ಗೌರಿ ಲಂಕೇಶ್ ಹತ್ಯೆ ಬಗ್ಗೆ ಹೇಳಿಕೆ : ಶಾಸಕ ಜೀವರಾಜ್ ವಿಚಾರಣೆ

ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬಿಜೆಪಿ ಶಾಸಕ ಡಿ.ಎನ್ ಜೀವರಾಜ್ ಅವರನ್ನು ವಿಚಾರಣೆ ನಡೆಸಲು ಸೂಚಿಸಿರುವುದಾಗಿ ಗೃಹ ಸಚಿವ ...
ಶಾಸಕ ಡಿ.ಎನ್ ಜೀವರಾಜ್
ಶಾಸಕ ಡಿ.ಎನ್ ಜೀವರಾಜ್
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬಿಜೆಪಿ ಶಾಸಕ ಡಿ.ಎನ್ ಜೀವರಾಜ್ ಅವರನ್ನು ವಿಚಾರಣೆ ನಡೆಸಲು ಸೂಚಿಸಿರುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆಗೆ ಸಂಬಂಧ ಶೃಂಗೇರಿ ಶಾಸಕ  ಜೀವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಗೌರಿ ತಮ್ಮ ಪತ್ರಿಕೆಯಲ್ಲಿ 'ಚಡ್ಡಿಗಳ ಮಾರಣ ಹೋಮ' ಎಂದು ಬರೆಯದಿದ್ದರೇ ಇಂದು ಜೀವಂತವಾಗಿರುತ್ತಿದ್ದರು ಎಂದು ಹೇಳಿದ್ದರು. ಜೀವರಾಜ್ ಯಾವ ಹಿನ್ನೆಲೆಯಲ್ಲಿ ಈ ರೀತಿ ಹೇಳಿಕೆ ನೀಡಿದ್ದರು ಎಂಬ ಬಗ್ಗೆ ವಿಚಾರಣೆ ನಡೆಸುವಂತೆ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಜೀವರಾಜ್, ಎಸ್ ಐಟಿ ಯಿಂದ ಇದುವರೆಗೆ ನನಗೆ ಯಾವುದೇ ನೊಟೀಸ್ ಬಂದಿಲ್ಲ, ಒಂದು ವೇಳೆ ಬಂದರೆ ವಿಚಾರಣೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ, ಹೇಳಿಕೆಯನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪೂರ್ತಿ ಭಾಷಣವನ್ನು ಕೇಳಿದ್ದರೆ ಮಾತುಗಳು ಅರ್ಥವಾಗುತ್ತಿತ್ತು. ಭಾಷಣಕ್ಕೆ ಸಮಯ ಕಡಿಮೆ ಇತ್ತು, ಹೀಗಾಗಿ ವೇಗವಾಗಿ ಮಾತನಾಡುವಾಗ ಪದ ಬಳಕೆಯಲ್ಲಿ ವ್ಯತ್ಯಯವಾಗಿದೆ. ಯಾವುದೇ ಕೆಟ್ಟ ಉದ್ದೇಶದಿಂದ ಮಾತನಾಡಿಲ್ಲ’ ಎಂದು ಹೇಳಿದರು.
ಗೌರಿ ಅವರ ಸಾವಿನಿಂದ ನನಗೂ ತುಂಬಾ ನೋವಾಗಿದೆ. ಸಾವಿನಲ್ಲಿ ಸಂಭ್ರಮಪಡುವ ವಿಕೃತಿಯ ಮನಸ್ಥಿತಿ ನನಗಿಲ್ಲ’ ಎಂದು ತಿಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com