ವನ್ಯಜೀವಿ ಮಂಡಳಿ ಸದಸ್ಯರಿಗೆ ಸಂರಕ್ಷಿತ ಅರಣ್ಯದೊಳಗೆ ಖಾಸಗಿ ವಾಹನ ಬಳಕೆಗೆ ಸರ್ಕಾರ ಅನುಮತಿ

ಅರಣ್ಯಾಧಿಕಾರಿಗಳು, ವನ್ಯಜೀವಿ ತಜ್ಞರು ಮತ್ತು ಕಾರ್ಯಕರ್ತರ ವಿರೋಧವಿದ್ದರೂ ಕೂಡ ನೋಂದಣಿಯಾಗಿರುವ ವನ್ಯಜೀವಿ ಮಂಡಳಿ .....
ಭೀಮಗಡ ಅಭಯಾರಣ್ಯದೊಳಗೆ ಹೋಗುವ ರಸ್ತೆ
ಭೀಮಗಡ ಅಭಯಾರಣ್ಯದೊಳಗೆ ಹೋಗುವ ರಸ್ತೆ

ಬೆಂಗಳೂರು: ಅರಣ್ಯಾಧಿಕಾರಿಗಳು, ವನ್ಯಜೀವಿ ತಜ್ಞರು ಮತ್ತು ಕಾರ್ಯಕರ್ತರ ವಿರೋಧವಿದ್ದರೂ ಕೂಡ ವನ್ಯಜೀವಿ ಮಂಡಳಿ  ಸದಸ್ಯರು ಮತ್ತು ವನ್ಯ ಪಾಲಕರಿಗೆ ತಮ್ಮ  ಖಾಸಗಿ  ವಾಹನಗಳನ್ನು ಹುಲಿ ಸಂರಕ್ಷಿತ  ಅರಣ್ಯ, ವನ್ಯಮೃಗ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿ ತೆಗೆದುಕೊಂಡು ಹೋಗಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಕಳೆದ 10 ರಂದು  ನೀಡಿದ ಆದೇಶದಲ್ಲಿ ವನ್ಯಜೀವಿ ಪಾಲಕರ ಮುಖ್ಯಸ್ಥರು ಸಹಿ ಹಾಕಿದ್ದು, ಅದರಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಆದೇಶದಂತೆ ಅರಣ್ಯದ ರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ಉದ್ಯಾನವನ ಪಾಲಕರು ಮತ್ತು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಿಗೆ ಅರಣ್ಯದೊಳಗೆ ಹೋಗಲು ಅನುಮತಿ ನೀಡಲಾಗಿದೆ.

ಆದರೆ ಸರ್ಕಾರದ ಈ ಆದೇಶ ವನ್ಯಜೀವಿ ಸಂರಕ್ಷಣೆ ಕಾರ್ಯಕರ್ತರು ಮತ್ತು ತಜ್ಞರಿಗೆ ಇಷ್ಟವಾಗಿಲ್ಲ. ನಾವು ಅನುಮತಿ ನೀಡಿರುವುದನ್ನು ವಿರೋಧಿಸುವುದಿಲ್ಲ. ಆದರೆ ವನ್ಯಜೀವಿ ಮಂಡಳಿ ಸದಸ್ಯರು ಮತ್ತು  ಪಾಲಕರಾಗಿ  ನೇಮಕಗೊಂಡಿರುವವರ ಬಗ್ಗೆ ಕಳವಳವಿದೆ. ಇಂದು ರಿಯಲ್ ಎಸ್ಟೇಟ್ ಉದ್ಯಮಿಗಳು, ವನ್ಯಜೀವಿ ಬೇಟೆಗಾರರು ಮಂಡಳಿಯ ಸದಸ್ಯರಾಗುತ್ತಿದ್ದು ಅರಣ್ಯದೊಳಗೆ ಹೋಗಿ ಯಾವುದೇ ಭಯವಿಲ್ಲದೆ ತಮ್ಮಿಷ್ಟ ಬಂದಂತೆ ವರ್ತಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com