ಬೆಂಗಳೂರು ಮೆಟ್ರೋ ಕಾಮಗಾರಿ: ವೈಟ್ ಫೀಲ್ಡ್ ನಿಲ್ದಾಣದ ಸ್ಥಳ ನಿಗದಿ ಅಂತಿಮ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಕಳೆದ ವಾರ ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣದ ನಕಾಶೆಗೆ ಅಂತಿಮ ನಿಶಾನೆ ನೀಡಿದೆ.
ಸತ್ಯ ಸಾಯಿ ಆಸ್ಪತ್ರೆ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ
ಸತ್ಯ ಸಾಯಿ ಆಸ್ಪತ್ರೆ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಕಳೆದ ವಾರ ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣದ ನಕಾಶೆಗೆ ಅಂತಿಮ ನಿಶಾನೆ ನೀಡಿದೆ. ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಲೈನ್ (ರೀಚ್ 1) ಫೇಸ್ - 2 ನ ಮೆಟ್ರೋ ರೈಲು ಮಾರ್ಗದಲ್ಲಿ ಬರುವ ಕಡೆಯ ರೈಲು ನಿಲ್ದಾಣದ ಸ್ಥಳನಿಗದಿಯಾಗಿದೆ. ವೈಟ್ ಫೀಲ್ಡ್ ನ ಪೋಲೀಸ್ ಠಾಣೆಯ  ಮುಂದೆ ಎಡಭಾಗದಲ್ಲಿ ನಿಲ್ದಾಣವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ಈ ಮೊದಲು ಪೋಲೀಸ್ ಠಾಣೆಯ ಎಡಭಾಗದಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿತ್ತಾದರೂ ಅದನ್ನು ಬಲ ಬದಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಪುನಃ ಬಿಎಂಆರ್ ಸಿಎಲ್ ತನ್ನ ಮೂಲ ಯೋಜನೆಯಂತೆ ಎಡಭಾಗದಲ್ಲಿಯೇ ಮೆಟ್ರೋ ನಿಲ್ದಾಣವನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ರೈಲು ಮಾರ್ಗಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಇನ್ನಷ್ಟೇ ಪ್ರಾರಂಭಗೊಳ್ಳಬೇಕಿದೆ.
ಉನ್ನತ ಮೆಟ್ರೋ ಅಧೀಕ್ಷಕರು ಹೇಳಿದಂತೆ , "ನಾವು ನಿಲ್ದಾಣವನ್ನು ಪೋಲಿಸ್ ಠಾಣೆ ಎಡ ಬದಿಯಲ್ಲಿ ನಿರ್ಮಿಸಿದರೆ , ಭವಿಷ್ಯದಲ್ಲಿ ಅದನ್ನು ಹೊಸಕೋಟೆಗೆ ವಿಸ್ತರಿಸಲು ಸುಲಭವಾಗುತ್ತದೆ. ರೈಲ್ವೆ ಟ್ರ್ಯಾಕ್ ಗಳು ಮಧ್ಯೆ ಇರುವ ಕಾರಣ ನಾವು ಬಲ ಭಾಗಕ್ಕೆ ನಿಲ್ದಾಣ ನಿರ್ಮಿಸಲು ಆಗುವುದಿಲ್ಲ"
ಬಿಎಂಆರ್ಸಿಎಲ್ ಈ ನಿಲ್ದಾಣಕ್ಕೆ 48 ಎಕರೆ ಭೂಮಿ ಮತ್ತು ಕಾಡುಗೋಡಿ ಡಿಪೋವನ್ನು ಸ್ವಾಧೀನಪಡಿಸಿಕೊಳ್ಳಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದೆ.  ಈ ಮೆಟ್ರೋ ಯೋಜನೆಗಾಗಿ ಬೈಯಪ್ಪನಹಳ್ಳಿ ಮತ್ತು ಜ್ಯೋತಿಪುರಂ ನಿಲ್ದಾಣದ ನಡುವೆ 4 ಎಕರೆಗಳಷ್ಟು ಸ್ಥಳ ಬೇಕಾಗುತ್ತದೆ. "ಹಂತ 2 ಅನ್ನು ಅಂತಿಮಗೊಳಿಸಿದ ನಂತರ, ಕೆ ಆರ್  ಪುರಮ್-ಸಿಲ್ಕ್ ಬೋರ್ಡ್ ಮಾರ್ಗವನ್ನು ಪ್ರಾರಂಭಿಸಲಾಗುವುದು, ಬೈಯಪ್ಪನಹಳ್ಳಿ ಆಗ ಇಂಟರ್ ಚೇಂಜ್ ನಿಲ್ದಾಣವಾಗಲಿದೆ. ಕೆ ಆರ್ ಪುರಮ್ ಮಾರ್ಗಕ್ಕೆ ಇಲ್ಲಿಂದ ಲಿಂಕ್ ದೊರೆಯಲಿದೆ.
ಬೈಯಪ್ಪನ ಹಳ್ಳಿ ವೈಟ್ ಫೀಲ್ಡ್ (ರೀಚ್-೧ 15.2 ಕಿಮೀ
ನಿಲ್ದಾಣಗಳ ಸಂಖ್ಯೆ: 13
ಮುಕ್ತಾಯ ಗಡುವು: 2019
ರೀಚ್ -1 ಎ
(ಸುಮಾರು 8 ಕಿಮೀ)
ಜ್ಯೋತಿಪುರಂ
ಕೆ ಆರ್ ಪುರಮ್
ಮಹಾದೇವಪುರ
ಗರುಡಾಚಾರ್ ಪಾಳ್ಯ
ದೊಡ್ಡನಕುಂದಿ
ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ
ರೀಚ್ -1 ಬಿ
(ಸುಮಾರು 7.2 ಕಿಮೀ)
ಕುಂದನಹಳ್ಳಿ
ವೈಡೆಹಿ ಆಸ್ಪತ್ರೆ
ಶ್ರೀ ಸತ್ಯ ಸಾಯಿ ಆಸ್ಪತ್ರೆ
ಐಟಿಪಿಎಲ್
ಕಾಡುಗೋಡಿ
ಉಜ್ವಲ್ ವಿದ್ಯಾಲಯ
ವೈಟ್ ಫೀಲ್ಡ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com