ಬೆಂಗಳೂರು ಅಭಿವೃದ್ಧಿಗೆ ಬಿಡಿಎ ಮಾಸ್ಟರ್ ಪ್ಲಾನ್, ಎರಡು ಹೊಸ ರಿಂಗ್ ರಸ್ತೆಗಳು, ಮೆಟ್ರೋ ಮಾರ್ಗಗಳ ಜೋಡಣೆಗೆ ತಯಾರಿ

ಬೆಂಗಳುರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಅನ್ನು ರೂಪಿಸಿದ್ದು ಹೊಸದಾಗಿ ಎರಡು ರಿಂಗ್ ರಸ್ತೆಗಳು ಹಾಗು ಎರಡು ನೂತನ ಮೆಟ್ರೋ ಮಾರ್ಗಗಳ ಸೇರ್ಪಡೆಗೆ ಸೂಚಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)
ಬೆಂಗಳುರು: ಬೆಂಗಳುರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಅನ್ನು ರೂಪಿಸಿದ್ದು ಹೊಸದಾಗಿ ಎರಡು ರಿಂಗ್ ರಸ್ತೆಗಳು ಹಾಗು ಎರಡು ನೂತನ ಮೆಟ್ರೋ ಮಾರ್ಗಗಳ ಸೇರ್ಪಡೆಗೆ ಸೂಚಿಸಿದೆ. ತಾತ್ಕಾಲಿಕ ಪರಿಷ್ಕೃತ ಮಾಸ್ಟರ್ ಪ್ಲಾನ್ 2031 (ಆರ್ ಎಂಪಿ) ಅನು ಬಿಡಿಎ ನಿನ್ನೆ ಸಾರ್ವಜನಿಕರಿಗೆ ಬಿಡುಗಡೆಗೊಳಿಸಿದೆ. 
ಉದ್ದೇಶಿತ ಯೋಜನೆಯು ರಿಂಗ್ ರಸ್ತೆಗಳ ಬಳಿ ಮೆಟ್ರೋ ಮಾರ್ಗಗಳ ನಿರ್ಮಾಣ, ಸಿಲ್ಕ್ ಬೋರ್ಡ್-ಕೆ ಆರ್ ಪುರಂ (ಮೆಟ್ರೋ ಫೇಸ್ 2A) ಬಳಿ ಹೊಸ ರಿಂಗ್ ರಸ್ತೆ ನಿರ್ಮಾಣವನ್ನು ಹೊಂದಿದೆ.  "ಸಂಚಾರ ದಟ್ಟಣೆಗೆ ತಗ್ಗಿಸಲು ನಾವು ಸಂಪೂರ್ಣ ಯೋಜನೆಯನ್ನು ಮೆಟ್ರೋದೊಡನೆ ಸಂಪರ್ಕಿಸಲು ಉದ್ದೇಶಿಸುತ್ತೇವೆ. ನಾವು ಪ್ರಸ್ತಾಪಿಸಿದ ಇನ್ನೊಂದು ಪ್ರಮುಖ ಮೆಟ್ರೊ ಸಂಪರ್ಕವಾದ ಮೆಟ್ರೋ ಹಂತ 2A  ಕೆ ಆರ್ ಪುರಂನಿಂದ ಹೆಬ್ಬಾಳ-ಮಾಗಾಡಿ ರಸ್ತೆ-ಮೈಸೂರು ರಸ್ತೆಯ ಮಾರ್ಗ ವಿಸ್ತರಣೆಯಿಂದ ಸಂಪೂರ್ಣ ಹೊರ ವರ್ತುಲ ರಸ್ತೆಯನ್ನು ಮುಚ್ಚಬಹುದು. ಈ ಪ್ರಸ್ತಾವಿತ ಮಾರ್ಗದ ಬಗ್ಗೆ ಬಿಎಂಆರ್ ಸಿ ಎಲ್ ಉತ್ಸುಕರಾಗಿದ್ದು, ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿದೆ"  ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಉದ್ದೇಶಿಸಿರುವ ಬಿಡಿಎ ಈಗಿರುವ ಸುಮಾರು 6,000 ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು 15,000 ಗಳಿಗೆ ಏರಿಸಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಜನರನ್ನು ಹೆಚ್ಚು ಅವಲಂಬಿತರಾಗುವ?ಂತೆ ಮಾಡುವ ಪ್ರಸ್ತಾಪ ಇತ್ಟಿದೆ. ಈ ಪ್ರಕಾರ ಪ್ರಸ್ತುತ ಶೇ.48 ರಷ್ಟು ಸಾರ್ವಜನಿಕರಿಂದ ಶೇ. 68-70ರಷ್ಟು ಜನರನ್ನು ಸಾರ್ವಜನಿಕ ಸಾರಿಗೆಯತ್ತ ತಿರುಗಿಸಲು ಬಿಡಿಎ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com