ಮಂಗಳೂರು ಚಲೋ: ಬೈಕ್ ರ‍್ಯಾಲಿ ಬೇಡ, ಕಾಲ್ನಡಿಗೆ ಜಾಥಾ ಮಾಡಿ: ಬಿಜೆಪಿಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಲಹೆ

ಹಿಂದೂ ಸಂಘಟನೆಯ ಯುವಕರ ಹತ್ಯೆಗಳನ್ನು ಖಂಡಿಸಿ, ಆ ಪ್ರಕರಣಗಳನ್ನು ಸಿಬಿಐ ಗೆ ವಹಿಸಬೇಕೆಂದು ಆಗ್ರಹಿಸಿ ಸೆ.05 ರಂದು ಬಿಜೆಪಿ ಮಂಗಳೂರು ಚಲೋ ಪ್ರತಿಭಟನೆಯ ಭಾಗವಾಗಿ ಕೈಗೊಂಡಿರುವ ಬೈಕ್ ರ‍್ಯಾಲಿ
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ
ಬೆಂಗಳೂರು: ಹಿಂದೂ ಸಂಘಟನೆಯ ಯುವಕರ ಹತ್ಯೆಗಳನ್ನು ಖಂಡಿಸಿ, ಆ ಪ್ರಕರಣಗಳನ್ನು ಸಿಬಿಐ ಗೆ ವಹಿಸಬೇಕೆಂದು ಆಗ್ರಹಿಸಿ ಸೆ.05 ರಂದು ಬಿಜೆಪಿ ಮಂಗಳೂರು ಚಲೋ ಪ್ರತಿಭಟನೆಯ ಭಾಗವಾಗಿ ಕೈಗೊಂಡಿರುವ ಬೈಕ್ ರ‍್ಯಾಲಿ ಬಗ್ಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. 
ಮಂಗಳೂರು ಚಲೋ, ಬೈಕ್ ರ‍್ಯಾಲಿ ವೇಳೆಯಲ್ಲಿ ಅಹಿತಕರ ಘಟನೆಗಳು ಉಂಟಾದರೆ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ಬಿಜೆಪಿಯವರು ಬೈಕ್ ರ‍್ಯಾಲಿಗಾಗಿ ಅನುಮತಿ ಕೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಅವಕಾಶ ಇದೆ. ಆದರೆ ಬೈಕ್ ರ‍್ಯಾಲಿಯಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಜನರಿಗೆ ತೊಂದರೆಯುಂಟಾಗಲಿದೆ. ಈ ಹಿನ್ನೆಲೆಯಲ್ಲಿ ಕಾಲ್ನಡಿಗೆ ಜಾಥ ಕೈಗೊಳ್ಳುವಂತೆ ಬಿಜೆಪಿ ನಿಯೋಗಕ್ಕೆ ಮನವಿ ಮಾಡಿದೆ. ನಾವೂ ಸಹ ಬಳ್ಳಾರಿಗೆ ಕಾಲ್ನಡಿಗೆಯಲ್ಲೇ ಪಾದಯಾತ್ರೆ ಮಾಡಿದ್ದೆವು. ಆದರೆ ಬಿಜೆಪಿ ಪಕಷದವರು ನಮ್ಮ ಮನವಿಯನ್ನು ಒಪ್ಪಿಲ್ಲ ಎಂದು ಸಚಿವರು ತಿಳಿಸಿದ್ದಾರೆ. 
ಮಂಗಳೂರು ಚಲೋ, ಬೈಕ್ ರ‍್ಯಾಲಿಗೆ ಅನುಮತಿ ನೀಡುವುದರ ಬಗ್ಗೆ ಎಸ್ ಪಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com