ವೈದ್ಯರ ಬಗ್ಗೆ ಅಸಂಬದ್ಧ ಹೇಳಿಕೆ: ಸಚಿವ ರಮೇಶ್ ಕುಮಾರ್ ಗೆ ಐಎಂಎ ಎಚ್ಚರಿಕೆ

ವೈದ್ಯರ ಬಗ್ಗೆ ಅಗೌರವದಿಂದ ಮಾತನಾಡಿದರೇ ಭಾರತೀಯ ವೈದ್ಯಕೀಯ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ವೈದ್ಯರು ತಮ್ಮ ವೃತ್ತಿಯನ್ನು ತ್ಯಜಿಸುವುದಾಗಿ ...
ರಮೇಶ್ ಕುಮಾರ್
ರಮೇಶ್ ಕುಮಾರ್
ಮೈಸೂರು: ವೈದ್ಯರ ಬಗ್ಗೆ ಅಗೌರವದಿಂದ ಮಾತನಾಡಿದರೇ  ಭಾರತೀಯ ವೈದ್ಯಕೀಯ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ವೈದ್ಯರು ತಮ್ಮ ವೃತ್ತಿಯನ್ನು ತ್ಯಜಿಸುವುದಾಗಿ ಎಐಂಎ ಅಧ್ಯಕ್ಷ ಡಾ.ಎಚ್‌.ಎನ್.ರವೀಂದ್ರ ಎಚ್ಚರಿಸಿದ್ದಾರೆ.
ವೈದ್ಯರನ್ನು ಕ್ಷೌರಿಕರಿಗೆ ಹೋಲಿಸಿರುವುದು ಸಚಿವ ರಮೇಶ್ ಕುಮಾರ್ ಅವರ ವ್ಯಕ್ತಿತ್ವವನ್ನು ತೋರುತ್ತದೆ. ಸತಿವರು ಕೇವಲ ವೈದ್ಯಕೀಯ ವೃತ್ತಿಗೆ ಮಾತ್ರ ಅವಮಾನಿಸಿಲ್ಲ, ಕ್ಷೌರಿಕರನ್ನು ಅಪಮಾನಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ವೈದ್ಯಕೀಯ ವಲಯದಲ್ಲಿ ಕೆಲವು ಕಪ್ಪು ಕುರಿಗಳಿರಬಹುದು, ಆದರೆ ಎಲ್ಲಾರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಸರಿಯಲ್ಲ, ರಮೇಶ್ ಕುಮಾರ್ ಸಚಿವರಾಗಿಲು ಅರ್ಹರಲ್ಲ ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಸಿಎಂ ಸಿದ್ದರಾಮಯ್ಯ ರಮೇಶ್ ಕುಮಾರ್ ಅವರನ್ನು ಸಂಪುಟದಿಂದ ವಜಾಗೊಳಿಸದಿದ್ದರೆ, ರಾಜ್ಯದ ಶೇ,80 ರಷ್ಟು ವೈದ್ಯರು ತಮ್ಮ ವೃತ್ತಿ ತೊರೆಯಲಿದ್ದಾರೆ ಎಂದು ರವೀಂದ್ರ ಹೇಳಿದ್ದಾರೆ.
ಕೆಲವು ವೈದ್ಯರು ತುಂಬಾ ಶ್ರೀಮಂತರಾಗಿದ್ದು ಐಷಾರಾಮಿ ಕಾರಿನಲ್ಲಿ ಓಡಾಡುತ್ತಾರೆ ಎಂಬುದು ಕೆಲವರ ಕಲ್ಪನೆಯಾಗಿದೆ. ಆದರೆ  ವೈದ್ಯರು ಆ ಕಾರುಗಳಿಗೆ ಇಎಂಐ ಕಟ್ಟುತ್ತಾರೆ ಎಂಬುದು ಆ ಜನಗಳಿಗೆ ಗೊತ್ತಿರುವುದಿಲ್ಲ ಎಂದು ತಿಳಿದಿರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com