ಕೊಲ್ಲೂರು ಮೂಕಾಂಬಿಕೆಗೆ ಅಕ್ಟೋಬರ್ ತಿಂಗಳಲ್ಲಿ ಬಂದ ಹರಕೆ ಮೊತ್ತ 1 ಕೋಟಿಗೂ ಅಧಿಕ!

ಅಕ್ಟೋಬರ್ ತಿಂಗಳು ಒಂದರಲ್ಲಿಯೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹುಂಡಿಗೆ 1,10,66,278 ರೂಪಾಯಿ ಆದಾಯ ...
ಕೊಲ್ಲೂರು ದೇವಸ್ಥಾನ
ಕೊಲ್ಲೂರು ದೇವಸ್ಥಾನ
Updated on
ಉಡುಪಿ: ಅಕ್ಟೋಬರ್ ತಿಂಗಳು ಒಂದರಲ್ಲಿಯೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹುಂಡಿಗೆ 1,10,66,278 ರೂಪಾಯಿ ಆದಾಯ ಬರುವ ಮೂಲಕ ಅತಿ ಹೆಚ್ಚಿನ ಗಳಿಕೆಯ ದೇವಸ್ಥಾನ ಎಂಬ ದಾಖಲೆಗೆ ಪಾತ್ರವಾಗಿದೆ. 
ದೇವಸ್ಥಾನದ ಹುಂಡಿಗೆ ಕಳೆದ 18 ತಿಂಗಳು ಹಿಂದೆ ಒಂದು ಕೋಟಿ ರೂಪಾಯಿಗೂ ಅಧಿಕ ಆದಾಯ ಬಂದು ದಾಖಲೆಯಾಗಿತ್ತು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಈ ತಿಂಗಳ 1ರಿಂದ 24ರವರೆಗೆ ಹುಂಡಿಗೆ 1,10.66,278 ಕೋಟಿ ರೂಪಾಯಿ ಬಂದರೆ  ಭಕ್ತರು 870 ಗ್ರಾಂ ಚಿನ್ನ, 3.2 ಕೆಜಿ ಬೆಳ್ಳಿ ದಾನ ನೀಡಿದ್ದಾರೆ. ಇದುವರೆಗೆ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದ ಅತಿ ಹೆಚ್ಚಿನ ಆದಾಯ ಇದಾಗಿದೆ. ದೇವಸ್ಥಾನಕ್ಕೆ ಬಂದ ಹರಕೆಯನ್ನು ನಿನ್ನೆ ಎಣಿಸಲಾಯಿತು.
2014 ಮೇ ತಿಂಗಳಲ್ಲಿ ಇದಕ್ಕೂ ಮುನ್ನ ಅತಿ ಹೆಚ್ಚು 1.07 ಕೋಟಿ ರೂಪಾಯಿ ಆದಾಯ ಬಂದಿತ್ತು. 2013ರಲ್ಲಿ ಕೊಲ್ಲೂರು ದೇವಸ್ಥಾನದ ಹುಂಡಿಗೆ 84 ಲಕ್ಷ ರೂಪಾಯಿ ಆದಾಯ ಬಂದಿತ್ತು.
ದೇವಸ್ಥಾನದ ಹುಂಡಿಗೆ ಪ್ರತಿ ತಿಂಗಳು 60ರಿಂದ 70 ಲಕ್ಷ ರೂಪಾಯಿ ಬರುತ್ತಿದ್ದು ಪ್ರತಿ ತಿಂಗಳು ಹೆಚ್ಚು ಕಡಿಮೆ ಇಷ್ಟೇ ಹಣ ಬರುತ್ತದೆ.
2008-09ರಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆದಾಯ 2013-14ಕ್ಕೆ 26.95 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಭಕ್ತರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ. ಕೇರಳ, ತಮಿಳು ನಾಡುಗಳಿಂದಲೂ ಭಕ್ತರು ಆಗಮಿಸುತ್ತಾರೆ. ಈ ತಿಂಗಳು ದಸರಾ ಮತ್ತು ದೀಪಾವಳಿಗೆ ಸಾಲು ಸಾಲು ರಜೆಗಳಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಯಿತು ಎನ್ನುತ್ತಾರೆ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಎಂ ಶೆಟ್ಟಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com