ನರಗುಂದ ಇನ್ನು'ಬಯಲು ಬಹಿರ್ದೆಸೆ ಮುಕ್ತ’ ತಾಲ್ಲೂಕು ವೆಂಕಯ್ಯ ನಾಯ್ಡು ಘೋಷಣೆ

ಕರ್ನಾಟಕದ ನರಗುಂದ ತಾಲ್ಲೂಕು 'ಬಯಲು ಬಹಿರ್ದೆಸೆ ಮುಕ್ತ’ ತಾಲ್ಲೂಕಾಗಿ ಹೊರಹೊಮ್ಮಿದೆ.
ನರಗುಂದವನ್ನು 'ಬಯಲು ಬಹಿರ್ದೆಸೆ ಮುಕ್ತ’ ತಾಲ್ಲೂಕು ಎಂದು ಘೋಷಿಸಿದ ಉಪ ರಾಷ್ಟ್ರಪತಿ
ನರಗುಂದವನ್ನು 'ಬಯಲು ಬಹಿರ್ದೆಸೆ ಮುಕ್ತ’ ತಾಲ್ಲೂಕು ಎಂದು ಘೋಷಿಸಿದ ಉಪ ರಾಷ್ಟ್ರಪತಿ
ನರಗುಂದ: ಕರ್ನಾಟಕದ ನರಗುಂದ ತಾಲ್ಲೂಕು 'ಬಯಲು ಬಹಿರ್ದೆಸೆ ಮುಕ್ತ’ ತಾಲ್ಲೂಕಾಗಿ ಹೊರಹೊಮ್ಮಿದೆ. ಇಂದು ನರಗುಂದದ ಕೊಣ್ಣೂರು ಗ್ರಾಮಕ್ಕೆ ಆಗಮಿಸಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಈ ಘೋಷಣೆ ಮಾಡಿದ್ದಾರೆ. 
ಕೊಣ್ಣೂರು ಗ್ರಾಮದಲ್ಲಿ ನಡೆದಿರುವುದು "ಶೌಚಾಲಯಕ್ಕಾಗಿ ಸಮರ, ಸ್ವಚ್ಚತೆಗಾಗಿ ಜನಾಂದೋಲನ" ಎಂದು ಅವರು ಬಣ್ಣಿಸಿದ್ದರು.
ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮದ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ  ನಡೆದ ಸಮಾರಂಭದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿ "ದೇಶದ ಇತಿಹಾಸದಲ್ಲಿ ಈ ಗ್ರಾಮದ ಹೆಸರು ಚಿರಸ್ಥಾಯಿಯಾಗಲಿದೆ. ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳಬೇಕಾದರೆ  ರಾಜ್ಯದ ಅಭಿವೃದ್ಧಿ ಆಗಬೇಕು. ಯುವ ಜನರು ಗ್ರಾಮದ ಅಭಿವೃದ್ಧಿ ಕುರಿತು ಶ್ರದ್ಧೆ ವಹಿಸಬೇಕು" ಎಂದು ಕರೆ ಕೊಟ್ಟರು.
ಗ್ರಾಮದಲ್ಲಿ ತಿಪ್ಪೆ ಸಂಸ್ಕರಣ ಘಟಕ, ಶುದ್ಧ ಕುಡಿಯುವ ನೀರಿನ ಘಟಕ ವನ್ನು ನಾಯ್ಡು ಉದ್ಘಾಟಿಸಿದರು.
ಕಾರ್ಯಕ್ರಾಮದಲ್ಲಿ ಭಾಗವಹಿಸಿದ್ದ  ಗ್ರಾಮೀಣಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಶೌಚಾಲಯ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ತನ್ನ ಸಹಾಯವನ್ನು ಅನೂಚಾನಾಗಿ ಮುಂದುವರಿಸಬೇಕು ಎಂದು ಮನವಿ ಮಾಡಿದರು..
ಕಾರ್ಯಕ್ರಮದಲ್ಲಿ ಬಯಲು ಬಹಿರ್ದೆಸೆ ಮುಕ್ತ ಕಾರ್ಯಕ್ಕೆ ಶ್ರಮಿಸಿದ ತಾಲೂಕಿನ 13 ಗ್ರಾಮ ಪಂಚಾಯತ್ ಗಳ ಅದ್ಯಕ್ಷರನ್ನು ವೆಂಕಯ್ಯ ನಾಯ್ಡು ಅವರು ಸನ್ಮಾನಿಸಿ, ಗೌರವಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com