ತುಮಕೂರು: ಜಲ ಸಂಪನ್ಮೂಲ ಸಚಿವ ಡಾ.ಎಂ.ಬಿ ಪಾಟೀಲ್, ಗುರುವಾರ ರಾತ್ರಿ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀ ಶಿವಕುಮಾರ ಸ್ವಾಮಿಜಿ ಮತ್ತು ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಸಚಿವರ ಜೊತೆಗೆ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಕೂಡ ಹಾಜರಿದ್ದರು. 1980 ರಲ್ಲಿ ಮಠದಲ್ಲಿ ಶಿವಕುಮಾರ ಸ್ವಾಮಿಜಿ ಮತ್ತು ದಿವಂಗತ ಗೌರಿ ಶಂಕರ ಸ್ವಾಮೀಜಿ ನಡುವಿನ ಭಿನ್ನಾಭಿಪ್ರಾಯದ ವೇಳೆ ಶಂಕರ್ ಬಿದರಿ ಪ್ರಮುಖ ಪಾತ್ರ ವಹಿಸಿದ್ದರು.
ತಮ್ಮ ಖಾಸಗಿ ಕಾರಿನಲ್ಲಿ ಮಠಕ್ಕೆ ಆಗಮಿಸಿದ ಪಾಟೀಲ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು, ನಂತರ ಮಾತನಾಡಿದ ಅವರು ಶಿವಕುಮಾರ ಸ್ವಾಮೀಜಿ ನಮ್ಮ ದೇವರು, ಅವರು ಆಧುನಿಕ ಬಸವಣ್ಣ, ಅವರ ಆದೇಶದಂತೆ ಮುನ್ನಡೆಯುತ್ತೇವೆ ಎಂದು ಹೇಳಿದ್ದಾರೆ,
ಇನ್ನೂ ಎಸ್ ಐ ಟಿ ಕಾಲೇಜಿನ ಸಿಬ್ಬಂದಿ ಶಿನಕುಮಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.