ಕೃಷ್ಣಾನದಿ ದ್ವೀಪದಲ್ಲಿ ಸಿಲುಕಿದ ಮೂವರು ಕುರಿಗಾಹಿಗಳು: ರಕ್ಷಣೆಗಾಗಿ ಎನ್ ಡಿ ಆರ್ ಎಫ್ ಮೊರೆ

ಯಾದಗಿರಿ ಜಿಲ್ಲೆಯ ಕೃಷ್ಣಾನದಿ ದ್ವೀಪದಲ್ಲಿ ಕಳೆದ 4 ದಿನಗಳಿಂದ ಸಿಲುಕಿರುವ ಮೂವರು ಕುರಿಗಾಹಿಗಳನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೆ ಮನವಿ ...
ರಕ್ಷಣಾ ಕಾರ್ಯ ವೀಕ್ಷಿಸುತ್ತಿರುವ ಸ್ಥಳೀಯರು
ರಕ್ಷಣಾ ಕಾರ್ಯ ವೀಕ್ಷಿಸುತ್ತಿರುವ ಸ್ಥಳೀಯರು
ಬೆಳಗಾವಿ: ಯಾದಗಿರಿ ಜಿಲ್ಲೆಯ ಕೃಷ್ಣಾನದಿ ದ್ವೀಪದಲ್ಲಿ ಕಳೆದ 4 ದಿನಗಳಿಂದ ಸಿಲುಕಿರುವ ಮೂವರು ಕುರಿಗಾಹಿಗಳನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಕ್ಕೆ ಮನವಿ ಮಾಡಲಾಗಿದೆ.
ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಮೇಲಿನಗಡ್ಡಿ ಗ್ರಾಮದ ಮೂರು ಕುರಿಗಾಹಿಗಳು ಮತ್ತು ಅವರ 80 ಕುರಿಗಳು ದ್ವೀಪದಲ್ಲೇ ಸಿಲುಕಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಸ್ಲೂಸ್ ಗೇಟ್ ಗಳನ್ನು ತೆರೆಯಲಾಗಿದೆ.
ಹೈದರಾಬಾದ್ ನಿಂದ ಆಗಮಿಸಿದ 22 ಸದಸ್ಯರ ತಂಡ ಸುರಪುರದ ಮೆಲಿನಗಡ್ಡಿ ದ್ವೀಪದಲ್ಲಿ ಸಿಲುಕಿರುವವರ ರಕ್ಷಣೆಗೆ ಗುರುವಾರ ಬೆಳಗ್ಗೆ ರಕ್ಷಣಾ ಕಾರ್ಯ ಆರಂಭಿಸಿದೆ.  ಮೇಲಿನಗಡ್ಡಿ ದ್ವೀಪ ಯಾದಗಿರಿಯಿಂದ 120 ಕಿಮೀ ದೂರದಲ್ಲಿದೆ.
ಕಳೆದ ನಾಲ್ಕು ದಿನಗಳಿಂದ ದ್ವೀಪದಲ್ಲಿ ಸಿಲುಕಿರುವ ಕುರಿಗಾಹಿಗಳು ಕುರಿಯ ಹಾಲನ್ನು ಕುಡಿದು ಜೀವಿಸುತ್ತಿದ್ದಾರೆ. ಬುಧವಾರ ಕೂಡ ರಕ್ಷಣಾ ಪಡೆ ದ್ವೀಪ ತಲುಪಲು ಸಾಧ್ಯವಾಗಲಿಲ್ಲ, ಜಲಾಶಯದ ಹೊರ ಹರಿವು ಹೆಚ್ಚಿದ್ದು, ಅಣೆಕಟ್ಟಿನ ಮೇಲೆ ನೀರು ಹರಿಯುತ್ತಿದೆ.
ಇನ್ನು ಸ್ಥಳಕ್ಕಾಗಮಿಸಿರುವ ಎನ್ ಡಿಆರ್ ಎಫ್ ತಂಡ,  ಡ್ರೋಣ್ ಮುಖಾಂತರ ದ್ವೀಪದ ಸಮೀಕ್ಷೆ ನಡೆಸಿದೆ, ಕುರಿಗಾಹಿಗಳನ್ನು ರಕ್ಷಿಸಲು ಬೇರೆ ಯಾವುದಾದರೂ ಮಾರ್ಗವಿದೆಯೇ ಎಂಬ ಬಗ್ಗೆ  ಯೋಜಿಸುತ್ತಿದೆ. ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಜಿಲ್ಲಾಡಳಿತ ಯೋಜಿಸುತ್ತಿದೆ, ಆದರೆ ದೋಣಿಯ ಮುಖಾಂತ ತೆರಳುವುದು ಉತ್ತಮ ಎಂಬುದು ಎನ್ ಡಿ ಆರ್ ಎಫ್ ಅಭಿಪ್ರಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com