ಬೆಂಗಳೂರು: ಮಗು ಅಪಹರಣಕಾರನ ಮೇಲೆ ಫೈರಿಂಗ್, ಆರೋಪಿಗಳ ಬಂಧನ

ಹೆಗ್ಗಡೆ ನಗರ ಬಳಿ ಅ.5 ರಂದು ಒಂದು ಮಗುವಿನ ಅಪಹರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಮಗು  ಅಪಹಣಕಾರನ ಮೇಲೆ ಫೈರಿಂಗ್, ಆರೋಪಿಗಳ ಬಂಧನ
ಬೆಂಗಳೂರು: ಮಗು ಅಪಹಣಕಾರನ ಮೇಲೆ ಫೈರಿಂಗ್, ಆರೋಪಿಗಳ ಬಂಧನ
ಬೆಂಗಳೂರು: ಹೆಗ್ಗಡೆ ನಗರ ಬಳಿ ಅ.5 ರಂದು ಒಂದು ಮಗುವಿನ ಅಪಹರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಕೆ ಜಿ ಹಲ್ಲಿಯ ಗೋವಿಂದಪುರ ನಿವಾಸಿಗಳಾದ ಮೊಹಮ್ಮದ್ ನೂರೂಲ್ಲಾ (23), ಇಸಾಕ್ ಖಾನ್ (19), ಅಬ್ದುಲ್ ವಹೀದ್ (24), ಮತ್ತು ಭಾರತಿ ನಗರದ ಶಹಾನಜ್ ಖಾನಮ್ (36) ಎಂದು ಗುರುತಿಸಲಾಗಿದೆ.
ಇವರಲ್ಲಿ ಆರೋಪಿ ಮೊಹಮ್ಮದ್ ನೂರೂಲ್ಲಾ ನನ್ನು ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬಾಗಲೂರು ಕ್ರಾಸ್ ಬಳಿವಶಕ್ಕೆ ಪದೆಯಲಾಗಿದೆ. ಈ ವೇಳೆ ಪೋಲೀಸರು ಆರೋಪಿಯ ಮೇಲೆ ಫೈರಿಂಗ್ ನಡೆಸಿದ್ದಾರೆ.
ಆಗಿದ್ದೇನು?
ಬಾಗಲೂರು ಲೇಔಟ್ ಬಳಿ ಆರೋಪಿ ನೂರ್ ಇರುವಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದ ಕಾರಣ ಕೊತ್ತನೂರು ಇನ್ಸ್ ಪೆಕ್ಟರ್ ಹರಿಯಪ್ಪ ನೇತೃತ್ವದ ತಂಡ ಆರೋಪಿಯನ್ನ ಹಿಡಿಯಲು ಮುಂದಾಗಿದೆ. ಈ ವೇಳೆ ಆರೋಪಿ ನೂರ್ ಪಿಎಸ್‍ಐ  ನಾಯಕ್ ಮತ್ತು ಮುಖ್ಯ ಪೇದೆ ಅಬ್ದುಲ್ ಹಮಿದ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಹರಿಯಪ್ಪ ಆರೋಪಿ ನೂರ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ರಾಯಚೂರು ಮೂಲದ ಭೀಮೇಶ್, ಮಹೇಶ್ವರಿ ದಂಪತಿಯ ಮಗು ಅಭಿರಾಮ್‍ನನ್ನು ಅ.5ರಂದು ಅಪಹರಣ ಮಾಡಲಾಗಿತ್ತು. ನೂರ್ ಮೊಹಮ್ಮದ್, ವಾಹಿದ್ ಹಾಗೂ ಇನ್ನಿಬ್ಬರು ಸೇರಿ ಮಗುವನ್ನು ಅಪಹರಿಸಿ  ಶಹನಾಜ್ ಖಾನಮ್ ಎಂಬ ಮಹಿಳೆಗೆ ಕೊಟ್ಟಿದ್ದರು.
ಅಸಲಿಗೆ  ಶಹನಾಜ್ ಖಾನಮ್, ತಾನು ಮಗುವಿನ ಅಪಹರಣಕ್ಕಾಗಿ  ನೂರ್‍ಗೆ 15 ಸಾವಿರ ರೂ. ಹಣ ಕೊಟ್ಟಿದ್ದಳು
ಶಹನಾಜ್‍ನ ಮಗಳು ಹಾಗೂ ನೂರ್ ಮದುವೆ ನಿಶ್ಚಯವಾಗಿದ್ದ ಕಾರಣ ನೂರ್ ಸಾಹ ಈ ಕೃತ್ಯ ನಡೆಸಲು ಒಪ್ಪಿಕೊಂದಿದ್ದ. ಶಹನಾಜ್‍ ಗಂದ ಆಕೆಯನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಆಕೆ ತನಗೆ ಗಂಡು ಮಗುವಾಗಿದೆ ಎಂದು ನಂಬಿಸಿ ಆತನಿಂದ ಹಣ ಪಡೆಯಲು ಯೋಚಿಸಿದ್ದಳು ಎಂದು ಪೋಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆರೋಪಿಗಳನ್ನೂ ವಶಕ್ಕೆ ಪಡೆದಿರುವ ಪೋಲೀಸರು  ಮಗು ಅಭಿರಾಮ್ ನನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com