ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾದ ವಿದೇಶಿ ಕರೆನ್ಸಿ
ರಾಜ್ಯ
32 ಲಕ್ಷ ರೂ.ವಿದೇಶಿ ಕರೆನ್ಸಿ ವಶಪಡಿಸಿಕೊಂಡ ಸುಂಕ ಅಧಿಕಾರಿಗಳು, ಓರ್ವನ ಬಂಧನ
ಕೇರಳದಿಂದ ಬಂದ ವ್ಯಕ್ತಿಯಿಂದ 32.25 ಲಕ್ಷ ರೂಪಾಯಿ ವಿದೇಶಿ ಕರೆನ್ಸಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ...
ಬೆಂಗಳೂರು: ಕೇರಳದಿಂದ ಬಂದ ವ್ಯಕ್ತಿಯಿಂದ 32.25 ಲಕ್ಷ ರೂಪಾಯಿ ವಿದೇಶಿ ಕರೆನ್ಸಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ನಿನ್ನೆ ನಡೆದಿದೆ.
ಲ್ಯಾಪ್ ಟಾಪ್ ಬ್ಯಾಗ್ ನಲ್ಲಿ ತುಂಬಿಸಿಕೊಂಡು ಬಂದು ಹಣವನ್ನು ದುಬೈಗೆ ಕಳುಹಿಸಲು ವ್ಯಕ್ತಿ ಯೋಜನೆ ಹಾಕಿಕೊಂಡಿದ್ದ. ಕೇರಳದ ಕೋಜಿಕ್ಕೋಡಿನ ಅಬ್ದುಲ್ ರಫೀಕ್ ಎಂಬಾತನನ್ನು ದುಬೈಗೆ ಎಮಿರೇಟ್ಸ್ ವಿಮಾನ ಇಕೆ 0569ನಲ್ಲಿ ಪ್ರಯಾಣಿಸುತ್ತಿದ್ದಾಗ ವಿಮಾನ ನಿಲ್ದಾಣದ ಸುಂಕ ಅಧಿಕಾರಿಗಳು ಬಂಧಿಸಿದ್ದಾರೆ.
ಸುಂಕ ಅಧಿಕಾರಿಗಳ ಮುಂದೆ ತಪಾಸಣೆಗೆ ಮುಂದಾಗದೆ ಹೋದಾಗ ಸಂಶಯ ಬಂದು ಅಧಿಕಾರಿಗಳು ಅಬ್ದುಲ್ ರಫೀಕ್ ನನ್ನು ತಡೆದರು. ಅವನ ಬಳಿಯಿದ್ದ ಬ್ಯಾಗನ್ನು ಪಡೆದು ತಪಾಸಣೆ ನಡೆಸಿದರು. ಆಗ ಆತನ ಲ್ಯಾಪ್ ಟಾಪ್ ನಲ್ಲಿ 32.25 ಲಕ್ಷ ರೂಪಾಯಿ ವಿದೇಶಿ ನೋಟುಗಳು ಸಿಕ್ಕಿದವು. ರಫೀಕ್ ಗೆ ಅಷ್ಟೊಂದು ವಿದೇಶಿ ಹಣ ಎಲ್ಲಿಂದ ಸಿಕ್ಕಿತು ಎಂಬ ಬಗ್ಗೆ ಸುಂಕ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ