ಮೈಸೂರು ಅರಮನೆಗೆ ತೆರಳುವ ಪ್ರವಾಸಿಗರಿಗೆ ಸಿಗಲಿದೆ ಚಿನ್ನದ ಸಿಂಹಾಸನ ನೋಡುವ ಭಾಗ್ಯ!

ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಖಾಸಗಿ ದಸರಾ ಸಭಾಂಗಣದಲ್ಲಿ ಇರಿಸಲಾದ ಒಡೆಯರ ಚಿನ್ನದ ಸಿಂಹಾಸನ ವೀಕ್ಷಣೆಗೆ ಲಭ್ಯ!
ಮೈಸೂರು ಅರಮನೆ
ಮೈಸೂರು ಅರಮನೆ
ಮೈಸೂರು: ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಖಾಸಗಿ ದಸರಾ ಸಭಾಂಗಣದಲ್ಲಿ ಇರಿಸಲಾದ ಒಡೆಯರ ಚಿನ್ನದ ಸಿಂಹಾಸನ ವೀಕ್ಷಣೆಗೆ ಲಭ್ಯ! ಇದು ಮುಂದಿನ ಐದು ದಿನಗಳ ಕಾಲ ಪ್ರವಾಸಿಗರಿಗೆ ಸಿಂಹಾಸನ ವೀಕ್ಷಣೆಗೆ ಅವಕಾಶ ಇರುತ್ತದೆ.
ಚಿನ್ನದ ಸಿಂಹಾಸನವನ್ನು ರಾಜಮನೆತನದ ಸದಸ್ಯರು ಮತ್ತು ಗಜ್ಜಾಗಲೈ ಹಳ್ಳಿಯ ಜನರು ಸೇರಿ ಪೋಲೀಸ್ ಕಮಿಷನರ್ ಡಿ ರಣದೀಪ್ ಉಪಸ್ಥಿತಿಯಲ್ಲಿ ಶುಭ ಮಹೂರ್ತದಲ್ಲಿ ಜೋಡಿಸಿದ್ದರು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮರಣದ ನಂತರ ಮೂರನೇ ವರ್ಷ ಯದುವೀರ್ ಕೃಷ್ನದತ್ತ ಚಾಮರಾಜ ಒಡೆಯರ್ ನವರಾತಿ ಉತ್ಸವದ ನಿಮಿತ್ತ ಸಿಂಹಾಸನವನ್ನು ಏರುತ್ತಿದ್ದಾರೆ.  ದೊಡ್ದಾಲಪುರ, ತುಮಕುರು ಮತ್ತು ರಾಜ್ಯದ ಉಳಿದೆಡೆಯ ಪ್ರವಾಸಿಗರು ಅರಮನೆ ಖಾಸಗಿ ದರ್ಬಾರ್ ನಲ್ಲಿ ಚಿನ್ನದ ಸಿಂಹಾಸನವನ್ನು ನೋಡುವ ಅವಕಾಶವನ್ನು ಒದಗಿಸುವಂತೆ ಅರಮನೆ ಆದಳಿತವನ್ನು ಒತ್ತಾಯಿಸಿದ್ದರು.
ಅರಮನೆ ಆಡಳಿತ ಮಂದಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ,  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪತ್ನಿ ಪ್ರಮೋದದೇವಿ ಒಡೆಯರ್ ಅವರೊಂದಿಗೆ ಮಾತುಕತೆ ನದೆಸಿ ಖಾಸಗಿ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವ ಜನರು ಚಿನ್ನದ ಸಿಂಹಾಸನವನ್ನು ವೀಕ್ಷಿಸಲು ವ್ಯವಸ್ಥೆ ಮಾಡಿದರು.
ಚಿನ್ನದ ಸಿಂಹಾಸನವನ್ನು ವೀಕ್ಷಿಸಲು ಖಾಸಗಿ ದರ್ಬಾರ್ ಸಭಾಂಗಣಕ್ಕೆ ಬರುವ ಪ್ರವಾಸಿಗರಿಗೆ ಟಿಕೆಟ್ ಗಳನ್ನು ನೀಡಲಾಗುತ್ತದೆ, ಜತೆಗೆ ವ್ರಿಸ್ಟ್ ಬ್ಯಾಂಡ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. 
"ದರ್ಬಾರ್ ಹಾಲ್ ನಲ್ಲಿ  ಪೊಲೀಸರೊಂದಿಗೆ ಅರಮನೆಯಿಂದ ಖಾಸಗಿ ಭದ್ರತಾ ಸಿಬ್ಬಂದಿಗಳನ್ನೂ ಸಹ   ನಿಯೋಜಿಸಲಾಗುತ್ತದೆ. ವಿಜಯದಶಮಿ ಕಾರ್ಯಕ್ರಮದ ಬಳಿಕ ಸಿಂಹಾಸನವನ್ನು ಬಿಡಿಸಿ ಮತ್ತೆ ಅದನ್ನು ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗುತ್ತದೆ" ವರದಿಗಾರರೊಡನೆ ಮಾತನಾಡಿದ ಸುಬ್ರಹ್ಮಣ್ಯ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com