ಸಿಟಿ ರೈಲು ನಿಲ್ದಾಣ- ಕೆಂಪೇಗೌಡ ಮೆಟ್ರೋ ನಿಲ್ದಾಣಕ್ಕೆ ಸ್ಕೈವಾಕ್ ಸಂಪರ್ಕ!

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ-ಕೆಂಪೇಗೌಡ ಮೆಟ್ರೋ ನಿಲ್ದಾಣದ ನಡುವೆ ಪ್ರಯಾಣ್ಮಿಕರಿಗೆ ಸಂಪರ್ಕ ಕಲ್ಪಿಸುವ ವಿಷಯ ಬಗೆಹರಿದಿದ್ದು, ಸ್ಕೈವಾಕ್ ನ್ನು ನಿರ್ಮಿಸಲು ಬಿಎಂಆರ್ ಸಿಎಲ್ ಪ್ರಸ್ತಾವನೆ ಸಲ್ಲಿಸಿದೆ.
ಕೆಂಪೇಗೌಡ ಮೆಟ್ರೋ ನಿಲ್ದಾಣ
ಕೆಂಪೇಗೌಡ ಮೆಟ್ರೋ ನಿಲ್ದಾಣ
ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ-ಕೆಂಪೇಗೌಡ ಮೆಟ್ರೋ ನಿಲ್ದಾಣದ ನಡುವೆ ಪ್ರಯಾಣ್ಮಿಕರಿಗೆ ಸಂಪರ್ಕ ಕಲ್ಪಿಸುವ ವಿಷಯ ಬಗೆಹರಿದಿದ್ದು, ಸ್ಕೈವಾಕ್ ನ್ನು ನಿರ್ಮಿಸಲು ಬಿಎಂಆರ್ ಸಿಎಲ್ ಪ್ರಸ್ತಾವನೆ ಸಲ್ಲಿಸಿದೆ. 
ಮೆಟ್ರೋ ಪ್ರಸ್ತಾವನೆಗೆ ರೈಲ್ವೆ ಒಪ್ಪಿಗೆ ಸೂಚಿಸಿದ್ದು, ಪ್ರಸ್ತುತ ಮೆಟ್ರೋ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಹೋಗಬೇಕಾದರೆ ಪ್ರಯಾಣಿಕರು ಗುಬ್ಬಿ ತೋಡಪ್ಪ ರಸ್ತೆಯನ್ನು ದಾಟಬೇಕಿದೆ. ವಾಹನ ಸಂಚಾರ ಹೆಚ್ಚಾಗಿರುವ ಪ್ರದೇಶದಲ್ಲಿ ರಸ್ತೆ ದಾಟುವುದು ಕಷ್ಟವಾಗಿದ್ದು, ಈಗ ಸ್ಕೈ ವಾಕ್ ನಿರ್ಮಾಣ ಮಾಡುತ್ತಿರುವುದರಿಂದ ಮೆಟ್ರೋ ನಿಲ್ದಾಣದಿಂದ ನೇರವಾಗಿ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಗೆ ತೆರಳಬಹುದಾಗಿದೆ. 
ಬಿಎಂಆರ್ ಸಿಎಲ್ ಸ್ಕೈ ವಾಕ್ ನಿರ್ಮಾಣ ಮಾಡುವ ಪ್ರಸ್ತಾವನೆ ನೀಡಿದೆ. ಮೆಟ್ರೋ ನಿಲ್ದಾಣದ ಒಂದು ಪ್ರವೇಶ ದ್ವಾರದಿಂದ ಈ ಸ್ಕೈವಾಕ್ ರೈಲ್ವೆ ನಿಲ್ದಾಣಕ್ಕೆ ನೇರ ಸಂಪರ್ಕ ಒದಗಿಸುತ್ತದೆ ಇದಕ್ಕೆ 10 ದಿನಗಳಲ್ಲಿ ಅಧಿಕೃತ ಒಪ್ಪಿಗೆ ನೀಡಲಾಗುತ್ತದೆ. ಮೆಟ್ರೋ ನಿಲ್ದಾಣದಿಂದ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ ಬುಕಿಂಗ್ ಕೌಂಟರ್ ಸೌಲಭ್ಯ ಕಲ್ಪಿಸಲಾಗುತ್ತದೆ. ಇದರಿಂದಾಗಿ ಪ್ರಯಾಣಿಕರು ಸುಲಭವಾಗಿ ಟಿಕೆಟ್ ಖರೀದಿಸಬಹುದು ಎಂದು ರೈಲ್ವೆ ವಿಭಾಗೀಯ ಮ್ಯಾನೇಜರ್ ಆರ್ ಎಸ್ ಸಕ್ಸೇನಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com