ಬೆಳಗಾವಿ: ನಿಧಿ ಆಸೆಗಾಗಿ ಮಹಾಲಯ ಅಮವಾಸ್ಯೆಯಂದು ಮಗು ಬಲಿಗೆ ಯತ್ನ

ಧಿ ಆಸೆಗಾಗಿ 14 ತಿಂಗಳ ಹೆಣ್ಣು ಮಗುವನ್ನು ಬಲಿ ಕೊಡಲು ನಡೆಸಿದ ಯತ್ನವನ್ನು ವಿಫಲಗೊಳಿಸಿರುವ ಗ್ರಾಮಸ್ಥರು ಮಹಿಳೆಯೊಬ್ಬಳನ್ನು ಪೊಲೀಸರ...
ಬಂಧಿತ ಮಹಿಳೆ ಶಿರಿನಾ ಜಾಮದಾರ್
ಬಂಧಿತ ಮಹಿಳೆ ಶಿರಿನಾ ಜಾಮದಾರ್
Updated on
ಬೆಳಗಾವಿ: ನಿಧಿ ಆಸೆಗಾಗಿ 14 ತಿಂಗಳ ಹೆಣ್ಣು ಮಗುವನ್ನು ಬಲಿ ಕೊಡಲು ನಡೆಸಿದ ಯತ್ನವನ್ನು ವಿಫಲಗೊಳಿಸಿರುವ ಗ್ರಾಮಸ್ಥರು ಮಹಿಳೆಯೊಬ್ಬಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಕೃತ್ಯದಲ್ಲಿ ತೊಡಗಿದ್ದ 4 ಮಂದಿ ಪುರುಷರು ಪರಾರಿಯಾಗಿದ್ದಾರೆ.
ಬೆಳಗಾವಿಯ ಟೋಪಿ ಗಲ್ಲಿಯ ಮನೆಯೊಂದರಲ್ಲಿ ನಿಧಿ ಆಸೆಗಾಗಿ ನರಬಲಿಗೆ ಸಿದ್ಧತೆ ನಡೆದಿತ್ತು ಎಂದು ತಿಳಿದು ಬಂದಿದೆ.
ಮನೆಯ ಒಳಗೆ ಗುಂಡಿಯೊಂದನ್ನು ತೋಡಲಾಗಿದ್ದು ಕಪ್ಪು ಮುಖವಾಡ, ಪೂಜಾ ಸಾಮಗ್ರಿಗಳು, ನೀರು ತುಂಬಿದ ಬಿಂದಿಗೆಯಲ್ಲಿ ನಿಂಬೆ ಹಣ್ಣುಗಳು, ಗುದ್ದಲಿ, ಪಿಕಾಸಿ ಹಾಗೂ ಕುಡುಗೋಲು ಪತ್ತೆಯಾಗಿವೆ.
ಜಾವೇದ್‌ ಮುಲ್ಲಾ, ಫಾರೂಕ್‌ ಮುಲ್ಲಾ ಹಾಗೂ ಸೋನಾ ಮುಲ್ಲಾ ಮತ್ತು ಮಸಾಬ್ ಮುಲ್ಲಾ ಎನ್ನುವವರು ಪರಾರಿಯಾಗಿದ್ದಾರೆ. ಶಿರಿನಾ ಜಾಮದಾರ್ ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 
ಮನೆಯಲ್ಲಿದ್ದ ಆಕೆಯನ್ನು ಸ್ಥಳೀಯರು ಹಿಡಿದು ಮಾರ್ಕೆಟ್‌ ಠಾಣೆಗೆ ಒಪ್ಪಿಸಿದ್ದಾರೆ. ಮಹಾಲಯ ಅಮಾವಾಸ್ಯೆಯಂದು ಮಗುವನ್ನು ಬಲಿ ಕೊಡಲು ಅವರು ಸಂಚು ರೂಪಿಸಿದ್ದರು ಎಂದು ಮನೆ ಮಾಲೀಕ ಪೀರಜಾದೆ ದೂರಿದ್ದಾರೆ
ಕಳೆದ ಮೂರು ದಿನಗಳಿಂದ ಮನೆ ಬಾಗಿಲು ತೆರೆದಿರಲಿಲ್ಲ,  ಮನೆಯ ಒಳಗೆಡೆ ಬಲಿಗೆ ಸಿದ್ಧತೆ ನಡೆಸಲಾಗಿತ್ತು. ಯಾರಾದರೂ ಮನೆಗೆ ಬಂದರೆ ಸ್ವಲ್ಪವೇ ಬಾಗಿಲು ತೆರೆದು ಅಲ್ಲಿಯೇ ಮುಚ್ಚಲಾಗುತ್ತಿತ್ತು. ಮಾಂತ್ರಿಕನೊಬ್ಬನ ಸಲಹೆಯಂತೆ ಮಗುವನ್ನು ಬಲಿ ಕೊಡಲು ಯತ್ನ ನಡೆಸಲಾಗಿತ್ತು. ಮಗು ಬಲಿ ಕೊಟ್ಟರೇ ಚಿನ್ನ ಸಿಗುತ್ತದೆ ಎಂಬ ದುರಾಸೆಗೆ ಬಲಿ ಕೊಡಲು ಅವರು ನಿರ್ಧರಿಸಿದ್ದರು ಎಂದು ದೂರಲಾಗಿದೆ.
ಆದರೆ ಇದುವರೆಗೂ ಎಷ್ಟು ಮಕ್ಕಳನ್ನು ಬಲಿ ಪಡೆದಿದ್ದಾರೋ ತಿಳಿಯಲಿಲ್ಲ ಎಂದು ಆರೋಪಿಸಿದ್ದಾರೆ. ಮನೆಯಲ್ಲಿ ಮಾಟ ಮಂತ್ರಕ್ಕೆ ಬಳಸುವ ವಸ್ತುಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com