ಕೆಪಿಎಸ್ ಸಿಗೆ ಸಿಎಂ ಸಿದ್ದರಾಮಯ್ಯ ಆಪ್ತರ ನೇಮಕ: ಅಹಿಂದ ವರ್ಗದವರಿಗೆ ಆದ್ಯತೆ

ಕರ್ನಾಟಕ ಲೋಕಸೇವಾ ಆಯೋಗಕ್ಕೆ ರಾಜ್ಯ ಸರ್ಕಾರ ನಾಲ್ವರು ಸದಸ್ಯರನ್ನು ನಾಮ ನಿರ್ದೇಶನ ಮಾಡಿದೆ....
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗಕ್ಕೆ  ರಾಜ್ಯ ಸರ್ಕಾರ ನಾಲ್ವರು ಸದಸ್ಯರನ್ನು ನಾಮ ನಿರ್ದೇಶನ ಮಾಡಿದೆ.
ಸಿಎಂ ಸಿದ್ದರಾಮಯ್ಯ ಆಪ್ತರಾದ  ಕೆ,ಸಿ ಜನರಲ್ ಆಸ್ಪತ್ರೆ ಸೂಪರಿಂಡೆಂಟ್ ಡಾ. ರವಿಕುಮಾರ್,  ಮುಜರಾಯಿ ಇಲಾಖೆಯ ಆಯುಕ್ತ ಐಎಎಸ್ ಅಧಿಕಾರಿ ಷಡಕ್ಷರಿ ಸ್ವಾಮಿ, ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಲಕ್ಷ್ಮಿ ನಾರಾಯಣ, ವಕೀಲ ಶ್ರೀಕಾಂತ್ ರಾವ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದ್ದು ರಾಜ್ಯ ಪಾಲ ವಜುಬಾಯಿ ವಾಲಾ ಇವರ ನೇಮಕಕ್ಕೆ ಅನುಮೋದನೆ ನೀಡಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿದ ಕೆಪಿಎಸ್​ಸಿ ನೂತನ ಸದಸ್ಯರಲ್ಲಿ ಹೆಚ್ಚಾಗಿ ಅಹಿಂದ ವರ್ಗದವರ ಹೆಸರೇ ಕಾಣಿಸಿದ್ದು ಇದಕ್ಕೊಂದು ನಿದರ್ಶನವಾಗಿದೆ. ಡಾ. ಎಚ್​. ರವಿಕುಮಾರ್​ ಮಡಿವಾಳ ಸಮಾಜದರಾಗಿದ್ರೆ, ಲಕ್ಷ್ಮೀನಾರಾಯಣ ಸವಿತಾ ಸಮಾಜದವರಾಗಿದ್ದಾರೆ,  ವಕೀಲ ಶ್ರೀಕಾಂತ್ ರಾವ್​ಉಪ್ಪಾರ ಸಮಾಜದವರಾಗಿದ್ದು, ಸುತ್ತೂರು ಸ್ವಾಮೀಜಿ ಸಹೋದರ ಷಡಕ್ಷರಸ್ವಾಮಿ ಲಿಂಗಾಯತರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com