ಬಿಎಂಟಿಸಿ ಬಸ್ ಗಳ ಕಳಪೆ ನಿರ್ವಹಣೆಯಿಂದ ಪ್ರದಕ್ಷಿಣೆ ಮೊಟಕುಗೊಳಿಸಿದ ಸಿಎಂ
ಬಿಎಂಟಿಸಿ ಬಸ್ ಗಳ ಕಳಪೆ ನಿರ್ವಹಣೆಯಿಂದ ಪ್ರದಕ್ಷಿಣೆ ಮೊಟಕುಗೊಳಿಸಿದ ಸಿಎಂ

ಹೆಚ್ಚಿದ ಜನಸಂದಣಿ, ಕೆಲಸ ಮಾಡದ ಎಸಿ: ಬೇಸತ್ತು ನಗರ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಬುಧವಾರ ಎರಡು ವೋಲ್ವೋ ಬಸ್ ನಲ್ಲಿ ನಗರದ ಮಳೆ..
Published on
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಬುಧವಾರ ಎರಡು ವೋಲ್ವೋ ಬಸ್ ನಲ್ಲಿ ನಗರದ ಮಳೆ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದರು.  ಬಿಎಂಟಿಸಿ ಬಸ್ಸುಗಳ ಕಳಪೆ ನಿರ್ವಹಣೆ ಯಿಂದಾಗಿ ಬೇಸತ್ತ ಅವರು ಅನಿವಾರ್ಯವಾಗಿ ಅವರು ನಗರ ದರ್ಶನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದರು, ಈ ಸಂಬಂಧ ಬಿಎಂಟಿಸಿ ಮೆಕ್ಯಾನಿಕಲ್ ಇಲಾಖೆಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಬುಧವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಿಂದ ಮುಖ್ಯಮಂತ್ರಿಗಳು ಕುಳಿತ ಬಸ್ಸು ಹೊರಟ ತಕ್ಷಣ ಬಸ್ಸಿನ ಹವಾನಿಯಂತ್ರಿತದಲ್ಲಿ ಏನೋ ತೊಂದರೆಯಿದೆ ಎಂದು ಅಧಿಕಾರಿಗಳಿಗೆ ಮನವರಿಕೆಯಾಯಿತು.ಈ ಬಸ್ಸು ಕಳೆದ ಮೂರು ವರ್ಷಗಳಿಂದ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತಿದೆ. ಸದ್ಯ 3 ಲಕ್ಷ ಕಿಮೀ ದುರ ಸಂಚರಿಸಿದೆ.
35 ಸೀಟುಗಳುಳ್ಳ ಈ ಬಸ್ ನಲ್ಲಿ ಸಿಎಂ ಸೇರಿದಂತೆ ಹಲವು ಸಚಿವರು ಮತ್ತು ಬಿಬಿಎಂಪಿ ಅಧಿಕಾರಿಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಹತ್ತಿದ್ದರು. ಹೆಚ್ಚು ಜನರಿದ್ದ ಕಾರಣ ಎಸಿ ತನ್ನ ಕೆಲಸ ನಿರ್ವಹಿಸುವಲ್ಲಿ ವಿಫಲವಾಗಿದೆ. 
ಕೆಂಪೇಗೌಡ ಬಸ್ ನಿಲ್ದಾಣದ ಡಿಪೋದಲ್ಲಿ ಅಧಿಕಾರಿಗಳು ಬಸ್ ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಒಂದು ಫ್ಯೂಸ್ ವಿಫಲವಾಗಿರುವುದು ತಿಳಿದು ಬಂದಿದೆ. ಈ ಬಸ್ ನಲ್ಲಿ 4 ಎಸಿ ಫ್ಯೂಸ್ ಗಳಿದ್ದು, ಅದರಲ್ಲಿ ಒಂದು ಅಸಮರ್ಪಕವಾಗಿತ್ತು. ಹೀಗಾಗಿ ಅದರ ಚಾಲಕ ನೂರುಲ್ಲಾ ಶಾಂತಿನಗರ ಬಸ್ ಡಿಪೋದಲ್ಲಿ ಬೇರೆ ಬಸ್ ಬದಲಾಯಿಸಲಾಯಿತು. ಅದರ ಫ್ಯಾನ್ ಬೆಲ್ಟ್ ಕೂಡ ಹಾಳಾಗಿತ್ತು. ರಾಮಮೂರ್ತಿ ನಗರದಲ್ಲಿ ಬ್ರೇಕ್ ಹಾಕಿದ ವೇಳೆ ಎಂಜಿನ್ ಬೆಲ್ಟ್ ಸಮಸ್ಯೆ ಉಂಟಾಯಿತು,  ಅಲ್ಲಿಗೆ ಎರಡನೇ ವೋಲ್ವೋ ಬಸ್ ನಲ್ಲಿ ಸಿಎಂ ಪ್ರಯಾಣ ಮುಂದುವರಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ಕಲ್ಕೆರೆಗೆ ತೆರಳದೆ ಸಿಎಂ ತಮ್ಮ ಕಾರಿನಲ್ಲಿ ಭೇಟಿವಾಪಾಸಾದರು. ಸಿಎಂ ಯಾವಾಗಲೂ ನಗರ ಪ್ರದಕ್ಷಿಣೆ ಕೈಗೊಂಡಾಗ  ಬಿಬಿಎಂಪಿಯ ಸಾರಿಗೆ ವಿಭಾಗದ ಎಕ್ಸಿಕ್ಯೂಟಿವ್ ಎಂಜೀನಿಯರ್  ವಲು ರಾಥೋಡ್ ಬಸ್ ವ್ಯವಸ್ಥೆ ಮಾಡುತ್ತಿದ್ದರು. ನಾವು ಬಿಎಂಟಿಸಿಗೆ ಎಸಿ ವ್ಯವಸ್ಥೆ ಹಾಗೂ ಅನುಭವಿ ಚಾಲಕನನ್ನು ನೀಡುವಂತೆ ಕೇಳಿದ್ದೆವು, ಆದರೆ ಈ ಬಾರಿ ಏಕೆ ಹೀಗೆ ಸಮಸ್ಯೆಯಾಯಿತೆಂದು ನಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. 
ಇನ್ನೂ ಈ ಸಂಬಂಧ ತನಿಖಾ ವರದಿ ನೀಡುವಂತೆ ಬಿಎಂಟಿಸಿ ಎಂಡಿ ಅವರಿಗೆ ಸೂಚಿಸಲಾಗಿದ್ದು, ಅಧಿಕಾರಿಗಳ ತಪ್ಪು ಕಂಡು ಬಂದರೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com