ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್, ಯಾವುದೇ ದೂರು ದಾಖಲಿಸಬೇಕಾದರೇ, ಅದನ್ನು ಪುಷ್ಟೀಕರಿಸುವ ಸಾಕ್ಷ್ಯ ಬೇಕಾಗುತ್ತದೆ.ಎಲ್ಲಿ ಹೇಗೆ ಯಾವಾಗ ಅಪರಾಧ ನಡೆಯಿತು ಎಂಬ ಬಗ್ಗೆ ಅಗತ್ಯ ಪುರಾವೆಗಳನ್ನು ಒದಗಿಸಬೇಕು,ಆದರೆ ಈ ಪ್ರಕರಣದಲ್ಲಿ ಅಂತಹ ಯಾವುದೇ ಸಾಕ್ಷಿ ಒದಗಿಸಿಲ್ಲ. ಜೊತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಡಿನೋಟಿಫಿಕೇಷನ್ ಮಾಡುವಂತೆ ಯಡಿಯೂರಪ್ಪ ಅವರು ಮಾಡಿದ್ದ ಶಿಫಾರಸ್ಸನ್ನು ಪರಿಗಣಿಸಿಲ್ಲ, ಹೀಗಾಗಿ ಇದರಲ್ಲಿ ಯಾವುದೇ ಲಾಭ ಮತ್ತು ನಷ್ಟದ ಮಾತಿಲ್ಲ, ಎಫ್ ಐ ಆರ್ ದಾಖಲಿಸುವ ಅಗತ್ಯವೂ ಇಲ್ಲ ಎಂದು ವಾದಿಸಿದ್ದಾರೆ.