ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಮಾದರಿಯಲ್ಲೇ ಬಾಣಸವಾಡಿ ರೈಲು ನಿಲ್ದಾಣ ಅಭಿವೃದ್ಧಿ!

ಬಾಣಸವಾಡಿ ರೈಲ್ವೆ ನಿಲ್ದಾಣದಲ್ಲಿ ಕೇರಳದಿಂದ ಬಂದಿದ್ದ ಎರಡು ರೈಲುಗಳು ನಿಲುಗಡೆಯಾಗಿವೆ. ಈ ಬದಲಾವಣೆಯು ಮುಖ್ಯವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ನ (ಬೆಂಗಳೂರು ನಗರ) ರೈಲ್ವೆ ....
ಬಾಣಸವಾಡಿ ರೈಲು ನಿಲ್ದಾಣ
ಬಾಣಸವಾಡಿ ರೈಲು ನಿಲ್ದಾಣ
ಬೆಂಗಳೂರು: ಬಾಣಸವಾಡಿ ರೈಲ್ವೆ ನಿಲ್ದಾಣದಲ್ಲಿ ಕೇರಳದಿಂದ ಬಂದಿದ್ದ ಎರಡು ರೈಲುಗಳು ನಿಲುಗಡೆಯಾಗಿವೆ. ಈ ಬದಲಾವಣೆಯು ಮುಖ್ಯವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ನ (ಬೆಂಗಳೂರು ನಗರ) ರೈಲ್ವೆ ನಿಲ್ದಾಣ ಕ್ಕೆ ಸಮಾನಾಂತರವಾಗಿ ಬಾನಸವಾಡಿ ಅರಿಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದೆ. ಆರು ತಿಂಗಳ ಹಿಂದೆ ಬೆಂಗಳೂರು ರೈಲ್ವೇ ವಿಭಾಗವು ನೀಡಿದ್ದ ಪ್ರಸ್ತಾವನೆಗೆ ಗೆ ರೈಲ್ವೆ ಬೋರ್ಡ್ ಇತ್ತೀಚೆಗೆ ಹಸಿರು ನಿಶಾನೆ ನೀಡಿದೆ.
ಬೆಂಗಳೂರು ಕೆಎಸ್ಆರ್  ನಿಂದ ಬೆಂಗಳೂರು-ಎರ್ನಾಕುಲಂ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 22608), ಸೋಮವಾರದಂದು ಸಂಚರಿಸುವ ರೈಲು ಜನವರಿ 4 ರಿಂದ ಬಾನಸವಾಡಿಯಿಂದ ಹೊರಡಲಿದೆ. ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ವಾರಕ್ಕೆ ಎರಡು ಬಾರಿ (ಮಂಗಳವಾರ ಮತ್ತು ಗುರುವಾರ ) ಸಂಚರಿಸುವ ರೈಲು (ರೈಲು ಸಂಖ್ಯೆ 12684),  ಮುಂದಿನ ವರ್ಷ ಜನವರಿ 8 ರಿಂದ ಬಾಣಸವಾಡಿಯಿಂದ ಸಂಚಾರ ನಡೆಸಲಿದೆ. ಅದೇ ರೀತಿಯಲ್ಲಿ ಕೇರಳದಿಂದ ಹಿಂತಿರುಗುವ ರೈಲುಗಳೂ ಸಹ ಬಾಣಸವಾಡಿಯಲ್ಲಿಯೇ ತಮ್ಮ ಸಂಚಾರ ಕೊನೆಗೊಳಿಸುತ್ತವೆ.  ಪ್ರಸ್ತುತ ಎರಡೂ ರೈಲುಗಳು ಕೆ.ಎಸ್.ಆರ್ ನಿಂದ ಸಂಜೆ 6.45 ಕ್ಕೆ ಹೊರಡುತ್ತವೆ, ಎರ್ನಾಕುಲಂ ನಿಂದ ಹಿಂತಿರುಗುವ ರೈಲುಗಳು ಬೆಳಗ್ಗೆ 4 ಗಂಟೆಗೆ ನಿಲ್ದಾಣ ತಲುಪುತ್ತವೆ.ಮುಂದಿನ ದಿನಗಳಲ್ಲಿ ಬಾಣಸವಾಡಿಯಿಂದಲೂ ಇದೇ ಸಮಯ ಪಾಲನೆ ಆಗಲಿದೆ.
"ಅನೇಕ ಕೇರಳೀಯರು ಬಾಣಸವಾಡಿ, ಕೆ ಆರ್ ಪುರಮ್, ಕಾರ್ಮೆಲಾರಾಮ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಅವರಿಗೆ ಈಗ ಮನೆಗಳು ಹತ್ತಿರವಾಗುತ್ತದೆ. ಕೆಎಸ್ಆರ್ ಮತ್ತು ಯಶವಂತಪುರ ಪ್ರಮುಖ ನಿಲ್ದಾಣ ದಲ್ಲಿ ರೈಲು ಸಂಚಾರ ಸರಾಗವಾಗಲು ಇದರಿಂದ ಅನುಕೂಲವಾಗಲಿದೆ".ಎಂದು ಉನ್ನತ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸರಾಸರಿ 124 ಎಕ್ಸ್ ಪ್ರೆಸ್ ರೈಲುಗಳು ಮತ್ತು 98 ಪ್ಯಾಸೆಂಜರ್ ರೈಲುಗಳು ಕೆಎಸ್ಆರ್ ಮತ್ತು ಯಶವಂತಪುರ ದಿಂದ ದಿನಂಪ್ರತಿ ಸಂಚಾರ ನಡೆಸುತ್ತವೆ. "ಬೆಂಗಳೂರು ಕಂಟೋನ್ಮೆಂಟ್ ಮೂಲಕ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳ ಮೂಲಕ ನಾವು ಎರಡು ರೈಲುಗಳ ಸಂಚಾರ ನಡೆಸುತ್ತೇವೆ. ಮತ್ತೀಗ ನಾವು ಬಾಣಸವಾಡಿಯಿಂದ ರೈಲು ಸಂಚಾರಕ್ಕೆ ಪ್ರಯತ್ನ ನಡೆಸಿದ್ದೇವೆ. ಈ ಕ್ರಮವು ಚೆನ್ನಾಗಿ ಯಶಸ್ವಿಯಾದರೆ, ಈ ಮಾರ್ಗದಲ್ಲಿ ಇನ್ನಷ್ಟು ಸಂಖ್ಯೆಯಲ್ಲಿ ಕೇರಳ ರೈಲು ಸಂಚಾರ ಪ್ರಾರಂಭಿಸಬಹುದು."ಇನ್ನೋರ್ವ ರೈಲ್ವೆ ಅಧಿಕಾರಿಗಳು ಹೇಳಿದರು.
ಪ್ರಸ್ತುತ, ಬೆಂಗಳೂರಿನಿಂದ ಕೇರಳಕ್ಕೆ 10 ರೈಲುಗಳು ಸಂಚಾರ ನಡೆಸುತ್ತವೆ, ಅವುಗಳಲ್ಲಿ ಯಶವಂತಪುರ ದಿಂದ ನಾಲ್ಕು ಮತ್ತು ಕೆಎಸ್ಆರ್ ನಿಲ್ದಾಣದಿಂದ ಆರು ರೈಲುಗಳು ಕಾರ್ಯಾಚರಿಸುತ್ತವೆ ಎಂದು  ಕಾರ್ಯಾಚರಣೆಗಳ ವಿಭಾಗದಲ್ಲಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com