ಕನಕಪುರ: ಅಭಯಾರಣ್ಯದಲ್ಲಿ ಸೋಲಾರ್ ಪ್ಲಾಂಟ್, ಅರಣ್ಯ ಇಲಾಖೆಯಿಂದ ದೂರು ದಾಖಲು

ಸಂಗಮ ವ್ಯಾಪ್ತಿಯ ಕಾವೇರಿ ವನ್ಯಜೀವಿ ಅಭಯಾರಣ್ಯದ ಹೃದಯಭಾಗದಲ್ಲಿ ಸ್ಥಲೀಯ ಭೂ ಮಾಲಿಕರು ಮತ್ತು ಚೆನ್ನೈ ಮೂಲದ ಸಂಸ್ಥೆ ಸೇರಿ ಬೃಹತ್ ಸೌರ ಸ್ಥಾವರವನ್ನು.......
ಕನಕಪುರ: ಅಭಯಾರಣ್ಯದಲ್ಲಿ ಸೋಲಾರ್ ಪ್ಲಾಂಟ್, ಅರಣ್ಯ ಇಲಾಖೆಯಿಂದ ದೂರು ದಾಖಲು
ಕನಕಪುರ: ಅಭಯಾರಣ್ಯದಲ್ಲಿ ಸೋಲಾರ್ ಪ್ಲಾಂಟ್, ಅರಣ್ಯ ಇಲಾಖೆಯಿಂದ ದೂರು ದಾಖಲು
ಬೆಂಗಳೂರು: ಸಂಗಮ ವ್ಯಾಪ್ತಿಯ ಕಾವೇರಿ ವನ್ಯಜೀವಿ ಅಭಯಾರಣ್ಯದ ಹೃದಯಭಾಗದಲ್ಲಿ  ಸ್ಥಲೀಯ ಭೂ ಮಾಲಿಕರು ಮತ್ತು ಚೆನ್ನೈ ಮೂಲದ ಸಂಸ್ಥೆ ಸೇರಿ ಬೃಹತ್ ಸೌರ ವಿದ್ಯುತ್ ಸ್ಥಾವರ ಸ್ಥಾಪನೆ ಮಾಡುತ್ತಿದ್ದಾರೆ. ಈ ವಿರುದ್ಧ ಅರಣ್ಯ ಇಲಾಖೆ ಅರಣ್ಯ ಭೂಮಿ ಅತಿಕ್ರಮಣ ಆಪಾದನೆಯಡಿ  ಎಫ್ ಐ ಆರ್ ದಾಖಲಿಸಿತ್ತು. ಕನಕಪುರ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾಖಲಾಗಿದ್ದ ಈ ಪ್ರಕರಣ ಇದೀಗ ವಿಚಾರಣೆಗೆ ಬರಲಿದೆ.
ದೊಡ್ಡ ಅಲಹಳ್ಳಿಯಲ್ಲಿ ಒಂದು ತಿಂಗಳ ಹಿಂದೆಯೇ ಪ್ರಾರಂಭವಾದ ಸೌರ ವಿದ್ಯುತ್ ಸ್ಥಾವರ ಸ್ಥಾಪನೆ ಕಾರ್ಯ. ಮಕ್ಲಂದ ಅರಣ್ಯ ಪ್ರದೇಶ, ಚಿಲನ್ವಾಡಿ ಕಾಯ್ದಿರಿಸಿದ ಅರಣ್ಯದಲ್ಲಿ 100 ಎಕರೆ ವ್ಯಾಪ್ತಿಯಲ್ಲಿ ಸೌರ ಫಲಕಗಳ ಜೋಡಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದರು. ಎಫ್ಐಆರ್ ಪ್ರಕಾರ, ಗ್ರಾಮದ ನಕ್ಷೆಗಳು ಮತ್ತು ಚಿಲನ್ವಾಡಿ ಕಾಯ್ದಿರಿಸಿದ ಅರಣ್ಯದ ದಾಖಲೆಗಳನ್ನು ಪರೀಕ್ಷಿಸಿದ ನಂತರ ಸರ್ವೆ ಸಂಖ್ಯೆ 317/6 ನ ಅತಿಕ್ರಮಣ ಆಗಿರುವುದು ಸ್ಪಷ್ಟ ಗೊಂಡಿದೆ. 
ಸಂಸ್ಥೆ ಮತ್ತು ಭೂ ಮಾಲೀಕರಿಗೆ ನೋಟೀಸು ಕಳುಹಿಸಲಾಗಿದೆ ಆದರೂ ಅವರಿಂದ ಯಾವ ಪ್ರತಿಕ್ರಿಯೆ ಬಂದಿಲ್ಲ. "ಇದು ವನ್ಯಜೀವಿ ಗಳಿರುವ ಸೂಕ್ಷ್ಮ ಪ್ರದೇಶವಾಗಿದೆ ಹೀಗಾಗಿ ಈ ಕುರಿತಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ" ಎಂದು ಅರಣ್ಯ ಅಧಿಕಾರಿ ಹೇಳಿದರು.
ಎಕ್ಸ್ ಪ್ರೆಸ್ ಜತೆ ಮಾತನಾಡುತ್ತಾ, ಡೆಪ್ಯುಟಿ ರೇಂಜ್ ಅರಣ್ಯ ಅಧಿಕಾರಿ ಟಿ. ಬಿ. ಶಿವಕುಮಾರ "ಸೋಲಾರ್ ಫಲಕ ಸ್ಥಾಪನೆಯು ಕೇವಲ ಒಂದು ತಿಂಗಳ ಹಿಂದಷ್ಟೆ ಪ್ರಾರಂಭವಾಯಿತು ಎಂದು ಹೇಳಿದರು. 100 ಎಕರೆಗಳ ಗೋಮಾಲ  ಭೂಮಿ ಗೆ ವಿದ್ಯುತ್ ಒದಗಿಸುವ ಸೌರ ವಿದ್ಯುತ್ ಸ್ಥಾವರವು ಇ೮ಲ್ಲಿ ಬರುತ್ತಲಿದೆ. ಅರಣ್ಯ ಪ್ರದೇಶದಲ್ಲಿ ಸೂಕ್ತವಾದ ಗಡಿಗಳನ್ನು ಗುರುತಿಸಲಾಗಿಲ್ಲ ಎಂದು ನಾನು ಡಿಎಫ್ಓಗೆ ಬರೆದಿದ್ದೇನೆ. ಆದಾಗ್ಯೂ, ಸೌರ ವಿದ್ಯುತ್ ಘಟಕ ನಿರ್ಮಾಣ ಕಾರ್ಯವು ಇಪಿಟಿಯನ್ನು (ಆನೆ ನಿರೋಧಕ ಕಂದಕ) ದಾಟಿಲ್ಲ." ಅವನು ಹೇಳಿದರು.
ಇದೇ ವೇಳೆ ಗೋಮಾಳ ಜಾಗವನ್ನು ಅರಣ್ಯ ಇಲಾಖೆ ಅಕ್ರಮವಾಗಿ ವಶಕ್ಕೆ ಪಡೆದಿದೆ ಎಂದು ಭೂಮಾಲೀಕನು ದೂರುತ್ತಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com