯಮದ ಅನುಸಾರ ಕೆಲಸದ ವೇಳೆಯಲ್ಲಿ ಯಾವ ವೈದ್ಯರೂ ದೂರವಾಣಿ ಸಂಭಾಷಣೆ ನಡೆಸಬಾರದು. ಇದರಿಂದ ಅನುಮಾನಗೊಂಡ ಪೂಜಾರ ಅವರು ಆಕೆಯನ್ನು ತನ್ನ ಛೇಂಬರ್ ಗೆ ಕರೆದಿದ್ದಾರೆ.
ನಕಲಿ ವೈದ್ಯೆಯು ನಾಲ್ಕು-ಐದು ದಿಒನಗಳಿಂದಲೂ ಆಸ್ಪತ್ರೆಯಲ್ಲಿ ಇರುತ್ತಿದ್ದು ವಿಚಾರ ತಿಳಿದ ಪೂಜಾರ್ ಎಂ.ಬಿ.ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ಅದಾಗ ಪೋಲೀಸರು ಆಸ್ಪತ್ರೆಗೆ ಧಾವಿಸಿ ನಕಲಿ ವೈದ್ಯ ಮಹಿಳೆಯನ್ನು ವಶಕ್ಕೆ ಪಡೆದರು. ಪೋಲೀಸರು ತಿಳಿಸಿದಂತೆ ನಕಲಿ ವೈದ್ಯೆ ಹೆಸರು ಅಶ್ವಿನಿ ಎಂದಾಗಿದ್ದು ಆಕೆ ಮಾನಸಿಕ ಅಸ್ವಸ್ಥಳು. ಆಕೆಯ ಪೋಷಕರು ಹೇಳುವಂತೆ ಆಕೆ ಬಿಳಿ ಕೋಟು ಹಾಕಿ ಆಗಾಗ ಆಸ್ಪತ್ರೆಗಳಲ್ಲಿ ಅಲೆಯುತ್ತಾಳೆ. ಇದೀಗ ಪೋಲೀಸರು ಆಕೆಯನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com