ಬಿಇಎಂಎಲ್ ನಲ್ಲಿ ಹೂಡಿಕೆ ಹಿಂತೆಗೆತ ನಿರ್ಧಾರ ಪುನರವಲೋಕಿಸುವಂತೆ ಸಿದ್ದರಾಮಯ್ಯ ಪ್ರಧಾನಿಗೆ ಪತ್ರ

ಭಾರತ್ ಅರ್ಥ್ ಮೂವರ್ಸ್ ಲಿಮಿುಟೆಡ್(ಬಿಇಎಂಎಲ್) ನಲ್ಲಿ ಹೂಡಿಕೆ ಹಿಂತೆಗೆತ ....
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಭಾರತ್ ಅರ್ಥ್ ಮೂವರ್ಸ್ ಲಿಮಿುಟೆಡ್(ಬಿಇಎಂಎಲ್) ನಲ್ಲಿ ಹೂಡಿಕೆ ಹಿಂತೆಗೆತ ನಿರ್ಧಾರವನ್ನು ಪುನರವಲೋಕಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿರುವ ಅವರು, ಹೂಡಿಕೆ ಹಿಂತೆಗೆತ ನಿರ್ಧಾರ ದೇಶದ ಭದ್ರತೆಯನ್ನು ದುರ್ಬಲಗೊಳಿಸಬಹುದು ಎಂದಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಉಳಿಸಿಕೊಳ್ಳಲು ಅದನ್ನು ಮಾರಾಟ ಮಾಡದೆ ಹೂಡಿಕೆ ಹಿಂತೆಗೆತ ನಿರ್ಧಾರವನ್ನು ವಿಮರ್ಶಿಸಿ ಅದನ್ನು ಸಾರ್ವಜನಿಕ ವಲಯ ಉದ್ದಿಮೆಯನ್ನಾಗಿ ಮುಂದುವರಿಸಿಕೊಂಡು ಹೋಗುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಪತ್ರದಲ್ಲಿ ಬರೆದಿದ್ದಾರೆ.
ಬಿಇಎಂಎಲ್ ಸಣ್ಣ ನವರತ್ನ ಸಾರ್ವಜನಿಕ ವಲಯದ ಉದ್ದಿಮೆಯಾಗಿದ್ದು ಕರ್ನಾಟಕದಾದ್ಯಂತ 9 ಉತ್ಪಾದಕ ಘಟಕಗಳನ್ನು ಹೊಂದಿದೆ. ರಕ್ಷಣಾ, ರೈಲ್ವೆ ಮತ್ತು ಗಣಿ ಕೈಗಾರಿಕೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಉತ್ಪಾದಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com