ದಸರಾ ಉದ್ಘಾಟನೆ ನನ್ನ ಜೀವನದ ಅವಿಸ್ಮರಣೀಯ ಕ್ಷಣ: ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್

ನವ್ಯ ಅಥವಾ ನಿತ್ಯೋತ್ಸವ ಕವಿ ಎಂದು ಕರೆಯಲ್ಪಡುವ ನಿಸಾರ್ ಅಹಮ್ಮದ್ ಸೆ.21 ರಂದು ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ........
ನಿಸಾರ್ ಅಹಮ್ಮದ್
ನಿಸಾರ್ ಅಹಮ್ಮದ್
Updated on
ಮೈಸೂರು: ನವ್ಯ ಅಥವಾ ನಿತ್ಯೋತ್ಸವ ಕವಿ ಎಂದು ಕರೆಯಲ್ಪಡುವ ನಿಸಾರ್ ಅಹಮ್ಮದ್ ಸೆ.21 ರಂದು ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನಾಡ ಹಬ್ಬ ದಸರಾವನ್ನು ಉದ್ಘಾಟಿಸಲಿದ್ದಾರೆ.
ಈ ಮೂಲಕ ಕವಿ ನಿಸಾರ್ ಕೋಮು ಸಾಮರಸ್ಯಕ್ಕೆ ಹೊಸ ಭಾಷ್ಪ ಬರೆಯಲಿದ್ದಾರೆ. 
ಇದೇ ಮೊದಲ ಬಾರಿಗೆ ದಸರಾ ಉದ್ಘಾಟನೆಗೆ ಮುಸ್ಲಿಂ ವ್ಯಕ್ತಿಯನ್ನು ಸರ್ಕಾರ ಆಹ್ವಾನಿಸಿದೆ. ಕವಿ ನಿಸಾರ್ ಈ ಆಮಂತ್ರಣವನ್ನು 'ಗೌರವ' ಎಂದು ಭಾವಿಸಿದ್ದಾರೆ."ಇದು ನನ್ನ ಜೀವನದ ಅತ್ಯುತ್ತಮ ಕ್ಷಣ" ಎಂದು ಅವರು ಹೇಳಿದರು.
ಎಕ್ಸ್ ಪ್ರೆಸ್ ನೊಂದಿಗಿನ ಸಂವಾದದಲ್ಲಿ, ನಿಸಾರ್ ಅಹಮ್ಮದ್ ತಮ್ಮ ತಂದೆ ಕೆ.ಎಸ್. ಹೈದರ್ ಮತ್ತು ಸಹೋದರ ಸಫೀರ್ ಅಹಮ್ಮದ್ ಅವರೊಡನೆ ಕಳೆದ ಜೀವನವನ್ನು ನೆನಪಿಸಿಕೊಂಡರು. 
1952 ರಲ್ಲಿ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾಗ ದಸರಾ ಮೆರವಣಿಗೆ, ವಿಜಯದಶಮಿಯಂದು ನಡೆಯುವ, ಜಂಬೂ ಸವಾರಿ ಮೆರವಣಿಗೆಯನ್ನು ತಮ್ಮ ಕುಟುಂಬದವರೊಡನೆ ನೋಡಿದ ದಿನಗಳನ್ನು ಮೆಲುಕು ಹಾಕಿದರು. 
"ನಾನು 1941 ರಲ್ಲಿ ಹುಡುಗನಾಗಿದ್ದಾಗ  ಬೆಂಗಳೂರು ಕರಗವನ್ನು ನೋಡಿದ್ದೇನೆ, ಆದರೆ ಕರಗವನ್ನು ದಸರಾ ಮೆರವಣಿಗೆಗೆ ಹೋಲಿಸಲು ಬರುವುದಿಲ್ಲ. ನನಗೆ ಈ ಮಹಾನ್ ಅವಕಾಶವನ್ನು ದಯಪಾಲಿಸಿದ ದೇವರಿಗೆ ನಾನು ಕೃತಜ್ಞನಾಗಿದ್ದೇನೆ "ಎಂದು ಅವರು ಹೇಳಿದರು. 
ಕುಂಭಮೇಳ ಮತ್ತು ಹಜ್ ಮುಂತಾದ ಅನೇಕ ದೊಡ್ಡ ಉತ್ಸವಗಳು ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿದ್ದು, ದಸರಾ ಮಾತ್ರ ಪ್ರಪಂಚದಾದ್ಯಂತದ ಎಲ್ಲರ ಮನವನ್ನೂ ಗೆಲ್ಲುತ್ತದೆ. ಒಡೆಯರ್ ಪರಂಪರೆ ಮತ್ತು ವಿಜಯನಗರ ಸಾಮ್ರಾಜ್ಯದ ವೈಭವದೊದನೆ ಜಾನಪದ ಕಲೆ, ಸಂಸ್ಕೃತಿಯನ್ನು ಬಿಂಬಿಸುತ್ತದೆ. 
"ತಮಿಳುನಾಡಿನ ರಾಮನುಜಾಚಾರ್ಯ, ಕೇರಳದ ಶಂಕರಾಚಾರ್ಯ ಮತ್ತು ಇತರ ಪ್ರದೇಶಗಳಿಂದ ಬಂದ ಮುಸ್ಲಿಮರಿಗೆ ಕರ್ನಾಟಕವು ಸಾಂಸ್ಕೃತಿಕ ನೆಲೆಯನ್ನು ನೀಡಿದೆ" ಎಂದು ಅವರು ಹೇಳಿದರು. 
"ನಾನು ಮೈಸೂರಿಗೆ ಬರಲು ಸಂತೋಷ ಪಡುತ್ತೇನೆ" ಎಂದ ಕವಿ ನಿಸಾರ್. ರಾಜ್ಯದಲ್ಲಿ ಒಳ್ಳೆಯ ಮಳೆ ಬೀಳುವ ಮೂಲಕ ರೈತರ ಸಂತಸಕ್ಕೆ ಕಾರಣವಾಗಿದೆ.
"ನನ್ನ ತಂದೆ ನನ್ನನ್ನು ಕನ್ನಡ ಶಾಲೆಗೆ ಸೇರಿಸಿದ್ದೇ ನನಗೆ ಸ್ಪೂರ್ತಿ" ಎಂದು ನಿಸಾರ್ ಇದೇ ಸಂದರ್ಭದಲ್ಲಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com