ಕನ್ನಡದ ವೇದಿಕೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು: ಅನಂತ್ ಕುಮಾರ್

ಕನ್ನಡ ಸಾಹಿತ್ಯಕ್ಕಾಗಿ ಮೀಸಲಿರುವ ವೇದಿಕೆಯನ್ನು ಹುಸಿ ಜಾತ್ಯತೀತತೆ ಮತ್ತು ರಾಜಕೀಯ ವಿಷಯಗಳಿಗೆ ....
ಮೈಸೂರಿನಲ್ಲಿ ನಿನ್ನೆ 83ನೇ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಎನ್.ಅನಂತ್ ಕುಮಾರ್
ಮೈಸೂರಿನಲ್ಲಿ ನಿನ್ನೆ 83ನೇ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಎನ್.ಅನಂತ್ ಕುಮಾರ್
Updated on
ಮೈಸೂರು: ಕನ್ನಡ ಸಾಹಿತ್ಯಕ್ಕಾಗಿ ಮೀಸಲಿರುವ ವೇದಿಕೆಗಳನ್ನು ಹುಸಿ ಜಾತ್ಯತೀತತೆ ಮತ್ತು ರಾಜಕೀಯ ವಿಷಯಗಳಿಗೆ ಬಳಸಿಕೊಳ್ಳಬಾರದು ಎಂದು ಕೇಂದ್ರ ಸಚಿವ ಹೆಚ್.ಎನ್.ಅನಂತ್ ಕುಮಾರ್ ಹೇಳಿದ್ದಾರೆ.
ರಾಜಕೀಯ ವಿಷಯಗಳನ್ನು ಮಾತನಾಡುವುದಕ್ಕೆ ಹಲವು ವೇದಿಕೆಗಳಿವೆ. ಕನ್ನಡ ರಾಜಕೀಯಕ್ಕೆ ಮೀರಿದ ಭಾಷೆ. ಇದು ಕೇವಲ ಭಾಷೆ ಮಾತ್ರವಲ್ಲ, ಜಾತ್ಯತೀತತೆ, ಮನೋಭಾವನೆ ಮತ್ತು ರಾಜ್ಯದ 6.5 ಕೋಟಿ ಕನ್ನಡಿಗರ ಆತ್ಮಸಾಕ್ಷಿಗೆ ಸಂಬಂಧಪಟ್ಟ ವಿಷಯ ಎಂದರು.
ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ನಾವು ಆದಷ್ಟು ಜಾಗರೂಕರಾಗಿರಬೇಕು ಯಾಕೆಂದರೆ ಬೇರೆ ರಾಜ್ಯಗಳು ಮತ್ತು ದೇಶಗಳಲ್ಲಿರುವ ಕನ್ನಡಿಗರಿಗೆ ಇಂತಹ ಸಾಹಿತ್ಯ ವೇದಿಕೆಗಳಿಂದ ಉತ್ತಮ ಸಂದೇಶ ಹೋಗಬೇಕು. ಇದು ಕನ್ನಡ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರು ಮೈಸೂರು ರಾಜಮನೆತನದವರಿಗೆ ವಿಶೇಷ ಗೌರವವನ್ನು ನೀಡಬೇಕಾಗಿತ್ತು. ಮೈಸೂರು ಅರಮನೆ ಆವರಣದಿಂದ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಹೊರಟು ಅದಕ್ಕೆ ಪ್ರಮೋದಾ ದೇವಿ ಮತ್ತು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆಹ್ವಾನಿಸಬೇಕಾಗಿತ್ತು ಎಂದು ಸಚಿವ ಅನಂತ್ ಕುಮಾರ್ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com