ಬರೋಬ್ಬರೀ ಆರು ದಶಕಗಳ ನಂತರ ಮೈಸೂರು ರಾಜ ಮನೆತನದಲ್ಲಿ ಸೀಮಂತ ಸಂಭ್ರಮ!

ಮೈಸೂರು ರಾಜಮನೆತನ ಸಂತೋಷದಲ್ಲಿ ತೇಲುತ್ತಿದೆ. ಭಾನುವಾರ ಮೈಸೂರಿನ ಅಂಬವಿಲಾಸ ಅರಮನೆಯಲ್ಲಿ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ...
ತ್ರಿಶಿಕಾ ಕುಮಾರಿ ಮತ್ತು ಯಧುವೀರ್ ಒಡೆಯರ್
ತ್ರಿಶಿಕಾ ಕುಮಾರಿ ಮತ್ತು ಯಧುವೀರ್ ಒಡೆಯರ್
ಮೈಸೂರು: ಮೈಸೂರು ರಾಜಮನೆತನ ಸಂತೋಷದಲ್ಲಿ ತೇಲುತ್ತಿದೆ. ಭಾನುವಾರ ಮೈಸೂರಿನ ಅಂಬವಿಲಾಸ ಅರಮನೆಯಲ್ಲಿ  ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ಮಹಾರಾಣಿ ತ್ರಿಶಿಕಾ ದೇವಿಗೆ ಸೀಮಂತ ಶಾಸ್ತ್ರ ನಡೆಯಿತು.
ಇನ್ನೆರಡು ತಿಂಗಳಲ್ಲಿ ರಾಜ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಅರಮನೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾಧ್ಯಮ ಮತ್ತು ಸಾರ್ವಜನಿಕರನ್ನು ಹೊರಗಿಡಲಾಗಿತ್ತು, ಕೇವಲ ಕುಟುಂಬದ ಆಪ್ತರಷ್ಟೆ ಭಾಗಿಯಾಗಿದ್ದರು. 2016ರ ಜೂನ್ ನಲ್ಲಿ ರಾಜ್ ಕೋಟ್ ನ ರಾಜಮನೆತನದ ತ್ರಿಷಿಕಾ ಕುಮಾರಿ  ಯಧುವೀರ್ ಅವರನ್ನು ವಿವಾಹವಾಗಿದ್ದರು, ಪರಕಾಲ ಮಠದ ಸ್ವಾಮೀಜಿಗಳು ಹಾಗೂ ಅರಮನೆಯ ಅರ್ಚಕರು ವಿಶೇಷ ಪೂಜೆ ನಡೆಸಿ ಮಹಾರಾಣಿಗೆ ಹಾರೈಸಿದ್ದಾರೆ.
ಸುಮಾರು 60 ವರ್ಷಗಳ ನಂತರ ರಾಜಮನೆತನ ಸಂಪ್ರದಾಯಿಕವಾಗಿ ಸೀಮಂತ ಶಾಸ್ತ್ರ ನಡೆಸಿದೆ. 1953 ರ ಫೆಬ್ರವರಿಯಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನ್ಮ ಸಂಭ್ರಮಾಚರಣೆ ನಡೆದಿತ್ತು. ಮೈಸೂರು ಅರಮನೆ ಸಿಬ್ಬಂದಿ ಅಲ್ಲಿನ ಅಗ್ರಹಾರದ ನಿವಾಸಿಗಳಿಗೆ ಹಾಗೂ ಮತ್ತಿತರರಿಗೆ ಲಾರಿ ಮತ್ತು ಎತ್ತಿನ ಗಾಡಿಗಳಲ್ಲಿ ಸಕ್ಕರೆಯನ್ನು ಹಂಚಿ ಸಂಭ್ರಮಿಸಿದ್ದರು. ವಿಜಯನಗರ ಅರಸ ತಿರುಮಲ ರಾಜ ಅಧಿಕಾರ ಕಳೆದುಕೊಂಡ ನಂತರ 1612 ರಲ್ಲಿ  ರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ವಶಕ್ಕೆ ಪಡೆದರು.
ತಿರುಮಲ ರಾಜನ ಹೆಂಡತಿ ಅಲಮೇಲಮ್ಮ ಅರಮನೆಯಲ್ಲಿದ್ದ ಎಲ್ಲಾ ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು, ತನ್ನ ಪತಿಯ ಮೇಲೆ ಆಕ್ರಮಣ ಮಾಡಿದ ಒಡೆಯರ್ ಮನೆತನದ ಬಗ್ಗೆ ಆಕೆಗೆ ಅಸಮಾಧಾನ ಮೂಡಿತ್ತು, ಒಡೆಯರ್ ಸೈನಿಕರು ಆಕೆಯನ್ನು ಹಿಡಿದಾಗ ಆಕೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು.  
ನದಿಗೆ ಹಾರುವ ಮುನ್ನ ಆಕೆ ಒಡೆಯರ್ ಮನೆತನಕ್ಕೆ  ಭವಿಷ್ಯದಲ್ಲಿ ಮಕ್ಕಳಾಗದೇ ಇರಲಿ ಎಂಬ ಶಾಪ ಹಾಕಿದ್ದಳು ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ ಪ್ರಸಿದ್ಧ ಇತಿಹಾಸಕಾರ ನಂಜರಾಜೇ ಅರಸ್, ಪ್ರಕಾರ ಅಲಮೇಲಮ್ಮ ಎಂಬಾಕೆ ಇರಲೇ ಇಲ್ಲ ಎಂದು ಅಭಿಪ್ರಾಯ ಪಡುತ್ತಾರೆ.
ತಮ್ಮಯ್ಯ ಶಾಸ್ತ್ರಿ ಬರೆದಿರುವ ರಾಜವಂಶ ರತ್ನಪ್ರಭ ಎಂಬ ಕೃತಿಯಲ್ಲಿ ಅಲಮೇಲಮ್ಮ ಬಗ್ಗೆ ಉಲ್ಲೇಖವಿದೆ, ಆದರೆ 1897ರಲ್ಲಿ ಮುದ್ರಿತವಾದ ಎರಡನೇ ಆವೃತ್ತಿಯಲ್ಲಿ ಅದರ ಉಲ್ಲೇಖವಿಲ್ಲ ಎಂದು ಹೇಳಿದ್ದಾರೆ. 16 ಪೀಳಿಗೆವರೆಗೂ ಈ ಶಾಪ ಮುಂದುವರಿಯುತ್ತದೆ ಎಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಂಬಿದ್ದರು, 16 ಪೀಳಿಗೆಯ ನಂತರ ಶಾಪಕ್ಕೆ ಮುಕ್ತಿ ಎಂದು ಅವರು ತಿಳಿದಿದ್ದರು ಎಂದು ಹೇಳಲಾಗಿದೆ. ಅವರ ಆಕಸ್ಮಿಕ ಸಾವಿನಿಂದ ರಾಣಿ ಪ್ರಮೋದಾದೇವಿ ಒಡೆಯರ್  ಸ್ವರೂಪ ನಂದ ಗೋಪಾಲ ರಾಜ್ ಅರಸ್, ಮತ್ತು ತ್ರಿಪುರ ಸುಂದರ ದೇವಿ ಅವರ ಪುತ್ರ ಯಧುವೀರ್ ಅವರನ್ನು ದತ್ತು ಪುತ್ರನಾಗಿ ಸ್ವೀಕರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com