ರಾಜ್ಯದ ಐದು ಡೀಮ್ಡ್ ವಿವಿಗಳಿಗೆ ಹೆಸರಿನ ಜೊತೆ 'ವಿಶ್ವವಿದ್ಯಾನಿಲಯ' ಪದ ಬಳಸದಂತೆ ಯುಜಿಸಿ ತಾಕೀತು

ಬೆಂಗಳೂರಿನ ಕ್ರೈಸ್ತ್ ಮತ್ತು ಜೈನ್ ವಿಶ್ವವಿದ್ಯಾನಿಲಯಗಳು ಸೇರಿದಂತೆ ರಾಜ್ಯದ ಐದು ಡೀಮ್ಡ್ ವಿಶ್ವವಿದ್ಯಾನಿಲಯಗಳು ಈ ತಕ್ಷಣದಿಂಡ 'ವಿಶ್ವವಿದ್ಯಾನಿಲಯ' ಪದವನ್ನು....
ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ)
ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ)
ನವದೆಹಲಿ: ಬೆಂಗಳೂರಿನ ಕ್ರೈಸ್ತ್ ಮತ್ತು ಜೈನ್ ವಿಶ್ವವಿದ್ಯಾನಿಲಯಗಳು ಸೇರಿದಂತೆ ರಾಜ್ಯದ ಐದು ಡೀಮ್ಡ್ ವಿಶ್ವವಿದ್ಯಾನಿಲಯಗಳು ಈ ತಕ್ಷಣದಿಂಡ 'ವಿಶ್ವವಿದ್ಯಾನಿಲಯ' ಪದವನ್ನು ಬಳಕೆಯಿಂದ ತೆಗೆದುಹಾಕಬೇಕೆಂದು ಯುಜಿಸಿ ಆದೇಶಿಸಿದೆ.
ಕ್ರೈಸ್ಟ್‌ ಮತ್ತು ಜೈನ್‌ ಸಂಸ್ಥೆಗಳು, ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯ, ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಎಂಡ್‌ ರಿಸರ್ಚ್‌, ಜೆಎನ್‌ ಮೆಡಿಕಲ್‌ ಕಾಲೇಜು ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಸಂಸ್ಥೆಗಳು ಇದೇ ತಕ್ಷಣದಿಂದ ವಿಶ್ವವಿದ್ಯಾಲಯ ಪದ ಬಳಸುವುದನ್ನು ನಿಲ್ಲಿಸಬೇಕು. ಜತೆಗೆ ಬೇರೆ ಹೆಸರಿಗೆ ಅರ್ಜಿ ಸಲ್ಲಿಸಬೇಕು. ಹೀಗೆ ಮಾಡದೆ ಹೋದಲ್ಲಿ ಡೀಮ್ಡ್‌ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನೇ ರದ್ದುಪಡಿಸಲಾಗುವುದು ಎಂದು ಯುಜಿಸಿ ಎಚ್ಚರಿಸಿದೆ.
ಕ್ರೈಸ್ಟ್‌, ಜೈನ್ ಹಾಗೂ ಯೆನೆಪೋಯ ಸಂಸ್ಥೆಗಳಿಗೆ ಅನುಮತಿ ನೀಡುವಾಗ ಅವುಗಳಹೆಸರಿನೊಂದಿಗೆ ‘ವಿಶ್ವವಿದ್ಯಾಲಯ’ ಪದವನ್ನು ಸೇರಿಸಿಯೇ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಹೀಗಾಗಿ ಅವುಗಳಿಗೆ ತಮ್ಮ ಹೆಸರು ಬದಲಿಸಿಕೊಳ್ಳಲು ಕಾಲಾವಕಾಶ ನೀಡಲಾಗಿದೆ. ಆದರೆ ಮಣಿಪಾಲ ಹಾಗೂ ಬೆಳಗಾವಿಯ ವೈದ್ಯಕೀಯ ಸಂಸ್ಥೆಗಳಿಗೆ ಈ ಅವಕಾಶವಿಲ್ಲ. ಬದಲಾಗಿ ಅವು ಕೇಂದ್ರ ಸರ್ಕಾರದ ಅನುಮತಿ ಪಡೆಯುವಾಗ ಅಧಿಸೂಚನೆಯಲ್ಲಿ ಯಾವ ಹೆಸರು ಇತ್ತೋ ಅದೇ ಹೆಸರನ್ನು  ಬಳಸಬೇಕುೆಂದು ಯುಜಿಸಿ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com