ಫರಂಗಿಪೇಟೆಯಲ್ಲಿ ರೌಡಿಗಳ ಘರ್ಷಣೆ: ಇಬ್ಬರ ಸಾವು

ಬಂಟ್ವಾಳ ದ ಫರಂಗಿಪೇಟೆಯಲ್ಲಿ ನಿನ್ನೆ ರಾತ್ರಿ ನಡೆದ ರೌಡಿಗಳ ನಡುವಿನ ಘರ್ಷಣೆಯಲ್ಲಿ ಇಬ್ಬರು ಹತರಾಗಿದ್ದಾರೆ.
ಫರಂಗಿಪೇಟೆಯಲ್ಲಿ ರೌಡಿಗಳ ಘರ್ಷಣೆ: ಇಬ್ಬರ ಸಾವು
ಫರಂಗಿಪೇಟೆಯಲ್ಲಿ ರೌಡಿಗಳ ಘರ್ಷಣೆ: ಇಬ್ಬರ ಸಾವು
Updated on
ಮಂಗಳೂರು: ಬಂಟ್ವಾಳ ದ ಫರಂಗಿಪೇಟೆಯಲ್ಲಿ ನಿನ್ನೆ ರಾತ್ರಿ ನಡೆದ ರೌಡಿಗಳ ನಡುವಿನ ಘರ್ಷಣೆಯಲ್ಲಿ ಇಬ್ಬರು ಹತರಾಗಿದ್ದಾರೆ.
ಅಡ್ಯಾರ್ ನಿವಾಸಿ ಆಗಿದ್ದ ಝಿಯಾ ಮತ್ತು ಫಯಾಜ್ ಮೃಅತರಾಗಿದ್ದಾರೆ. ಘರ್ಷಣೆಯಲ್ಲಿ ಫಜಲ್, ಹಮೀಜ್, ಅನೀಸ್ ಮತ್ತು ಮುಷ್ತಾಕ್ ಗಾಯಗೊಂಡಿದ್ದಾರೆ.
ಫರಂಗಿಪೇಟೆ ಬಳಿ ಕಾರಿನಲ್ಲಿ ಬಂದ ಎರಡೂ ತಂಡದವರು ಪರಸ್ಪರ ವಾಹನ ಡಿಕ್ಕಿ ಹೊಡೆಸಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ನಡೆಸಿದ್ದ ತಂದದಲ್ಲಿ ಆರು ಮಂದಿ ಇದ್ದರು. ಹಲ್ಲೆ ನಡಸಿದ ನಂತರ ಇನ್ನೋವಾ ಕಾರ್ ನಲ್ಲಿ ಅವರು ಪರಾರಿ ಆಗಿದ್ದಾರೆಂದು ಬಂಟ್ವಾಳ ಗ್ರಾಮಾಂತರ ಠಾಣೆ ಪೋಲೀಸರು ತಿಳಿಸಿದ್ದಾರೆ.

ಪೂರ್ವ ದ್ವೇಷವೇ ಹಲ್ಲೆಗೆ ಕಾರಣ ಎನ್ನಲಾಗಿದ್ದು 2012ರಲ್ಲಿ ಜಿಯಾ ಗುಂಪಿನ ಕಣ್ಣೂರು ಔತ್ತ ಎನ್ನುವವನ ಕೊಲೆಯಾಗಿತ್ತು.ಇಜಾಜ್ ಕಣ್ಣೂರು ಈ ಕೊಲೆಯ ಆರೋಪಿಯಾಗಿದ್ದ. 2014ರಲ್ಲಿ ಇಜಾಜ್ ಕಣ್ಣೂರ್ ಅನ್ನು ಸೆಲೂನ್ ನ ಒಂದರಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೊಲೆಯನ್ನು ಜಿಯಾ ಅಡ್ಯಾರ್ ಗುಂಒಪಿನವರು ನಡೆಸಿದ್ದರು. ಇದೀಗ ಮತ್ತೆ ಅದೇ ದ್ವೇಷಕ್ಕೆ ಜಿಯಾ ಕೊಲೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com