ಸಿದ್ದರಾಮಯ್ಯ
ರಾಜ್ಯ
ಮಂಗಳೂರು ಚಲೋ ತಡೆಯುವುದು ಬೇಡ, ಶಾಂತಿಗೆ ಧಕ್ಕೆಯಾದ್ರೆ ಕ್ರಮ ಕೈಗೊಳ್ಳಿ-ಗೃಹ ಸಚಿವರಿಗೆ ಸಿಎಂ ಸೂಚನೆ
ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಪ್ರತಿಭಟನಾ ರ‍್ಯಾಲಿಯನ್ನು ತಡೆಯುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಗೃಹ ಸಚಿವರಿಗೆ ಹೇಳಿದ್ದಾರೆಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಬೆಂಗಳೂರು: ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ, ಪಿಎಫ್ಐ, ಕೆ.ಎಫ್.ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಪ್ರತಿಭಟನಾ ರ‍್ಯಾಲಿಯನ್ನು ತಡೆಯುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಗೃಹ ಸಚಿವರಿಗೆ ಹೇಳಿದ್ದಾರೆಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.
ರ‍್ಯಾಲಿಯನ್ನು ತಡೆಯುವುದು ಬೇಡ, ಆದರೆ ಶಾಂತಿಗೆ ಧಕ್ಕೆ ಉಂಟಾದ್ರೆ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಶಾಂತಿಗೆ ಧಕ್ಕೆ ಉಂಟಾದರೆ ಕಠಿಣ ಕ್ರಮ ಕೈಗೊಳ್ಳಿ, ಹೆಚ್ಚಿನ ತುಕಡಿಗಳನ್ನು ತರಿಸಿಕೊಳ್ಳಿ ಎಂದು ಸಿಎಂ ಗೃಹ ಸಚಿವರಿಗೆ ಸೂಚನೆ ನೀಡಿದ್ದಾರೆ.
ಬಿಜೆಪಿ ಹಮ್ಮಿಕೊಂಡಿರುವ ರ‍್ಯಾಲಿಯನ್ನು ರಾಜ್ಯ ಸರ್ಕಾರ ತಡೆಗಟ್ಟಲು ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು, ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರ‍್ಯಾಲಿಯನ್ನು ತಡೆಯುವುದು ಬೇಡ ಶಾಂತಿಗೆ ಧಕ್ಕೆಯಾದ್ರೆ ಕ್ರಮ ಕೈಗೊಳ್ಳಿ ಎಂಬ ಸೂಚನೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ