ಶಿವಮೊಗ್ಗ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ನಿನ್ನೆ ಶಿವಮೊಗ್ಗ ಸಮೀಪ ನಡೆದಿದೆ.
ಯುವಕರ ಗುಂಪೊಂದು ಅಬ್ಬಲಗೆರೆಯಿಂದ ಶಿವಮೊಗ್ಗ ಕಡೆಗೆ ಬೈಕಿನಲ್ಲಿ ವೇಗವಾಗಿ ಬರುತ್ತಿತ್ತು. ಕಂಡ ಕಂಡ ಹುಡುಗಿಯರನ್ನು ಚುಡಾಯಿಸುತ್ತಾ ಬರುತ್ತಿತ್ತು. ಪಾನಮತ್ತರಾಗಿದ್ದ ಈ ಯುವಕರ ಫೋಟೋವನ್ನು ನಮ್ಮ ಪತ್ರಿಕೆಯ ಛಾಯಾಗ್ರಾಹಕ ಶಿವಮೊಗ್ಗ ನಂದನ್ ತೆಗೆಯಲು ಯತ್ನಿಸಿದರು. ಆಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಮೂರು ಬೈಕ್ ನಲ್ಲಿ ಅರಚುತ್ತಾ, ಹುಡುಗಿಯರನ್ನು ಚುಡಾಯಿಸುತ್ತಾ ಆರು ಮಂದಿ ಯುವಕರ ಗುಂಪು ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಪಾನಮತ್ತರಾಗಿ ಬರುತ್ತಿದ್ದರು. ನಂದನ್ ಅವರ ದುರ್ವರ್ತನೆಯನ್ನು ಮೊಬೈಲ್ ನಲ್ಲಿ ಸೆರೆಹಿಡಿಯುವುದನ್ನು ನೋಡಿದರು. ಆಗ ಒಬ್ಬ ಬೈಕಿನಿಂದ ನೆಗೆದು ಬಂದು ನಂದನ್ ಗೆ ಹೊಡೆದಿದ್ದಾನೆ.
ನಂದನ್ ಜೊತೆ ಇದ್ದ ಮತ್ತೊಬ್ಬ ಛಾಯಾಗ್ರಾಹಕ ಯುವಕನನ್ನು ತಕ್ಷಣವೇ ಅಲ್ಲಿ ಜನ ಸೇರಿ ಯುವಕನಿಗೆ ಹೊಡೆದು ಪೊಲೀಸರಲ್ಲಿಗೆ ಕರೆದುಕೊಂಡು ಹೋದರು. ನಂತರ ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು.ಪೊಲೀಸರು ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯುವಕರೆಲ್ಲರೂ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.