"ಬೆಂಗಳೂರು ನಗರವು ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇದು ದೇಶದಾದ್ಯಂತದ ಮತ್ತು ವಿದೇಶಗಳಿಂದಲೂ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಹೆಚ್ಚಿನ ಸಂಖ್ಯೆಯ ರಸ್ತೆಗಳಿವೆ, ಎನ್ನುವುದು ನಿಸ್ಸಂಶಯ. ಹಾಗೆಂದು ರಸ್ತೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾದದಿರುವುದು ಕ್ಷಮ್ಯವಲ್ಲ.ನಗರದ ರಸ್ತೆಗಳ ಪರಿಸ್ಥಿತಿ ನಗರದ ಬೆಳವಣಿಗೆ, ಅಭಿವೃದ್ಧಿಯ ಕುರಿತು ಅಧಿಕಾರಿಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದುವೇ ದೇಶ ಮತ್ತು ವಿದೇಸದಿಂದ ಹೂಡಿಕೆದಾರರನ್ನು ಆಕರ್ಷಿಸುತ್ತದೆ" ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.