ಹಾಲಿ ಸರ್ಕಾರದ ಅವಧಿಯಲ್ಲಿ ಯಾವುದೇ ಭೂಮಿಯನ್ನು ಡಿನೋಟಿಫೈ ಮಾಡಲಾಗಿಲ್ಲ: ಸಿಎಂ ಕಚೇರಿ

ಹಾಲಿ ಸರ್ಕಾರದ ಅವಧಿಯಲ್ಲಿ ಯಾವುದೇ ಭೂಮಿಯನ್ನು ಡಿನೋಟಿಫೈ ಮಾಡಲಾಗಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ವಿಧಾನಸೌಧ
ವಿಧಾನಸೌಧ
ಬೆಂಗಳೂರು: ಹಾಲಿ ಸರ್ಕಾರದ ಅವಧಿಯಲ್ಲಿ ಯಾವುದೇ ಭೂಮಿಯನ್ನು ಡಿನೋಟಿಫೈ ಮಾಡಲಾಗಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಡಾ.ಕೆ.ಶಿವರಾಮ ಕಾರಂತ್ ಲೇಔಟ್ ನ 1,300 ಎಕರೆಯಷ್ಟು ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ ಎಂದು ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪರ ವಕೀಲರು ಹೈಕೋರ್ಟ್ ಗೆ ಹೇಳಿದ್ದ ಬೆನ್ನಲ್ಲೇ ಸಿಎಂ ಸಚಿವಾಲಯದಿಂದ ಸ್ಪಷ್ಟನೆ ಬಂದಿದೆ. 
ಡಾ.ಕೆ ಶಿವರಾಮ ಕಾರಂತ್ ಲೇಔಟ್ ನಲ್ಲಿ ಯಾವುದೇ ಭೂಮಿಯನ್ನು ಡಿನೋಟಿಫೈ ಮಾಡಲಾಗಿಲ್ಲ. ಲೇಔಟ್ ನಿರ್ಮಾಣಕ್ಕಾಗಿ 2008ರಲ್ಲಿ 3,546 ಎಕರೆಯಷ್ಟು ಭೂಮಿಯನ್ನು ನೋಟಿಫೈ ಮಾಡಲಾಗಿತ್ತು. 2008-10 ರ ಅವಧಿಯಲ್ಲಿ ಈ ಹಿಂದಿನ ಸರ್ಕಾರ ಬಿಡಿಎ ಗೆ 257.20 ಎಕರೆಯಷ್ಟು ಭೂಮಿಯನ್ನು ಡಿನೋಟಿಫೈ ಮಾಡಲು ನಿರ್ದೇಶನ ನೀಡಿತ್ತು. ಇದಾದ ಬಳಿಕ 2012-14 ರಲ್ಲಿ ಭೂ ಸ್ವಾಧೀನ ಅಧಿಕಾರಿಗಳು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ ಆದೇಶದಲ್ಲಿ ನೀಡಲಾಗಿದ್ದ ಮಾನದಂಡಗಳ ಪ್ರಕಾರ 446.07 ಎಕರೆಯಷ್ಟು ಭೂಮಿಯನ್ನು ನೋಟಿಫೈ ಆದೇಶದಿಂದ ಹೊರಗಿಟ್ಟರು ಎಂದು ಸಿಎಂ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com