ಶಿವಮೊಗ್ಗ: ರ್ಯಾಗಿಂಗ್ ನಿಂದ ನೊಂದು ಎಂಬಿಬಿಎಸ್ ವಿದ್ಯಾರ್ಥಿ ನೇಣಿಗೆ ಶರಣು

ಶಿವಮೊಗ್ಗ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಸೈಎಂಎಸ್) ನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಹಿರಿಯ ವಿದ್ಯಾರ್ಥಿಗಳ ರ್ಯಾಂಗಿಂಗ್ ನಿಂದ ಬೇಸತ್ತು.....
ಶಿವಮೊಗ್ಗ: ರ್ಯಾಗಿಂಗ್ ನಿಂದ ನೊಂದು ಎಂಬಿಬಿಎಸ್ ವಿದ್ಯಾರ್ಥಿ ನೇಣಿಗೆ ಶರಣು
ಶಿವಮೊಗ್ಗ: ರ್ಯಾಗಿಂಗ್ ನಿಂದ ನೊಂದು ಎಂಬಿಬಿಎಸ್ ವಿದ್ಯಾರ್ಥಿ ನೇಣಿಗೆ ಶರಣು
ಶಿವಮೊಗ್ಗ: ಶಿವಮೊಗ್ಗ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಸೈಎಂಎಸ್) ನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಹಿರಿಯ ವಿದ್ಯಾರ್ಥಿಗಳ ರ್ಯಾಂಗಿಂಗ್ ನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರದ  ಬೇಗೂರು ಗ್ರಾಮದವನಾದ ರಘು ಎಸ್ ಜಿ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಪೋಲೀಸರು ತಿಳಿಸಿದ್ದಾರೆ.
ರಘು ತಂದೆ ಗುರೂಮೂರ್ತಿ, ಹೊಸೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಅಟೆಂದರ್ ಆಗಿದ್ದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತಮ್ಮ ಮಗ ಹಿರಿಯ ವಿದ್ಯಾರ್ಥಿಗಳ ರ್ಯಾಗಿಂಗ್ ನಿಂದ ಖಿನ್ನತೆ ಗೆ ಒಳಗಾಘಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು  ಅವರು ತಿಳಿಸಿದರು.
ದೀಪಾವಳಿ ರಜೆಗೆ ರಘು ಮನೆಗೆ ಬಂದಾಗ, ತನ್ನ ಹಿರಿಯ ವಿದ್ಯಾರ್ಥಿಗಳ ಹೋಂ ವರ್ಕ್ ಮಾಡುವ ಬಗ್ಗೆ ಮಾತನಾಡಿದ್ದನು.ಅವರಿಂದ ತನಗಾಗುತ್ತಿರುವ ಚಿತ್ರಹಿಂಸೆ ಬಗ್ಗೆ ಕೂಡಾ ಪ್ರಸ್ತಾಪಿಸಿದ್ದ. ಗುರುಮೂರ್ತಿ ದೂರಿನಲ್ಲಿ ದಾಖಲಿಸಿದ್ದಾರೆ.
ರಘು ಭಾನುವಾರ ಸಂಜೆ 4 ಗಂಟೆಗೆ ಹಾಸ್ಟೆಲ್ ಗೆ ಮರಳಿದ್ದನು. ಆತನ ಸಹಪಾಠಿ ಕೆಲಸದ ಮೇಲೆ ಕ್ಜೆಲ ಕಾಲ ಹೊರ ಹೋಗಿ ಮರಳುವಾಗ ಒಅಳಗಿನಿಂದ ಕೋಣೆ ಳಾಕ್ ಆಗಿರುವುದು ಗಮನಕ್ಕೆ ಬಂದಿದೆ. ಆತ ಸಂಶಯಗೊಂಡು ಇತರೆ ವಿದ್ಯಾರ್ಥಿಗಳನ್ನು ಕರೆದಿದ್ದಾನೆ. ಎಲ್ಲರೂ ಒಟ್ಟಾಗಿ ಬಾಗಿಲು ಒಡೆದು ಒಳನುಗ್ಗಿದಾಗ ರಘು ನೇಣು ಹಾಕಿಕೊಂಡಿರುವುದು ತಿಳಿದುಬಂದಿತು ಎಂದು ರಘು ಸಹಪಾಠಿ ವಿವರಿಸಿದ್ದಾರೆ.
ಅದೇ ತಕ್ಷಣ ಬೇರಾರಿಗೂ ವಿಷಯ ತಿಳಿಸದ ವಿದ್ಯಾರ್ಥಿಗಳು ರಘು ಮೃತದ್ಫೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದರು. ಅದಾದ ಬಳಿಕ ಪೋಲೀಸರು ಮೃತದೇಹದ ಮ ರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಅವನ ಪೋಷಕರಿಗೆ ಒಪ್ಪಿಸಿದರು. ಈ ವೇಳೆ ಸ್ಥಳೀಯರುಮತ್ತು ರಘು ಸಂಬಂಧಿಕರು ಹಾಸ್ಟೆಲ್ ವಾರ್ಡನ್ ಸೇರಿ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ಒತ್ತಾಯಿಸಿದ್ದಾರೆ. 
ಸಾವಿಗೆ ನಿಖರ ಕಾರಣ ತಿಳಿದಿಲ್ಲ.. ಕಳೆದ ಹತ್ತು ವರ್ಷಗಳಲ್ಲಿ, ಕಾಲೇಜಿನಲ್ಲಿ ರ್ಯಾಗಿಂಗ್ ಕುರಿತು ಯಾವುದೇ ದೂರುಗಳು ಬಂದಿಲ್ಲ ಎಂದು ಎಸ್ ಐಎಂಎಸ್ ನಿರ್ದೇಶಕ ಡಾ. ಸುಶೀಲ್ ಕುಮಾರ್  ಎಕ್ಸ್ ಪ್ರೆಸ್ ಗೆ  ಹೇಳಿದ್ದಾರೆ.
"ನಾವು ವಿದ್ಯಾರ್ಥಿಗಳು ಮತ್ತು ಅವರ ಕೊಠಡಿ ಸಹವಾಸಿಗಳನ್ನು ಪ್ರಶ್ನಿಸಿದ್ದೇವೆ. ವಿದ್ಯಾರ್ಥಿಗಳೊಂದಿಗೆ ಸಂವಹನದ ಪ್ರಕಾರ, ಯಾವ ರ್ಯಾಗಿಂಗ್ ನಡೆದಿರುವ ಕುರುಹೂ ದೊರೆಯಲಿಲ್ಲ.  ಕಾಲೇಜಿನ ರ್ಯಾಗಿಂಗ್ ವಿರೋಧಿ ಸಮಿತಿಯ ಸದಸ್ಯರು ಸಭೆಯನ್ನು ನಡೆಸಿ ಎಲ್ಲ ಸ್ನೇಹಿತರ ಅಭಿಪ್ರಾಯಗಳನ್ನು ತೆಗೆದುಕೊಂಡಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ವರದಿಯನ್ನು ಕಳುಹಿಸಲಾಗಿದೆ. ಈಗ ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ "ಎಂದು ಅವರು ಹೇಳಿದರು.
ರಘು ವೈದ್ಯರಾಗುವ ಆಸೆ ಹೊಂದಿದ್ದನು, ತನ್ನ ಗುರಿ ಸಾಧನೆಗಾಗಿ ಸರ್ಕಾರಿ ವೈದ್ಯ ಸೀಟು ಪಡೆಯಲು ನಡೆಸಿದ ಮೊದಲ ಪ್ರಯತ್ನ ವಿಫಲವಾಗಿತ್ತು. ಆದರೆ  2017 ರಲ್ಲಿ ಎರಡನೇ ಬಾರಿಗೆ ಸಿಇಟಿ ಬರೆದ ರಘು ತಮ್ಮ ತವರು ಜಿಲ್ಲೆಯಲ್ಲಿಯೇ ವೈದ್ಯಕೀಯ ಶಿಕ್ಷಣ ಸೀಟು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com