ಕಂಠೀರವ ಕ್ರೀಡಾಂಗಣದ ನಿರ್ದೇಶಕ ಅನುಪಮ್ ಅಗರ್ವಾಲ್ ರಿಂದ ರಾಷ್ಟ್ರೀಯ ಕ್ರೀಡಪಟುಗಳಿಗೆ ಅವಮಾನ?

ಮೈದಾನದಲ್ಲಿ ನನ್ನ ಪತ್ನಿ ಪ್ರಾಕ್ಟೀಸ್ ಮಾಡುವ ಸಮಯದಲ್ಲಿ ಯಾರೂ ಇರಬಾರದು ಎಂದು ಪತ್ನಿಗಾಗಿ ಕ್ರೀಡಾಪಟುಗಳನ್ನು ಸ್ಟೇಡಿಯಂನಿಂದ ಹೊರ ಕಳಿಸಲಾಗಿದೆ,
ಕಂಠೀರವ ಕ್ರೀಡಾಂಗಣ
ಕಂಠೀರವ ಕ್ರೀಡಾಂಗಣ
ಬೆಂಗಳೂರು: ಮೈದಾನದಲ್ಲಿ ನನ್ನ ಪತ್ನಿ ಪ್ರಾಕ್ಟೀಸ್ ಮಾಡುವ ಸಮಯದಲ್ಲಿ ಯಾರೂ ಇರಬಾರದು ಎಂದು ಪತ್ನಿಗಾಗಿ ಕ್ರೀಡಾಪಟುಗಳನ್ನು ಸ್ಟೇಡಿಯಂನಿಂದ ಹೊರ ಕಳಿಸಲಾಗಿದೆ, ಹೀಗೊಂದು ಆರೋಪ  ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್ ಅಗರವಾಲ್ ವಿರುದ್ಧ ಕೇಳಿ ಬಂದಿದೆ. 
ಬೆಂಗಳೂರು ಕಂಠೀರವ ಸ್ಟೇಡಿಯಂ  ನಲ್ಲಿ ಅನುಪಮ್ ಅಗರವಾಲ್ ರಾಷ್ಟ್ರೀಯ ಕ್ರೀಡಾಪಟುಗಳ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ತಮ್ಮ ಪತ್ನಿಗಾಗಿ ಕ್ರೀಡಾಪಟುಗಳನ್ನು ಸ್ಟೇಡಿಯಂನಿಂದ ಹೊರ ಹೋಗಲು ಹೇಳಿದ್ದಲ್ಲದೆ ಹೋಂಗಾರ್ಡ್‍ಗಳನ್ನು ಕರೆದು ಕ್ರೀಡಾಪಟುಗಳನ್ನು ಹೊರ ಹಾಕಿಸಿದ್ದಾರೆ ಎನ್ನಲಾಗಿದೆ.
ಇನ್ನು ತಮ್ಮ ಪತ್ನಿ ಪ್ರಾಕ್ಟಿಸ್ ಮಾಡುತ್ತಿರುವ ಕಾರಣ ಉಳಿದ ಕ್ರೀಡಾಳುಗಳಿಗೆ ಟ್ರ್ಯಾಕ್ ಚೇಂಜ್ ಮಾಡುವಂತೆ ಹೇಳಿದ್ದರು. ಕೋಚ್ ಯತೀಶ್​ರನ್ನು ನಿಂದಿಸಿದ್ದರು ಎಂದು ಕೋಚ್ ಆರೋಪಿಸಿದ್ದಾರೆ.
ನಿರ್ದೇಶಕರ ದಬ್ಬಾಳಿಕೆಯಿಂದ ಕಂಗಾಲಾದ ಕ್ರೀಡಾಪಟುಗಳು ಕಂಠೀರವ ಸ್ಟೇಡಿಯಂ ಬಿಟ್ಟು ಕಬ್ಬನ್ ಪಾರ್ಕ್‍ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಆದರೆ ಇದೇ ವೇಳೆ ಘಟನೆ ಸಂಬಂಧ ಪ್ರತಿಕ್ರಿಯಿಸಿದ ಅನುಪಮ್ ಅಗರವಾಲ್ ಆರೋಪವನ್ನು ನಿರಾಕರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com