ಪಿಡಬ್ಲ್ಯೂಡಿ ನಲ್ಲಿ ಮುಖ್ಯ ಇಂಜಿನಿಯರ್ ಹುದ್ದೆ ತಾಂತ್ರಿಕೇತರ ಅಧಿಕಾರಿಗಳ ಪಾಲು!

ನೀವು ಕರ್ನಾಟಕದ ಮುಖ್ಯ ಇಂಜಿನಿಯರ್ ಹುದ್ದೆಯನ್ನು ಹಿಡಿದಿಡಲು ಇಂಜಿನಿಯರಿಂಗ್ ಆಗಬೇಕೆನ್ನುವುದು ಕಡ್ಡಾಯವಲ್ಲ.
ಪಿಡಬ್ಲ್ಯೂಡಿ ಕರ್ನಾಟಕ
ಪಿಡಬ್ಲ್ಯೂಡಿ ಕರ್ನಾಟಕ
ಬೆಂಗಳೂರು: ನೀವು ಕರ್ನಾಟಕ ಸರ್ಕಾರದಲ್ಲಿ  ಮುಖ್ಯ ಇಂಜಿನಿಯರ್ ಹುದ್ದೆಯನ್ನು ಹಿಡಿದಿಡಲು ಇಂಜಿನಿಯರಿಂಗ್ ಆಗಬೇಕೆನ್ನುವುದು ಕಡ್ಡಾಯವಲ್ಲ. ಇಂಜಿನಿಯರ್ ಅಲ್ಲದ ವ್ಯಕ್ತಿ ಕೂಡ ಕಿರಿಯ ಅಧೀಕ್ಷಕರಾಗಬಹುದು. ಪಿಡಬ್ಲ್ಯೂಡಿ ಮತ್ತು ಜಲ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ 54 ಮುಖ್ಯ ಇಂಜಿನಿಯರು ಗಳಲ್ಲಿ ಇಬ್ಬರು ತಾಂತ್ರಿಕೇತರ ಶಿಕ್ಷಣ ಪಡೆದು ಬಂದವರು. ಈ ಮಾಹಿತಿಯನ್ನು ಸರ್ಕಾರದ ಮೂಲಗಳು ಎಕ್ಸ್ ಪ್ರೆಸ್ ಗೆ ತಿಳಿಸಿವೆ, ಒಬ್ಬರು ರಾಜ್ಯ ಹಣಕಾಸು ಇಲಾಖೆಯಿಂದ ಇಲ್ಲಿಗೆ ವರ್ಗವಾಗಿದ್ದರೆ, ಇನ್ನೊಬ್ಬರು ಕೃಷಿ ಇಲಾಖೆಯಿಂದ ಬಂದಿದ್ದಾರೆ. ಇದೀಗ ಅವರಲ್ಲಿ ಒಬ್ಬರು , ಪಿಡಬ್ಲ್ಯೂಡಿ ಯ ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಮುಖ್ಯ ಇಂಜಿನಿಯರ್ ನ ಉಸ್ತುವಾರಿ ವಹಿಸಿಕೊಂಡಿದ್ದರೆ,, ಇನ್ನೋರ್ವರು ಜಲ ಸಂಪನ್ಮೂಲ ಇಲಾಖೆಯ ಕಮಾಂಡಿಂಗ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಿಇಯ ಇನ್-ಚಾರ್ಜ್ ಆಗಿದ್ದಾರೆ.
ಮುಖ್ಯ ಇಂಜಿನಿಯರುಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಇನ್ನೂ ಅಂತಿಮ ಗೊಳಿಸಿಲ್ಲ, ಈ ಹಿನ್ನೆಲೆಯಲ್ಲಿ ಕಿರಿಯ ಮಟ್ಟದ ಅಧಿಕಾರಿಗಳು ಇಂಜಿನಿಯರಿಂಗ್ ಆಗಿಲ್ಲದ ಕಾರಣ ಎರಡೂ  ವಿಭಾಗಗಳಲ್ಲಿ ಹೆಚ್ಚುವರಿ ಶುಲ್ಕ ಪಾವತಿಸುವವರಿಗೆ ಉನ್ನತ ಹುದ್ದೆಗಳನ್ನು ನೀಡುತ್ತಿದ್ದಾರೆ. 
ವಾಸ್ತವವಾಗಿ, ಇಂತಹಾ 21 ಹುದ್ದೆಗಳ "ಇನ್-ಚಾರ್ಜ್" ಮುಖ್ಯ ಇಂಜಿನಿಯರ್ ಗಳು ನಿರ್ವಹಿಸುತ್ತಾರೆ. ಕರ್ನಾಟಕ ನಾಗರಿಕ ಸೇವಾ ನಿಯಮ 32ರ ಅಡಿಯಲ್ಲಿ, ಬರುವ ಹುದ್ದೆಗಳನ್ನು ಇನ್-ಚಾರ್ಜ್ ವ್ಯವಸ್ಥೆ ಮೂಲಕ ತಾತ್ಕಾಲಿಕ ವಾಗಿ ಭರ್ತಿ ಮಾಡಬಹುದು. ಪಿಡಬ್ಲ್ಯೂಡಿ ಮತ್ತು ಜಲ ಸಂಪನ್ಮೂಲ ಇಲಾಖೆಯಲ್ಲಿ, ಕಳೆದ ಹಲವು ವರ್ಷಗಳಿಂದ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಬದಲಾಗಿ ಮುಖ್ಯ ಇಂಜಿನಿಯರ್ ಗಳ ಹುದ್ದೆಗಳನ್ನು ಕಿರಿಯ ಅಧಿಕಾರಿಗಳು ಅಥವಾ ವಿವಿಧ ಇಲಾಖೆಗಳಿಂದ , ನಿಗಮಗಳಿಂದ ಬಂದ ಅಧಿಕಾರಿಗಳು ನಿರ್ವಹಿಸುತ್ತಾ ಬಂದಿದ್ದಾರೆ..
ಉದಾಹರಣೆಗೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಕರ್ನಾಟಕ ರಾಜ್ಯ ನಿರ್ಮಾಣ ಕಾರ್ಪೊರೇಷನ್ ಲಿಮಿಟೆಡ್, ಕೃಷ್ಣ ಭಾಗ್ಯ ಜಲ ನಿಗಮ ಮುಂತಾದ ನಿಗಮಗಳ ಅಧಿಕಾರಿಗಳಿಂದ 21 ಮುಖ್ಯ ಇಂಜಿನಿಯರ್ ಹುದ್ದೆಗಳು"ನಿರ್ವಹಿಸಲ್ಪಡುತ್ತಿವೆ"
ಪಿಡಬ್ಲ್ಯೂಡಿ ಯ ಮೂಲಗಳು ಈ 21 ಹುದ್ದೆಗಳಲ್ಲಿ ಸಿಇ ಪೋಸ್ಟ್ ಗಳನ್ನು ಸೂಪರ್ಇಂಡಿಂಗ್ ಇಂಜಿನಿಯರುಗಳು , ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರುಗಳು ಮತ್ತು ಇತರ ಕಿರಿಯ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ವಿವರಿಸಿದೆ. "ಒಂದು ಹುದ್ದೆಗೆ ಅದರದೇ ಆದ ಹೆಚ್ಚಿನ ಜವಾಬ್ದಾರಿ ಬರುತ್ತದೆ, ಒಬ್ಬನೇ ವ್ಯಕ್ತಿ ಅದು ಹೇಗೆ ಮೂರು ಹುದ್ದೆಗಳನ್ನು ನಿರ್ವಹಿಸಲು ಸಾಧ್ಯ??" ಎಂದು ಹೆಸರು ಹೇಳಲಿಚ್ಚಿಸದ ಪಿಡಬ್ಲ್ಯೂಡಿ ಅಧಿಕಾರಿಯೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com