ಸರ್ಕಾರಿ ಪದವಿ ಕಾಲೇಜು ಶಿಕ್ಷಕರು ತಮ್ಮ ಅರಿಯರ್ಸ್ ಗಳನ್ನು ಹಿಂತಿರುಗಿಸಿ, ಕಾಲೇಜು ಶಿಕ್ಷಣ ಇಲಾಖೆ ಸೂಚನೆ

ಸರ್ಕಾರಿ ಪದವಿ ಕಾಲೇಜುಗಳ ಶಿಕ್ಷಕರು 2006 - 2010ರ ನಡುವೆ ಪಡೆದಿದ್ದ ಅರಿಯರ್ಸ್ ಮೇಲೆ ಬೃಹತ್ ಮೊತ್ತದ ಹಣವನ್ನು ಹಿಂದಿರುಗಿಸಬೇಕಾಗಿದೆ.
ಕಾಲೇಜು ಶಿಕ್ಷಣ ಇಲಾಖೆ ಲೋಗೋ
ಕಾಲೇಜು ಶಿಕ್ಷಣ ಇಲಾಖೆ ಲೋಗೋ
ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ ಶಿಕ್ಷಕರು 2006 - 2010ರ ನಡುವೆ ಪಡೆದಿದ್ದ ಅರಿಯರ್ಸ್ ಮೇಲೆ ಬೃಹತ್ ಮೊತ್ತದ ಹಣವನ್ನು  ಹಿಂದಿರುಗಿಸಬೇಕಾಗಿದೆ. 

ಕೆಲವು ವಾರಗಳ ಹಿಂದೆ ಕಾಲೇಜು ಶಿಕ್ಷಣ ಇಲಾಖೆ ಜನವರಿ 1, 2006 ರಿಂದ ಮಾರ್ಚ್ 31, 2010 ರವರೆಗೆ. ಶಿಕ್ಷಕರು ಪಡೆದ ಮೂಲವೇತನದ ಮೇಲಿನ ಅರಿಯರ್ಸ್ ಹಿಂತಿರುಗಿಸುವಂತೆ ಸೂಚಿಸಿತ್ತು. 

ಇಲಾಖೆಯ ಈ ಕ್ರಮಕ್ಕೆ ಶಿಕ್ಷಕರಿಂದ ತೀವ್ರ ಪ್ರತಿಭಟನೆ ವ್ಯಕ್ತವಾದ ಬಳಿಕ, ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ಸುತ್ತೋಲೆ ಯನ್ನು ತಡೆಹಿಡಿಯಿತು.

ಡಿಎ  ನ ತಪ್ಪು ಲೆಕ್ಕಾಚಾರದ ಕುರಿತು ಹಣಕಾಸಿನ ಇಲಾಖೆಯಿಂದ ಬಂದ ಆಕ್ಷೇಪಣೆಗಳ ನಂತರ ಕಾಲೇಜು ಶಿಕ್ಷಣ ಇಲಾಖೆ ಈ  ಇಲಾಖೆ ಸುತ್ತೋಲೆಯನ್ನು ಹೊರಡಿಸಿತ್ತು.

"ಡಿಎ,  ಎಚ್ ಆರ್ ಎ ಮತ್ತು ಸಿ ಸಿಸಿಎ  ಗಳಲ್ಲಿ ಬಾಕಿಗಳನ್ನು ಲೆಕ್ಕ ಮಾಡಲು ಯಾವುದೇ ನಿಬಂಧನೆ ಇಲ್ಲ. ಈ ಅರಿಯರ್ಸ್ ನ್ನು ಮೂಲ ವೇತನದ ಆಧಾರದಲ್ಲಿ ಲೆಕ್ಕಹಾಕಲಾಗುತ್ತದೆ.  ಆದರೆ ಅರಿಯರ್ಸ್ ನ್ನು ನೀಡುವ ಸಂದರ್ಭದಲ್ಲಿ, ಅವರು ಮೂಲ ವೇತನದೊಂದಿಗೆ ಡಿಎ, ಎಚ್ ಆರ್ ಎ ಮತ್ತು ಸಿಸಿಎ ಗಳನ್ನೂ ಅದೇ ರೀತಿ ಲೆಕ್ಕ ಹಾಕಿದ್ದಾರೆ. ಈಗ, ನಾವು ಮತ್ತೆ ಅದನ್ನು ಹಿಂದಕ್ಕೆ ಕೇಳುತ್ತಿದ್ದೇವೆ", ಹಿರಿಯ ಅದಿಕಾರಿಯೊಬ್ಬರು ಹೇಳಿದರು.

ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಡಿಎ, ಎಚ್ ಆರ್ ಎ ಮತ್ತು ಸಿಸಿಎ ಬಾಕಿ ಪಾವತಿಸಲು ಆಯಾ ಅರಿಯರ್ಸ್ ನ್ನು ಸ್ವೀಕರಿಸಿದ ಶಿಕ್ಷಕರನ್ನು ಕೇಳಲಾಗಿತ್ತು 

"ಹಣಕಾಸು ಇಲಾಖೆಯು ಈಗ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದೆ. ಹಣವನ್ನು ಹಿಂತಿರುಗಿಸುವಂತೆ ನಮ್ಮನ್ನು ಕೇಳಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ. 

2006 - 2010ರ ನಡುವೆ ಕನಿಷ್ಠ 5,000 ಶಿಕ್ಷಕರು ಸದಸ್ಯರು `20,000 ದಿಂದ` 1.2 ಲಕ್ಷದವರೆಗೆ ಅರಿಯರ್ಸ್ ಪಡೆದಿದ್ದಾರೆ.

ತರಗತಿ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ
ರಾಜ್ಯದಲ್ಲಿನ ಎಲ್ಲಾ ಪದವಿ ಕಾಲೇಜುಗಳು ತರಗತಿ ಕೊಠಡಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಸ್ಥಾಪಿಸಬೇಕಾಗುತ್ತದೆ. ವಿದ್ಯಾರ್ಥಿಗಳ  ಸುರಕ್ಷತೆಯ ದೃಷ್ಟಿಯಿಂದ ಕಾಲೇಜು ಶಿಕ್ಷಣ ಇಲಾಖೆ ಈ ತೀರ್ಮಾನ ತೆಗೆದುಕೊಂಡಿದೆ. 

ಒಂದು ತಿಂಗಳೊಳಗೆ  ಕಾಲೇಜುಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲು ಇಲಾಖೆ  ಸೂಚನೆ ನೀಡಿದೆ. ಕರ್ನಾಟಕ ರಾಜ್ಯ ಮಹಿಳಾ  ಆಯೋಗ ನೀಡಿದ ಸಲಹೆಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಕಾಲೇಜುಗಳು ಮತ್ತು ಸಂಸ್ಥೆಗಳಿಗೆ ಈ ನಿಯಮವು ಅನ್ವಯವಾಗಿದ್ದು, ಇದನ್ನು ಆದ್ಯತೆ ಎಂದು ಪರಿಗಣಿಸಲು ಹಿರಿಯ ಅಧಿಕಾರಿಗಳು  ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಲ್ಯಾಬ್ ಗಳಲ್ಲಿ ಸಮವಸ್ತ್ರ ಕಡ್ಡಾಯ
ಕಾಲೇಜು ಶಿಕ್ಷಣ ಇಲಾಖೆಯು ಲ್ಯಾಬ್ ನಲ್ಲಿ ಕೆಲಸ ಮಾಡುವ, ಲ್ಯಾಬ್ ಗೆ ತೆರಳುವ ವಿಜ್ಞಾನ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿದೆ.

ಡಾ. ಅಜಯ್ ನಾಗಭೂಷಣ್ ಹೊರಡಿಸಿದ ಅಧಿಕೃತ ಸುತ್ತೋಲೆ ಪ್ರಕಾರ,ರಾಜ್ಯದ ಎಲ್ಲಾ ಕಾಲೇಜುಗಳೂ ಈ ನಿಯಮ ಪಾಲಿಸಬೇಕಿದೆ. ನಿಯಮ ಪಾಲನೆ ಮಾಡದೆ ಹೋದಲ್ಲಿ ಆಯಾ ಕಾಲೇಜು ಪ್ರಾಂಶುಪಾಲರು ಅದರ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com