ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ಚೆನ್ನೈ, ಮುಂಬಯಿಗಳಲ್ಲಿ ಸಮಸ್ಯೆ ಉಂಟಾಗಿತ್ತು,. ಆದರೆ ಬೆಂಗಳೂರಿನಲ್ಲಿ ಮಾತ್ರ ಅಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಆಗಸ್ಟ್ 15 ರಿಂದ ಸುಪಮಾರು 46 ದಿನಗಳು ಸತತವಾಗಿ ಮಳೆಯಾಗಿದೆ, ಇದು ನೈಸರ್ಗಿಕ ವಿಕೋಪವಾಗಿದೆ. ಹೀಗಾದಾಗ ರಾಜಕೀಯ ಪಕ್ಷಗಳನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ, ಎಲ್ಲಾ ಪಕ್ಷಗಳು ಒಟ್ಟಿಗೆ ಸೇರಿ ಸಮಸ್ಯೆ ವಿರುದ್ಧ ಹೋರಾಡಬೇಕು, ಅದನ್ನು ಬಿಟ್ಟು ಬೇರೆಯವರ ವಿರುದ್ಧ ಬೆರಳು ಮಾಡಿ ತೋರಿಸಬಾರದು ಎಂದು ಹೇಳಿದ್ದಾರೆ.