ಮಡಿಕೇರಿ: ಎದೆಗೆ ಗುಂಡು ಹಾರಿಸಿಕೊಂಡು ನಿವೃತ್ತ ಡಿವೈಎಸ್ಪಿ ಆತ್ಮಹತ್ಯೆ

ಮಡಿಕೇರಿಯ ಮರಗೋಡು ಗ್ರಾಮದಲ್ಲಿ ನಿವೃತ್ತ ಡಿವೈಎಸ್ಪಿಯೊಬ್ಬರು ತಮ್ಮ ನಿವಾಸದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಡಿಕೇರಿ: ಮಡಿಕೇರಿಯ ಮರಗೋಡು ಗ್ರಾಮದಲ್ಲಿ ನಿವೃತ್ತ ಡಿವೈಎಸ್ಪಿಯೊಬ್ಬರು ತಮ್ಮ ನಿವಾಸದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 
ನಿವೃತ್ತ ಡಿವೈಎಸ್ಪಿ ಮರಗೋಡುವಿನ 65 ವರ್ಷದ ಚೆರಿಯಮನೆ ಕೆ ಶಶಿಧರ್ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಶಿಧರ್ ಅವರಿಗೆ ಮೂವರು ಪುತ್ರಿಯರಿದ್ದು ಮೂವರು ವಿವಾಹವಾಗಿ ವಿದೇಶಗಳಲ್ಲಿ ನೆಲೆಸಿದ್ದಾರೆ. 
ಇನ್ನು ಕಳೆದ ವರ್ಷ ಶಶಿಧರ್ ಅವರ ಪತ್ನಿ ಸಾವಿಗೀಡಾಗಿದ್ದು ಮನೆಯಲ್ಲಿ ಒಬ್ಬರೇ ಇದ್ದ ಶಶಿಧರ್ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ 4 ಗಂಟೆಗೆ ಸುಮಾರಿಗೆ ತಮ್ಮ ಶಶಿಧರ್ ಅವರು ನಾಡ ಬಂದೂಕಿನಿಂದ ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com