ಬೆಂಗಳೂರು: ಡೇಟಿಂಗ್ ವೆಬ್ ಸೈಟ್ ನಲ್ಲಿ ಪತ್ನಿ ವಿವರ ನೀಡಿದ ಟೆಕ್ಕಿ ಬಂಧನ
ರಾಜ್ಯ
ಬೆಂಗಳೂರು: ಡೇಟಿಂಗ್ ವೆಬ್ ಸೈಟ್ ನಲ್ಲಿ ಪತ್ನಿ ಫೋಟೊ, ಮೊಬೈಲ್ ನಂಬರ್ ಹಾಕಿದ್ದ ಟೆಕ್ಕಿ ಬಂಧನ
ಡೇಟಿಂಗ್ ವೆಬ್ ಸೈಟ್ ನಲ್ಲಿ ತನ್ನ ಹೆಂಡತಿಯ ಮೊಬೈಲ್ ನಂಬರ್ ಮತ್ತು ಫೋಟೋಗಳನ್ನು ಹಾಕಿದ ಸಾಫ್ಟ್ ವೇರ್ ಉದ್ಯೋಗಿ, ಟೆಕ್ಕಿ ಒಬ್ಬನನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಡೇಟಿಂಗ್ ವೆಬ್ ಸೈಟ್ ನಲ್ಲಿ ತನ್ನ ಹೆಂಡತಿಯ ಮೊಬೈಲ್ ನಂಬರ್ ಮತ್ತು ಫೋಟೋಗಳನ್ನು ಹಾಕಿದ ಸಾಫ್ಟ್ ವೇರ್ ಉದ್ಯೋಗಿ, ಟೆಕ್ಕಿ ಒಬ್ಬನನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.
ಸಾಫ್ಟ್ ವೇರ್ ಉದ್ಯೋಗಿಯಾದ ಹರ್ಷವರ್ಧನ್ ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದು ಆತನಿಂದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಹರಿಶಿ ಗ್ರಾಮದವನಾದ ಹರ್ಷವರ್ಧನ್ ಭಟ್ ಬೆಂಗಳೂರಿನ ಕಾಸಗಿ ಸಂಸ್ಥೆಯೊಂದರ ಉದ್ಯೋಗಿ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಈತನಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಪ್ರತಿದಿನವೂ ಪತ್ನಿಯೊಡನೆ ಜಗಳ ಮಾಡುತ್ತಿದ್ದ ಹರ್ಷವರ್ಧನ್ ವರ್ತನೆಯಿಂದ ಬೇಸತ್ತ ಪತ್ನಿ ಆತನಿಂದ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಕೋರ್ಟ್ ನಲ್ಲಿದೆ.
ಇದೀಗ ಪತ್ನಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹರ್ಷವರ್ಧನ್‌ಡೇಟಿಂಗ್ ವೆಬ್ ಸೈಟ್ ನಲ್ಲಿ ವಿವರ ಹಾಕಿರುವುದಾಗಿ ಪೋಲೀಸರು ತಿಳಿಸಿದರು.
ವಧು-ವರಾನ್ವೇಷಣೆಗಾಗಿ ಇರುವ ವೆಬ್ ಸೈಟ್ ಸೇರಿದಂತೆ ಹಲವು ಡೇಟಿಂಗ್ ವೆಬ್ ಸೈಟ್ ಗಳಲ್ಲಿ ಪತ್ನಿಯ ಫೋಟೊ ಹಾಗೂ ಮೊಬೈಲ್ ನಂಬರ್ ಗಳನ್ನು ಅಪ್ ಲೋಡ್ ಮಾಡಿರುವ ಮಾಹಿತಿ ಇದೀಗ ಸಿಕ್ಕಿದ್ದು ಮಹಿಳೆ೪ಗೆ ನಾನಾ ಕಡೆಗಳಿಂದ ದೂರವಾಣಿ ಕರೆಗಳು ಬರುತ್ತಿದೆ. ಇದರಿಂದ ಆಕೆ ಮಾನಸಿಕ ಕಿರುಕುಳಕ್ಕೆ ತುತ್ತಾಗಿದ್ದಾಳೆ. ತನ್ನ ವಿವರವನ್ನು ಡೇಟಿಂಗ್ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗಿದೆ ಎಂದು ತಿಳಿದ ಆಕೆ ಪೋಲೀಸರಿಗೆ ದೂರು ನಿಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ