ಬೆಂಗಳೂರು: ಅಂಧರು ಎಂದು ಹೇಳಿಕೊಂಡು 85 ಲ್ಯಾಪ್ ಟಾಪ್ ಕದ್ದ ಖದೀಮರು!

ಬೆಂಗಳೂರಿನ ವಿವಿಧೆಡೆಗಳಲ್ಲಿ ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಕದಿಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಲ್ಯಾಪ್ ಟಾಪ್ ಕಳ್ಳರ ಬಂಧನ
ಬೆಂಗಳೂರಿನಲ್ಲಿ ಲ್ಯಾಪ್ ಟಾಪ್ ಕಳ್ಳರ ಬಂಧನ
ಬೆಂಗಳೂರು: ಬೆಂಗಳೂರಿನ ವಿವಿಧೆಡೆಗಳಲ್ಲಿ ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಕದಿಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ನಗರದ ಪೇಯಿಂಗ್ ಗೆಸ್ಟ್  ನಲ್ಲಿರುತ್ತಿದ್ದ ಬಾಡಿಗೆದಾರರನ್ನು ಗುರಿಯಾಗಿಟ್ಟುಕೊಂಡು ಇವರು ಕಳ್ಳತನ ನಡೆಸುತ್ತಿದ್ದರು.
ಮಡಿವಾಳ ಠಾಣಾ ಪೋಲೀಸರು ಈ ಇಬ್ಬರನ್ನು ಬಂಧಿಸಿದ್ದು ಬಂಧಿತರಿಂದ 30 ಲಕ್ಷ ಮೌಲ್ಯದ 85 ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ತಮಿಳುನಾಡಿನ ಮೂಲದ ರಮೇಶ್ ಮತ್ತು ಮಣಿಕಂಠನ್ ಬಂಧಿತರು. 
ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರಲ್ಲಿ ಮುಖ್ಯ ಆರೋಪಿ ಮಣಿಕಂಠನ್ ಇಂಜಿನಿಯರಿಂಗ್ ಪದವಿ ಮತ್ತು ಲ್ಯಾಪ್ ಟಾಪ್  ಕುರಿತಂತೆ ತಾಂತ್ರಿಕ ಜ್ಞಾನವನ್ನು ಹೊಂದಿದ್ದಾನೆ.  ಲ್ಯಾಪ್ ಟಾಪ್ ಗಳನ್ನು ಕದಿಯಲು ಇತರೆ ನಾಲ್ವರಿಗೆ ಈತನು ತರಬೇತಿ ನೀಡಿದ್ದನು ಎಂದು ಪೋಲೀಸರು ತಿಳಿಸಿದರು.
ಆರೋಪಿಗಳು ಮಡಿವಾಳ, ಕೋರಮಂಗಲ, ಬ್ಯಾಟರಾಯನಪುರ, ಎಚ್ ಎಸ್ ಆರ್ ಲೇಔಟ್ ಮತ್ತು ಸುದ್ದಗುಂಟೇಪಾಳ್ಯ ಪ್ರದೇಶಗಳಲ್ಲಿ ಕಳ್ಳತನ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
"ತನಿಖೆಯ ಸಮಯದಲ್ಲಿ, ಹೇಳಿದಂತೆ ಇಬ್ಬರು ಆರೋಪಿಗಳು ಮನೆಗಳಿಗೆ ಅಥವಾ ಪಿಜಿ ಗೆ ತೆರಳಿ ದೃಷ್ಟಿ ದೋಷ ಇರುವವರಿಗೆ, ದುರ್ಬಲರಿಗೆ ಸಹಾಯ  ಮತ್ತು ದೇಣಿಗೆಗಾಗಿ ಮನವಿ ಮಾಡುತ್ತಾರೆ. ಮನೆ ಮಾಲೀಕರು, ಬಾಡಿಗೆದಾರರ ಮನಸ್ಸನ್ನು ಬೇರೆಡೆ ತಿರುಗುವಂತೆ ಮಾಡುವಲ್ಲಿ ಸಪಲರಾಗುವ ಇವರು ಮನೆಯಲ್ಲಿರುವ ಲ್ಯಾಪ್ ಟಾಪ್ ಗಳನ್ನು ಕದಿಯುತ್ತಿದ್ದರು೭" ಎಂದು ಪೋಲೀಸರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com