ಕರ್ನಾಟಕ: ಶೂ ಖರೀದಿ ಅವ್ಯವಹಾರ ಆರೋಪ; ಮುಖ್ಯ ಶಿಕ್ಷಕಿ ಆತ್ಮಹತ್ಯೆ

ಚಿತ್ರದುರ್ಗ ಮೊಲಕಾಲ್ಮುರು ತಾಲೂಕಿನಲ್ಲಿರುವ ರಾಂಪುರ ಗ್ರಾಮದ ಅಕ್ಕಮಹಾದೇವಿ ಕಾಲೋನಿಯಲ್ಲಿನ ತನ್ನ ಮನೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಓರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶೂ ಖರೀದಿ ಅವ್ಯವಹಾರ ಆರೋಪ: ಮುಖ್ಯ ಶಿಕ್ಷಕಿ ಆತ್ಮಹತ್ಯೆ
ಶೂ ಖರೀದಿ ಅವ್ಯವಹಾರ ಆರೋಪ: ಮುಖ್ಯ ಶಿಕ್ಷಕಿ ಆತ್ಮಹತ್ಯೆ
ಚಿತ್ರದುರ್ಗ: ಚಿತ್ರದುರ್ಗ ಮೊಲಕಾಲ್ಮುರು ತಾಲೂಕಿನಲ್ಲಿರುವ ರಾಂಪುರ  ಗ್ರಾಮದ ಅಕ್ಕಮಹಾದೇವಿ ಕಾಲೋನಿಯಲ್ಲಿನ ತನ್ನ ಮನೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಓರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕಿ ತಿಪ್ಪೀರಮ್ಮ ಮೊಲಕಲ್ಮುರು ತಾಲ್ಲೂಕಿನ ದೇವಾಸುಮುದ್ರ ಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಆಗಿದ್ದರು.
ಪೊಲೀಸರು ದೂರಿನ ಪ್ರಕಾರ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಲಿಂಗಪ್ಪ ಮತ್ತು ಸಹ-ಶಿಕ್ಷಕರಾದ ಸವಿತಾ, ಶಂತಮ್ಮ ಮತ್ತು ರಮೇಶ್ ಅವರು ಮುಖ್ಯ ಶಿಕ್ಷಕಿಗೆ  ದಿನನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಶಿಕ್ಷಕಿಯ ಪತಿ ಪಾತಣ್ನ ನೀಡಿದ ದೂರಿನಂತೆ, ಶಿಕ್ಷಕಿ, ವಿದ್ಯಾರ್ಥಿಗಳ ಶೂ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪವಿದೆ. ತನ್ನ ಪತ್ನಿಯ ಮೇಲೆ ವ್ಯಥಾ ಸುಳ್ಳು ಆರೋಪ ಹೊರಿಸಲಾಗಿತ್ತು. ಈ ಆರೋಪದಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸ್ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com