ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕೊಲೆಗೆ ಸಂಬಂಧಿಸಿದಂತೆ ಬರಹಗಾರ ವಿಕ್ರಮ್ ಸಂಪತ್ ಅವರ ಹೇಳಿಕೆ ದಾಕಲಿಸಿಕೊಂಡಿದೆ.
"ನಾನು ಎರಡು ದಿನಗಳ ಹಿಂದೆ ಲಂದನ್ ನಿಂದ ಬಂದ ನಂತರ ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿ ನನ್ನ ಹೇಳಿಕೆ ದಾಖಲಿಸಲು ಎಸ್ ಐಟಿ ಅಧೀಕ್ಷಕರು ನನ್ನ ಮನೆಗೆ ಭೇಟಿ ನೀಡಿದರು" ಎಂದು ಅವರು ಪಿಟಿಐಗೆ ತಿಳಿಸಿದರು.
ಸಂಪತ್ ಅವರು ಈ ಕೊಲೆಯೊಂದು"ರಚನಾತ್ಮಕ ತಂತ್ರ " ಎಂದು ವ್ಯಾಖ್ಯಾನಿಸಿದ್ದಾರ ಎಸ್ ಐಟಿ ಅಧೀಕ್ಷಕರ ವಿಚಾರಣೆ ವೇಳೆ ಅವರಿಗೆ ಎಲ್ಲ ಬಗೆಯ ಸಹಕಾರ ನೀಡಿದ್ದಾರೆ.
55 ವರ್ಷ ವಯಸ್ಸಿನ ಗೌರಿ, ನಸ್ನ್ನ ಬಗ್ಗೆ ವಿಮರ್ಶಾತ್ಮಕ ಲೇಖನವನ್ನು ಬರೆದದ್ದಿದೆ. ಆದರೆ ಇಷ್ಟಕ್ಕೆ ಎಸ್ ಐಟಿಯನನ್ನನ್ನು ತನಿಖೆ ಮಾಡುತ್ತಿದೆ . ಆದರೆ ನಾನು ಗೌರಿ ಅವರ ಯವುದೇ ಲೇಖನಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ
"ನಾನು ತಪ್ಪಿತಸ್ಥ ಎಂದು ಗೌರಿ ಸಾರ್ವಜನಿಕವಾಗಿ ನನ್ನನ್ನು ದೂಷಿಸಿದ್ದರು" ಎಂದರು.
ಗೌರಿ ತಮ್ಮ ಕನ್ನಡ ಪತ್ರಿಕೆಯಲ್ಲಿ ಸಂಪತ್ ಬಗ್ಗೆ ವಿಮರ್ಶಾತ್ಮಕ ಲೇಖನವನ್ನು ಬರೆದಿದ್ದರು. 2015 ರಲ್ಲಿ ಕೆಲ ಬರಹಗಾರರು 'ಪ್ರಶಸ್ತಿ ವಾಪಸಿ' ಅಭಿಯಾನ ಸಂದರ್ಭದಲ್ಲಿ ಕೆಲ ಆಂಗ್ಲ ಪತ್ರಿಕೆಗಳು ವಿಕ್ರಂ ಹೆಸರನ್ನು ಉಲ್ಲೇಖಿಸಿದ್ದವು.
ಹಿಂದುತ್ವ, ಬಲಪಂಥೀಯರ ಪ್ರಬಲ ವಿರೋಧಿಯಾಗಿದ್ದ ಗೌರಿ ಲಂಕೇಶ್ ಇದೇ ಸೆ. 5ರ ರಾತ್ರಿ ತಮ್ಮ ಸ್ವಗೃಹದಲ್ಲಿಯೇ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದರು.
ಈ ಕೊಲೆಗೆ ಸಂಬಂಧಿಸಿದಂತೆ ಇತರ ಕೆಲವು ಬರಹಗಾರರನ್ನು ಕೂಡ ಎಸ್ ಐಟಿ ಪ್ರಶ್ನಿಸಿದೆ.