ಬೆಂಗಳೂರು: ಕರ್ನಾಟಕ ರಾಜ್ಯ ಅರಣ್ಯ ಅಧಿಕಾರಿ ಚಂದ್ರಕಾಂತ್ ಆರ್ ನಾಯಕ್ ಅವರು 2017ರ ಆರ್ ಬಿಎಸ್ ಅರ್ಥ್ ಹಿರೋಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಕಾಳಿ ಹುಲಿ ಅಭಯಾರಣ್ಯ ವಲಯದ ಅರಣ್ಯಾಧಿಕಾರಿ ಚಂದ್ರಕಾಂತ್ ನಾಯಕ್ ಅವರಿಗೆ ಗ್ರೀನ್ ವಾರಿಯರ್ ಕ್ಯಾಟಗರಿಯಲ್ಲಿ ವಯಕ್ತಿಕ ಪ್ರಶಸ್ತಿ ನೀಡಲಾಗಿದೆ.
ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ (ಆರ್‌ಬಿಎಸ್) ನೀಡುವ ‘ಆರ್‌ಬಿಎಸ್ ಅರ್ಥ್ ಹೀರೋಸ್’ ಪ್ರಶಸ್ತಿಗೆ ಉತ್ತರ ಕನ್ನಡದ ಕಾಳಿ ಹುಲಿ ಅಭಯಾರಣ್ಯದ ಉಪ ವಲಯ ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ್ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ ರು.2 ಲಕ್ಷ ನಗದು ಒಳಗೊಂಡಿದೆ. ನವದೆಹಲಿಯಲ್ಲಿ ಗುರುವಾರ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕುಳಗಿ, ಕುಂಬಾರವಾಡಾ ವನ್ಯಜೀವಿ ವಲಯದಲ್ಲಿ ಕಳ್ಳಬೇಟೆ ಹಾಗೂ ಮರದ ಮಾಫಿಯಾಕ್ಕೆ ಅವರು ಕಡಿವಾಣ ಹಾಕಿದ್ದರು. ಚಿಮ್ಮುವ ಕಪ್ಪೆಯ ಹೊಸ ಪ್ರಭೇದವು ಕುಮಟಾ ತಾಲ್ಲೂಕಿನ ಸಾಣಿಕಟ್ಟದಲ್ಲಿ 2015ರಲ್ಲಿ ಬಾರಿ ಕಂಡುಬಂದಿತ್ತು. ಇದರ ಪತ್ತೆಯಲ್ಲಿ ನಾಯ್ಕ್ ಅವರು ಮಹತ್ತರ ಪಾತ್ರ ವಹಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ಸಾನೇಗಟ್ಟ ಗ್ರಾಮದ ನಾಯಕ್ ತಮಗೆ ಈ ಪ್ರಶಸ್ತಿ ಲಭಿಸಿರುವುದಕ್ಕೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.