ಕರ್ನಾಟಕ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕೆ ರತ್ನ ಪ್ರಭಾ ಅಧಿಕಾರ ಸ್ವೀಕಾರ

ನಿನ್ನೆ ವಿಧಾನ ಸೌಧ ಒಂದು ಸಾಮಾನ್ಯ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು, ರತ್ನ ಪ್ರಭಾ ಅವರು ಕರ್ನಾಟಕ ರಾಜ್ಯದ ನೂತನ ಪ್ರಧಾನ ಕಾರ್ಯದರ್ಶಿಆಗಿ ಅಧಿಕಾರ ಸ್ವೀಕರಿಸಿದರು.
ಕರ್ನಾಟಕ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕೆ.ರತ್ನ ಪ್ರಭಾ ಅಧಿಕಾರ ಸ್ವೀಕಾರ
ಕರ್ನಾಟಕ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕೆ.ರತ್ನ ಪ್ರಭಾ ಅಧಿಕಾರ ಸ್ವೀಕಾರ
Updated on
ಬೆಂಗಳೂರು: ನಿನ್ನೆ ವಿಧಾನ ಸೌಧ ಒಂದು ಸಾಮಾನ್ಯ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು, ರತ್ನ ಪ್ರಭಾ ಅವರು ಕರ್ನಾಟಕ ರಾಜ್ಯದ ನೂತನ ಪ್ರಧಾನ ಕಾರ್ಯದರ್ಶಿಆಗಿ ಅಧಿಕಾರ ಸ್ವೀಕರಿಸಿದರು.  ನೂರಾರು ಅಧಿಕಾರಿಗಳನ್ನು ಕರೆಸಿಕೊಂಡ ಅವರು ಸಾರ್ವಜನಿಕ ಅಹವಾಲುಗಳನ್ನು ಕುರಿತು ಚರ್ಚಿಸಿದ್ದಾರೆ. ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆಯ ಬಲವರ್ಧನೆಗೆ ಪ್ರಧಾನ ಆದ್ಯತೆ ನೀಡುವುದಾಗಿ ಆವರು  ಹೇಳಿದ್ದಾರೆ.
ಜನಪ್ರಿಯ ಅಧಿಕಾರಿಯಾಗಿರುವ ರತ್ನ ಪ್ರಭಾ ಅಧಿಕಾರ ಸ್ವೀಕರಿಸಲು ಪ್ರವೇಶಿಸಿದಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಇವರಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಬೀದರ್ ನಂತಹಾ ದೂರದ ಊರಿನಿಂದಲೂ ಜನ ಆಗಮಿಸಿದ್ದರು.
ರಾಜ್ಯದ ಮೂರನೇ ಮಹಿಳಾ ಮುಖ್ಯ ಕಾರ್ಯದರ್ಶಿ ಆಗಿರುವ ರತ್ನ ಪ್ರಭಾ ಮಾದ್ಯಮದವರೊಡನೆ ಮಾತನಾಡುತ್ತಾ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದರೊಡನೆ ತಮ್ಮ ಕರ್ತವ್ಯ, ಆದ್ಯತೆಗಳ ಕುರಿತಂತೆ ಸುದೀರ್ಘವಾಗಿ ಮಾತನಾಡಿದರು. ಅದರ ಆಯ್ದ ಭಾಗ ಹೀಗಿದೆ-
ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನಿಮ್ಮ ಆದ್ಯತಗಳೇನು?
ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆಯನ್ನು ಬಲಪಡಿಸುವುದು ನನ್ನ ಪ್ರಥಮ ಆದ್ಯತೆಯಾಗಿದೆ. ನಾನು ಮೊಬೈಲ್ ಅಪ್ಲಿಕೇಷನ್ ಗಳನ್ನು ನಂಬಿಕೊಂಡಿಲ್ಲ. ಸಮಸ್ಯೆಗಳನ್ನು ಬಗೆಹರಿಸಲು ಮಾನವೀಯ ಸ್ಪರ್ಶ ಅಗತ್ಯ. ನಾನು ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಬಲಪಡಿಸುವ ವಿಭಾಗಗಳನ್ನು ಪ್ರಾರಂಭಿಸುತ್ತೇನೆ.
ಮುಖ್ಯಮಂತ್ರಿಗಳ ಜನತಾ ದರ್ಶನದಂತೆಯೇ ನಾವು, ಅಧಿಕಾರಿಗಳು ಏಕೆ ಜನ ಸಂಪರ್ಕ ಕಾರ್ಯಕ್ರಮ ನಡೆಸಬಾರದು? ಇದು ಸರ್ಕಾರದ ನಿಲುವನ್ನು ಬೆಂಬಲಿಸುತ್ತದೆ. ಸರ್ಕಾರದ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ನಾನು ಖಚಿತಪಡಿಸುತ್ತೇನೆ.
ನೀವು ಲಿಂಗ ಪಕ್ಷಪಾತ ಸಮಸ್ಯೆ ಎದುರಿಸಿದ್ದಿರೆ?
ಬಾಲ್ಯದಿಂದ ನಾನು ಪೋಷಕರು, ಸಮಾಜದ ಪ್ರೊತ್ಸಾಹದೊಡನೆ ಬೆಳೆದಿದ್ದೇನೆ. ನಾನು ಯಾವುದೇ ಲಿಂಗ  ತಾರತಮ್ಯವನ್ನು ಎದುರಿಸಲಿಲ್ಲ.
ಮಹಿಳಾ ಸಬಲೀಕರಣ ಮತ್ತು ಮಹಿಳಾ ಉದ್ಯಮಶೀಲತೆ ಬಗ್ಗೆ ನೀವು ಒತ್ತು ನೀಡಿದ್ದೀರಿ. ಇವುಗಳನ್ನು ಬಲಪಡಿಸಲು ನೀವು ಯಾವುದೇ ಯೋಜನೆಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದೀರ? 
ಹೌದು. ನಾನೊಬ್ಬ ಮಹಿಳೆಯಾಗಿದ್ದೇನೆ, ನಾನು ಮಹಿಳೆಯರಿಗೆ ಏನನ್ನಾದರೂ ಮಾಡಬೇಕು. ಹುಬ್ಬಳ್ಳಿ, ಧಾರವಾಡ, ಮೈಸೂರು, ಬಳ್ಳಾರಿ ಮತ್ತು ಕಲಬುರ್ಗಿಗಳಲ್ಲಿ ವಿಶೇಷ ಮಹಿಳಾ ಟೆಕ್ ಪಾರ್ಕುಗಳು ಪ್ರಾರಂಭಗೊಳ್ಳಲಿದೆ.
ನೀವು ಚುನಾವಣಾ ವರ್ಷದಲ್ಲಿ ಅಧಿಕಾರ ಸ್ವೀಕರಿಸಿದ್ದೀರಿ. ನಿಮ್ಮ ಮೇಲೆ ಹೆಚ್ಚಿನ ನಿರೀಕ್ಷೆಗಳ, ಜವಾಬ್ದಾರಿಯ ಭಾರವಿದೆ ಎಂದು ನೀವು ಭಾವಿಸಿದ್ದಿರಾ?
ಕೆಲಸವನ್ನು, ಜವಾಬ್ದಾರಿಯ ಭಾರವನ್ನು ನಾನು ಪ್ರೀತಿಸುತ್ತೇನೆ. ವೈವಿದ್ಯಮಯ ಕಾರ್ಯಗಳನ್ನು ನಿರ್ವಹಿಸುವ ಅನುಭವ ನನಗೆ ಇದೆ. ಸಮಯ ಮತ್ತು ಆದ್ಯತೆಯ ಅನುಸಾರ ಕಾರ್ಯ ನಿರ್ವಹಿಸಲು ನನಗೆ ಸಾಧ್ಯವಾಗುತ್ತದೆ ಎಂದು ವಿಶ್ವಾಸವಿದ.
ಮುಖ್ಯ ಕಾರ್ಯದರ್ಶಿ ಯಾವಾಗಲೂ ಸರ್ಕಾರದ 'ರಬ್ಬರ್ ಸ್ಟ್ಯಾಂಪ್' ಎಂಬ ದು ಗ್ರಹಿಕೆ ಇದೆ. ಈ ಕುರಿತಂತೆ ನೀವು ಏನನ್ನು ಹೇಳುತ್ತೀರಿ?
ಮುಖ್ಯ ಕಾರ್ಯದರ್ಶಿಯಾಗಿ ಸನ್ನಿವೇಶಗಳನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ನಾನು ತೋರಿಸುತ್ತೇನೆ. ಒಳ್ಳೆಯ ಕಾರಣಗಳಿಗಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಕೆಲಸ ಮಾದಬೇಕಿದೆ.
1958 ರಲ್ಲಿ ಜನಿಸಿದ ಕೆ. ರತ್ನ ಪ್ರಭಾ 1981 ಬ್ಯಾಚ್ ನ ಐಎಎಸ್ ಅಧಿಕಾರಿ. 1983 ರಲ್ಲಿ ಬೀದರ್ ನಲ್ಲಿ ಸಹಾಯಕ ಕಮಿಷನರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು 36 ವರ್ಷಗಳ ವೃತ್ತಿ ಜೀವನ ಅನುಭವ ಹೊಂದಿದ್ದಾರೆ 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com