'ಗೌರಿ ಲಂಕೇಶ್ ಅವರ ಹೆಸರನ್ನು ಮೊದಲ ಬಾರಿಗೆ ಕೇಳಿದಾಗ ನನಗೆ 16 ವರ್ಷ. ಅದು ನೀನಾಸಂ ನ ಸಾಂಸ್ಕೃತಿಕ ಶಿಬಿರದಲ್ಲಿ, ನೀನಾಸಂ ಅನ್ನು ಮಠ, ಹಾಗೂ ಬ್ರಾಹ್ಮಣ ಬುದ್ಧಿ ಜೀವಿಗಳ ಶಿಬಿರ ಎಂದು ಕರೆದರು. ಅಲ್ಲಿ ಕೇವಲ ಎರಡು ದಿನಗಳು ಇದ್ದ ಅವರು, ವಾಪಸಾದರು, ಅದು ನನಗೆ ಹೊಸತು. ಯು. ಆರ್ ಅನಂತಮೂರ್ತಿ ಮತ್ತು ಶಿವಮೊಗ್ಗ ಸುಬ್ಬಣ್ಣ ಅವರನ್ನು ಪ್ರಶ್ನಿಸಲು ಇವರಿಗೆ ಎಷ್ಟು ಧೈರ್ಯ ಎದುಕೊಂಡೆ. ಸಪೂರವಾಗಿದ್ದ, ಸ್ಟೈಲಿಶ್ ಆದ ಬಟ್ಟೆ ತೊಟ್ಟಿದ್ದ ಆಕೆ ಗೌರಿ ಲಂಕೇಶ್ ಎಂದು ಆಗ ನನಗೆ ತಿಳಿಯಿತು'.