ಪಾಯಸ ಸವಿಯುತ್ತಿರುವ ಅತಿಥಿಗಳು
ಪಾಯಸ ಸವಿಯುತ್ತಿರುವ ಅತಿಥಿಗಳು

ಬಂಟ್ವಾಳ: ಮಸೀದಿ ಉದ್ಘಾಟನೆಗೆ ಪಾಯಸ ನೀಡಿ ಸಾಮರಸ್ಯ ಮೆರೆದ ಹಿಂದೂ ಕುಟುಂಬ

ದಕ್ಷಿಣ ಕನ್ನಡ ಜಿಲ್ಲೆ ಕಳೆದ ಕೆಲವು ವಾರಗಳಿಂದ ಕೋಮು ಗಲಭೆಯಿಂದ ತತ್ತರಿಸಿ ಹೋಗಿತ್ತು. ಆದರೆ ಭಾನುವಾರ ಜಿಲ್ಲೆಯ ಬಂಟ್ವಾಳ ತಾಲೂಕಿನ....
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಳೆದ ಕೆಲವು ವಾರಗಳಿಂದ ಕೋಮು ಗಲಭೆಯಿಂದ ತತ್ತರಿಸಿ ಹೋಗಿತ್ತು. ಆದರೆ ಭಾನುವಾರ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಕುಂಪನಮಜಲುನಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಅರಫಾ ಜುಮಾ ಮಸೀದಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಮರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಭಾಗವಹಿಸುವ ಮೂಲಕ ಸಾಮರಸ್ಯ ಮೆರೆದಿದ್ದಾರೆ. 
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 1,500 ಕುಟುಂಬಕ್ಕೆ ಸೋಮಪ್ಪ ಆಳ್ವ ಹಾಗೂ ಅವರ ಪುತ್ರರಾದ ಆನಂದ್ ಆಳ್ವ ಮತ್ತು ವಿಠಲ್ ಆಳ್ವ ಅವರು ಪಾಯಸ ನೀಡುವ ಮೂಲಕ ಮುಸ್ಲಿಂ ಬಾಂಧವರ ಸಹೋದರತ್ವವನ್ನು ಎತ್ತಿಹಿಡಿದರು. 
ಸೋಮಪ್ಪ ಅವರು ಮಸೀದಿಯ ಸಮೀಪದಲ್ಲೇ ಕೇಟರಿಂಗ್ ವ್ಯಾಪಾರ ಮಾಡುತ್ತಿದ್ದು, ಮಸೀದಿ ಉದ್ಘಾಟನೆ ವೇಳೆ ಸ್ವಯಂ ಪ್ರೇರಣೆಯಿಂದ ಎಲ್ಲರಿಗೂ ಪಾಯಸ ನೀಡಿದ್ದಾರೆ. ಮಸೀದಿ ಉದ್ಘಾಟನೆ ದಿನದಂದು ಯಾವ ಸಿಹಿ ತಿನಿಸು ನೀಡಬೇಕು ಎಂದು ನನ್ನನ್ನು ಕೇಳಿದ್ದರು. ನಾನು ಅವರಿಗೆ ಜನ ಪಾಯಸ ಇಷ್ಟಪಡುತ್ತಾರೆ. ಹೀಗಾಗಿ ಅದನ್ನೇ ಕೊಡಿ ಎಂದು ಸೋಮಪ್ಪ ಅವರಿಗೆ ತಿಳಿಸಿದ್ದೆ ಎಂದು ಮಸೀದಿ ಅಧ್ಯಕ್ಷ ಆಸಿಫ್ ಇಖ್ಬಾಲ್ ಅವರು ಹೇಳಿದ್ದಾರೆ.
ಕುಂಪನಮಜಲು ಗ್ರಾಮದಿಂದ ಅಂದು ಸುಮಾರು 3 ಸಾವಿರ ಜನ ಮಸೀದಿಗೆ ಭೇಟಿ ನೀಡಿದ್ದಾರೆ. ಆ ಪೈಕಿ 1,500 ಜನ ಪಾಯಸ ಸವಿದಿದ್ದಾರೆ ಎಂದು ಆಸಿಫ್ ಇಖ್ಬಾಲ್ ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com