ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ಏಳು ವರ್ಷದ ನಂತರವೂ ತನ್ನ ಪೋಷಕನನ್ನು ಗುರುತು ಹಿಡಿದು ಆತನ ಹಿಂದೆ ಬಿದ್ದ ಜಿಂಕೆ!

ತಮ್ಮನ್ನು ಸಾಕಿದವರನ್ನು ಹಾಗೂ ತಮ್ಮ ಬಗ್ಗೆ ಕಾಳಜಿ ವಹಿಸಿದವರನ್ನು ಪ್ರಾಣಿಗಳು ಎಂದಿಗೂ ಮರೆಯುವುದಿಲ್ಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ, ಇದಕ್ಕೆ...
Published on
ಬಳ್ಳಾರಿ: ತಮ್ಮನ್ನು ಸಾಕಿದವರನ್ನು ಹಾಗೂ ತಮ್ಮ ಬಗ್ಗೆ ಕಾಳಜಿ ವಹಿಸಿದವರನ್ನು ಪ್ರಾಣಿಗಳು ಎಂದಿಗೂ ಮರೆಯುವುದಿಲ್ಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ, ಇದಕ್ಕೆ ಜೀವಂತ ನಿದರ್ಶನ ಬಳ್ಳಾರಿಯ ಜಿಂಕೆ ಮರಿಯಾಗಿದೆ.
ಬಳ್ಳಾರಿ ಮೃಗಾಲಯದಲ್ಲಿ 7 ವರ್ಷದ ಹಿಂದೆ ಸುಂದರಿ ಎಂಬ ಜಿಂಕೆಮರಿ ಜನ್ಮ ತಾಳಿತ್ತು, ಬಳ್ಳಾರಿ ಮೃಗಾಲಯದಲ್ಲಿದ್ದ 60 ಬ್ಲಾಕ್ ಬಕ್ಸ್ ಪೈಕಿ ಸುಂದರಿ ಕೂಡ ಒಬ್ಬಳಾಗಿದ್ದಳು. ಈಗ ಅವುಗಳನ್ನು ಸದ್ಯ ಹಂಪಿ ಬಳಿಯಿರುವ ಬಿಳಿಕ್ಕಲ್ ಮೃಗಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.
ಬಳ್ಳಾರಿ ಮೃಗಾಲಯದಲ್ಲಿ ಬಸವರಾಜ್ ಪ್ರಾಣಿಗಳಿಗೆ ಆಹಾರ ನೀಡುವ ಹಾಗೂ ಊಟ ತಿನ್ನಿಸುವ  ಮೇಲ್ವಿಚಾರಕರಾಗಿದ್ದರು. ಅರಣ್ಯ ಇಲಾಖೆಯ ವಾರ್ಷಿಕ ವರ್ಗಾವಣೆ ನಿಯಮದಂತೆ ಬಸವರಾಜ್ ಅವರನ್ನು ಕಮಲಪುರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು. ಸದ್ಯ ಬಸವರಾಜ್ ಅಟಲ್ ಬಿಹಾರಿ ವಾಜಪೇಯಿ  ಮೃಗಾಲಯದ ಪ್ರಾಣಿಗಳಿಗೆ ಆಹಾರ ತಿನ್ನಿಸುವ ಮೇಲ್ವಿಚಾರಕರಾಗಿ ವರ್ಗಾವಣೆ ಗೊಂಡಿದ್ದಾರೆ. 
ನವೆಂಬರ್ 3 ರಿಂದ ಈ ಮೃಗಾಲಯ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ, ಇಲ್ಲಿಯೇ ವಾಸವಿರುವ ಸುಂದರಿ ಆಕಸ್ಮಿಕವಾಗಿ ತನ್ನ ಕೇರ್ ಟೇಕರ್  ನೋಡಿ, ಅವರನ್ನು ಗುರುತಿಸಿ ಆತನ ಹಿಂದೆ ಹಿಂದೆಯೇ ಸುತ್ತುತ್ತಿದ್ದಾಳೆ. 7 ವರ್ಷಗಳ ಹಿಂದೆ ಸುಂದರಿ ಹುಟ್ಟಿದಾಗ ತನಗೆ ಹಾಲು ಕುಡಿಸಿ ಬೆಳೆಸಿದ್ದ ಬಸವರಾಜ್ ನನ್ನು ಆಕೆ ಮರೆತಿಲ್ಲ, 
ಬಸವರಾಜ್ ಆಹಾರ ನೋಡಲು ಹೋದರೆ ಉಳಿದೆಲ್ಲಾ ಜಿಂಕೆಗಳು ಹೆದರಿ ದೂರ ಓಡುತ್ತಿದ್ದವು. ಆದರೆ ಸುಂದರಿ ಮಾತ್ರ ಬಸವರಾಜ್ ಹಿಂದಿಂದೆಯೇ ಸುತ್ತುತ್ತಿದ್ದಳು. ಈ ಸುಂದರಿ ಜಿಂಕೆ ಯಾವಾಗಲು ನನ್ನ ಹಿಂದೆಯ ಇರುತ್ತಿತ್ತು, ನಾನು ಗೇಟ್ ಬಾಗಿಲು ಮುಚ್ಚಿದರೇ, ಸುಮಾರು ಅರ್ಧ ಗಂಟೆಗಳ ಕಾಲ ಕಾದು ನಂತರ  ಬೇರೆ  ಜಿಂಕೆಗಳ ಜೊತೆ ಹೋಗುತ್ತಿತ್ತು. 
ಪ್ರಾಣಿಗಳ ಈ ವರ್ತನೆ ನನಗೆ ತುಂಬಾ ಭಿನ್ನವೆನಿಸುತ್ತಿದೆ.ಈ ಜಿಂಕೆ ಮರಿ ನನ್ನನ್ನು ಇಷ್ಟು ವರ್ಷಗಳಾದರೂ ನೆನಪಿನಲ್ಲಿಟ್ಟುಕೊಂಡಿರುವುದು ನನಗೆ ಆಶ್ಚರ್ಯ ತರಿಸಿದೆ ಎಂದು ಬಸವರಾಜ್ ಹೇಳಿದ್ದಾರೆ.
ಬಳ್ಳಾರಿಯ  ಗುದ್ದೂರು ಮೂಲದ ಬಸವರಾಜ್ ಅರಣ್ಯ ಇಲಾಖೆಯ ನೌಕರರಾಗಿದ್ದಾರೆ, ಬಸವರಾಜ್ ಸದ್ಯ ಕಾವಲುಗಾರನಾಗಿ ನೇಮಕಗೊಂಡಿದ್ದಾರೆ, ಪ್ರಾಣಿಗಳನ್ನು ಪ್ರೀತಿಸುವ ಅವರು ಅವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ,  ಈಗ ಸುಂದರಿ ಜೊತೆ ಅವರಿಗೆ ವಿಶೇಷ ಪ್ರೀತಿ ವಾತ್ಸಲ್ಯ ಬೆಳೆದಿದೆ. ಸುಂದರಿಯನ್ನು ಬಸವರಾಜ್ ಸುಂದೇ ಎಂದು ಕರೆಯುತ್ತಾರೆ,  ಸುಂದೇ ಎಂದು ಕರೆದ ಕೂಡಲೇ ಜಿಂಕೆ ಮರಿ ಪ್ರತಿಕ್ರಿಯಿಸುತ್ತದೆ. ಸುಂದರಿ ನನ್ನ ಮಗಳಿದ್ದಂತೆ ಎಂದು ಬಸವರಾಜ್ ಹೇಳಿದ್ದಾರೆ. 
ಬ್ಲ್ಯಾಕ್ ಬಕ್ಸ್ ಗುಜರಾತ್, ರಾಜಸ್ತಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಒಣ ಭೂಮಿಯಲ್ಲಿ ಕಂಡುಬರುವ  ಪ್ರಾಣಿಯಾಗಿದೆ. ಅಳಿವಿನಂಚಿನಲ್ಲಿರುವ  ಪ್ರಬೇಧದ ಜಿಂಕೆಗಳನ್ನ ವನ್ಯ ಜೀವಿ ಕಾಯಿದೆ ಪ್ರಕಾರ ರಕ್ಷಿಸಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com