ತುಮಕೂರು: ರಾಹುಲ್ ಗೆ ರಕ್ತದಲ್ಲಿ ಪತ್ರ ಬರೆದ ದಲಿತ ಮುಖಂಡ
ರಾಜ್ಯ
ತುಮಕೂರು: ದಲಿತ ಮುಖಂಡನಿಂದ ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ!
ತುಮಕೂರಿನ ದಲಿತ ಮುಖಂಡರೊಬ್ಬರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ತುಮಕೂರು: ತುಮಕೂರಿನ ದಲಿತ ಮುಖಂಡರೊಬ್ಬರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
"ನಾವು, ದಲಿತರೆಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವ ಒಡಕಿಲ್ಲ." ತುಮಕೂರು ಜಿಲ್ಲೆ ಕುಣಿಗಲ್ ದಲಿತ ಮುಖಂಡ ನಗುತಾ ರಂಗನಾಥ್ ಎನ್ನುವವರು ಹೀಗೆ ರಕ್ತದಲ್ಲಿ ರಾಹುಲ್ ಅವರಿಗೆ ಪತ್ರ ಬರೆದಿದ್ದಾರೆ. ಕುಣಿಗಲ್ ನ ಡಿಕೆ ಸಹೋದರರು ದಲಿತರನ್ನು ಕಡೆಗಣಿಸಿದ್ದಾರೆ ಎನ್ನುವ ಆರೋಪಕ್ಕೆ ಉತ್ತರಿಸಿರುವ ಇವರು "ದಲಿತರೆಲ್ಲಾ ಒಂದಾಗಿದ್ದೇವೆ, ಡಿಕೆ ಸಹೋದದರು ನಮ್ಮನ್ನು ಕಡೆಗಣಿಸಿಲ್ಲ. ನಾವು ನಮ್ಮ ರಕ್ತದಲ್ಲಿ ಬರೆದು ನಿಮಗೆ ಕಳಿಸುತ್ತಿದ್ದೇವೆ. ಎಂದು ವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಾಜಿ ಶಾಸಕರಾದ ರಾಮಸ್ವಾಮಿ ಗೌಡ ಅವರು ಡಿಕೆ ಸಹೋದರರು ದಲಿತರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ದಲಿತ ಮುಖಂಡರು ಈ ಪತ್ರ ಬರೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ