ಬೆಳಗಾವಿ: ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಸಂಬ್ರಾ ಬೆಳಗಾವಿ ವಿಮಾನನಿಲ್ದಾಣದ ನೂತನ ಟರ್ಮಿನಲ್ ನ್ನು ಗುರುವಾರ ಉದ್ಘಾಟಿಸಿದರು.
ಸಂಬ್ರಾ ಬೆಳಗಾವಿ ವಿಮಾನ ನಿಲ್ದಾಣ
ಸಂಬ್ರಾ ಬೆಳಗಾವಿ ವಿಮಾನ ನಿಲ್ದಾಣ
ಬೆಳಗಾವಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಸಂಬ್ರಾ ಬೆಳಗಾವಿ ವಿಮಾನನಿಲ್ದಾಣದ ನೂತನ ಟರ್ಮಿನಲ್ ನ್ನು ಗುರುವಾರ ಉದ್ಘಾಟಿಸಿದರು.
ಬೆಳಗಾವಿ ವಿಮಾನ ನಿಲ್ದಾಣವು ಬೆಂಗಳೂರಿನಿಂದ 500 ಕಿ.ಮೀ ಮತ್ತು ಮುಂಬೈನಿಂದ 480 ಕಿ.ಮೀ ದೂರದಲ್ಲಿದೆ.
ಬೆಳಗಾವಿ (ಸಾಂಬ್ರಾ) ವಿಮಾನ ರನ್ ವೇ ವಿಸ್ತರಣೆಯ ಕಾರ್ಯವು ಇದಾಗಲೇ ಪೂರ್ಣಗೊಂಡಿದೆ. 
"ಆರು ಹಂತದ ಛಾವಣಿಗಳನ್ನು ಇಲ್ಲಿ ಮಾಡಲಾಗಿದೆ, ಇದು ಅಕೌಸ್ಟಿಕಲ್ ಮತ್ತು ಥರ್ಮಲ್ ಛಾವಣಿ ಆಗಿದ್ದು ಈ ಯೋಜನೆ ಪೂರ್ಣಗೊಳ್ಳಲು 24 ತಿಂಗಳುಗಳನ್ನು ತೆಗೆದುಕೊಂಡಿತು" ಎಂದು ಹರ್ಷ್ ಕಸ್ಟ್ರಕ್ಷನ್ ಪ್ರೈವೃಟ್ ಲಿಮಿಟೆಡ್ ನಿರ್ದೇಶಕ ನಿಲೇಶ್ ಯೆಯೋಲ್ ಹೇಳಿದರು.
ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯಾಗಿದ್ದ ಸುಧೀರ್ ರಹೀಜಾ, ಟರ್ಮಿನಲ್ ಕಟ್ಟಡವು 3,600 ಚದರ ಮೀಟರ್ ಪ್ರದೇಶವನ್ನು ಹೊಂದಿದೆ ಎಂದು ಹೇಳಿದರು.
"ಆರು ತಪಾಸಣೆ ಕೌಂಟರ್ ಗಳು ಇದ್ದು , ಇದು ಗ್ರೀನ್ ಏರ್ ಪೋರ್ಟ್ ಆಗಿದೆ. ಇದರಿಂದ ಬಹಳ ಬೇಗ ನಾವು ಬೆಳಗಾವಿಯೊಂದಿಗೆ ಸಂಪರ್ಕವನ್ನು ಸಾಧಿಸಬಹುದು, ನಾವು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಂಪರ್ಕ ಮತ್ತು ಬೆಳವಣಿಗೆಗೆ ಎದುರು ನೋಡುತ್ತೇವೆ" ಎಂದು ರಹೀಜಾ ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com